Home News ಮತ್ತೋರ್ವ ಸಂಸದನ ಕರ್ಮಕಾಂಡ ಬಯಲು!! ಕಾಫಿ ಕುಡಿಯಲು ಮನೆಗೆ ಕರೆದು ಮುತ್ತಿಕ್ಕಲು ಮುಂದಾದ ಕಾಮುಕ

ಮತ್ತೋರ್ವ ಸಂಸದನ ಕರ್ಮಕಾಂಡ ಬಯಲು!! ಕಾಫಿ ಕುಡಿಯಲು ಮನೆಗೆ ಕರೆದು ಮುತ್ತಿಕ್ಕಲು ಮುಂದಾದ ಕಾಮುಕ

Hindu neighbor gifts plot of land

Hindu neighbour gifts land to Muslim journalist

ಸಂಸದನೋರ್ವ ತನಗೆ ಲೈಂಗಿಕ ಕಿರುಕುಳ ನೀಡಿದ್ದು, ಇದರಿಂದ ನಾನು ಅಘಾತಳಾಗಿದ್ದೇನೆ ಎನ್ನುತ್ತಾ ಹುಮಾ ಅಬೆದಿನ್ ಒಂದು ಪುಸ್ತಕವನ್ನು ಬರೆದಿದ್ದಾರೆ, ಅದರಲ್ಲಿ ಅವರು ತನಗೆ ಎದುರಾದ ಈ ಘಟನೆಯನ್ನು ಉಲ್ಲೇಖಿಸಿದ್ದಾರೆ. ಅವರು ಅಮೆರಿಕದ ಸಂಸದರ ಹೆಸರನ್ನು ಹೇಳದಿದ್ದರೂ, ಘಟನೆಯ ನಂತರ ನಾನು ಗಾಬರಿಗೊಂಡಿದ್ದೆ ಎಂದು ಪುಸ್ತಕದಲ್ಲಿ ಬರೆದಿದ್ದಾರೆ.

ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರ ಸಹಾಯಕಿ ಹುಮಾ ಅಬೆಡಿನ್ ಅವರು ಕಹಿಯಾದ ಸತ್ಯವನ್ನು ಹೊರಹಾಕಿದ್ದಾರೆ. ಸಂಸದರೊಬ್ಬರು ಒಪ್ಪಿಗೆಯಿಲ್ಲದೆ ತನಗೆ ಮುತ್ತು ಕೊಟ್ಟಿದ್ದು ಘಟನೆಯ ನಂತರ ನಾನು ಗಾಬರಿಗೊಂಡಿದ್ದೆ ಎಂದು ಪುಸ್ತಕದಲ್ಲಿ ಬರೆದಿದ್ದಾರೆ.

ಹುಮಾ ಅಬೆದಿನ್ ಬೋತ್/ಆಂಡ್: ಎ ಲೈಫ್ ಇನ್ ಮೆನಿ ವರ್ಲ್ಡ್ಸ್ ಎಂಬ ಪುಸ್ತಕವನ್ನು ಬರೆದಿದ್ದಾರೆ, ಅದರಲ್ಲಿ ಅವರು ಯುಎಸ್ ಸಂಸದರ ಕ್ರಮಗಳ ಬಗ್ಗೆ ಹೇಳಿದ್ದಾರೆ. ಸಂಸದರ ವರ್ತನೆಯಿಂದ ಹುಮಾ ಬೆಚ್ಚಿಬಿದ್ದಿದ್ದಾರೆ. ಘಟನೆ ನಡೆದ ಕೂಡಲೇ ಸಂಸದರ ಮನೆಯಿಂದ ಹುಮಾ ಹೊರ ಬಂದಿದ್ದದ್ದಾರೆ.

2000ನೇ ಇಸವಿಯಲ್ಲಿ ಈ ಘಟನೆ ನಡೆದಿದ್ದು. ಆದರೆ, ಸಂಸದರ ಹೆಸರನ್ನು ಹುಮಾ ಬಹಿರಂಗಪಡಿಸಿಲ್ಲ. ಆದರೀಗ ಹುಮಾಗೆ ಸಂಸದರೊಬ್ಬರು ನೀಡಿರುವ ಒಪ್ಪಿಗಿಲ್ಲದ ಮುತ್ತಿನ ಸುದ್ದಿ ಸದ್ದು ಮಾಡುತ್ತಿದ್ದ, ಆ ಸಂಸದ ಯಾರಾಗಿರಬಹುದು ಎಂಬ ಸಂಶಯ ಅನೇಕರನ್ನು ಕಾಡತೊಡಗಿದೆ.

ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಹಿಲರಿ ಕ್ಲಿಂಟನ್, ಹುಮಾ ಅವರನ್ನು ತುಂಬಾ ನಂಬಿದ್ದರು,
ಹುಮಾ ಹೇಳುವಂತೆ ‘ಅತ್ಯಂತ ಆಶ್ಚರ್ಯಕರ ರೀತಿಯಲ್ಲಿ ಸಂಸದರು ನನಗೆ ಮುತ್ತಿಟ್ಟರು. ಆ ಪರಿಸ್ಥಿತಿಯಲ್ಲಿ ನನಗೆ ತುಂಬಾ ಅನಾನುಕೂಲವಾಯಿತು. ಅಂತಹ ಘಟನೆಯನ್ನು ಹೇಗೆ ನಿಭಾಯಿಸಬೇಕೆಂದು ನನಗೆ ತಿಳಿದಿರಲಿಲ್ಲ’ ಎಂದು ಹೇಳಿದ್ದಾರೆ.

ನಾನು ಘಟನೆಯನ್ನು ಹತ್ತಿಕ್ಕಿದ್ದೇನೆ. ಆ ಕ್ಷಣದಲ್ಲಿ ನಾನು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗಿದ್ದೇನೆ ಎಂದು ನನಗೆ ಅನಿಸಲಿಲ್ಲ. ಆದರೆ, ಘಟನೆಯ ನಂತರ ಸಂಸದರು ಬಹಳ ಸಮಯ ಕ್ಷಮೆಯಾಚಿಸಿ ನಾನು ಚೆನ್ನಾಗಿದ್ದೇನೆ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿದರು. ನಂತರ ನಮ್ಮಿಬ್ಬರ ಸಂಬಂಧ ಮತ್ತೆ ಚೆನ್ನಾಗಿತ್ತು.ಘಟನೆ ಬಳಿಕ ತಾನು ಸಂಸದನನ್ನು ತಳ್ಳಿ ಓಡಿ ಹೋದೆ ಎಂದೂ ವಿವರಿಸಿದ್ದಾರೆ.