Home News Home Minister: ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆ ರಚನೆ ವಿಚಾರ – ANF ಸಿಬ್ಬಂದಿಗಳಿಂದ...

Home Minister: ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆ ರಚನೆ ವಿಚಾರ – ANF ಸಿಬ್ಬಂದಿಗಳಿಂದ ಮಾದಕ ಮಾರಾಟಗಾರರ ಮೇಲೆ ಕಣ್ಣು – ಗೃಹಸಚಿವ

Hindu neighbor gifts plot of land

Hindu neighbour gifts land to Muslim journalist

Home Minister: ರಾಜ್ಯ ಮಾತ್ರವಲ್ಲದೆ ದೇಶದಾದ್ಯಂತ ತನ್ನ ಕಬಂಧಬಾಹುಗಳನ್ನು ಚಾಚಿರುವ ಮಾದಕ ದ್ಯವ್ಯ ಮಾರಾಟ ಹಾಗೂ ಸಾಗಾಟದ ವಿರುದ್ಧ ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆ ರಚನೆಗೆ ಸರ್ಕಾರ ನಿರ್ಧರಿಸಿದೆ. .ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಗೃಹ ಸಚಿವ ಡಾ‌.ಜಿ ಪರಮೇಶ್ವರ್, ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆ ಅದೊಂದು ಟಾಸ್ಕ್ ಪೋರ್ಸ್ ಇದ್ದಂತೆ. ಎಲ್ಲೆಲ್ಲಿ ಮಾಹಿತಿ ಬರುತ್ತೆ ಅದರ ಆಧಾರದ ಮೇಲೆ ಕೆಲಸ ಮಾಡ್ತಾರೆ. ಹಾಗೆ ಬೆಂಗಳೂರು ಸಿಟಿ ಹಾಗೂ ರಾಜ್ಯದಲ್ಲಿ ಮಾದಕ ದೃವ್ಯ ನಿರ್ಮೂಲನೆಗೆ ಕೆಲಸ ಮಾಡ್ತಾರೆ ಎಂದು ಹೇಳಿದರು.

ಈಗಾಗಲೇ ಪ್ರತಿ ಠಾಣೆಯ ಎಸ್ಪಿಗೂ ನಿರ್ದಿಷ್ಟ ಆದೇಶ ಕೊಟ್ಟಿದ್ದೇವೆ. ಅದರ ಜೊತೆ ಈ ಕಾರ್ಯಪಡೆ ಸಹ ಕೈಜೋಡಿಸಿದರೆ ಇನ್ನಷ್ಟು ಬಲಿಷ್ಠವಾಗಲಿ ಎಂದು ಮಾಡಿದ್ದೇವೆ. ANF(Anti Naxal Force) ಇಂದ ಸಿಬ್ಬಂದಿಗಳನ್ನ ವರ್ಗಾವಣೆ ಮಾಡಲಾಗಿದೆ. ನಕ್ಸಲ್ ಇಲ್ಲ ಎಂದು ನಾವು ಡಿಕ್ಲೇರ್ ಮಾಡಿದ್ದೇವೆ. ಆ ಸಂಧರ್ಭದಲ್ಲಿ ANF ವಿಸರ್ಜನೆ ಮಾಡಬೇಕೆಂದು ಚರ್ಚೆ ಇತ್ತು. ಆದರೆ ಅದನ್ನ ಹಾಗೆ ಇಟ್ಟು ಸಿಬ್ಬಂದಿ ಸಂಖ್ಯೆ ಕಡಿಮೆ ಮಾಡಿದ್ದೇವೆ ಎಂದು ಗೃಹ ಸಚಿವರು ಮಾಃಇತಿ ನೀಡಿದರು.

SAF ಪೋರ್ಸ್‌ಗೆ ANF ನಿಂದ 200-250 ಮಂದಿಯನ್ನು ತೆಗೆದುಕೊಳ್ಳಲಾಗಿತ್ತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ತೆಗೆದುಕೊಂಡಿದ್ದೆವು. ಈಗ ಬೆಂಗಳೂರಿಗೂ ಸ್ಟಾಪ್ ಕಡಿಮೆ ಇತ್ತು ಎಂದು ANFನಿಂದ ಕೆಲವರನ್ನ ತೆಗೆದುಕೊಂಡಿದ್ದೇವೆ. ಅಲ್ಲಿ ಅವಶ್ಯಕತೆ ಇದ್ರೆ ಮತ್ತೆ ನಿಯೋಜನೆ ಮಾಡ್ತೇವೆ. ಸರ್ಕಾರಕ್ಕೆ ಎಲ್ಲವನ್ನ ಹ್ಯಾಂಡಲ್ ಮಾಡುವ ಸಾಮರ್ಥ್ಯ ಇದೆ. ಭದ್ರತೆಗೆ ಸಾಕಷ್ಟು ಪೊಲೀಸರನ್ನ ನೀಯೋಜನೆ ಮಾಡಿದ್ದಾರೆ. ಎಲ್ಲ ರೀತಿಯ ಕ್ರಮಕ್ಕೆ ಸೂಚನೆ ಹೋಗಿದೆ ಎಂದರು.

ಇದನ್ನು ಓದಿ: Roshni Walia: ‘ಇಷ್ಟವಾದವರ ಜೊತೆ ಮಲಗಿ ಎಂಜಾಯ್‌ ಮಾಡು, ಆದ್ರೆ ಪ್ರೊಟೆಕ್ಷನ್‌ ಬಳಸು’ – ಖ್ಯಾತ ನಟಿಗೆ ಅಮ್ಮನಿಂದಲೇ ಸಲಹೆ!!