Home News Bengaluru : ಬೆಂಗಳೂರಲ್ಲಿ ವಲಸಿಗರ ಮತ್ತೊಂದು ಕೃತ್ಯ ಬೆಳಕಿಗೆ – ಕನ್ನಡಿಗರಿಬ್ಬರಿಗೆ ಮನಬಂದಂತೆ ಥಳಿಸಿ, ಕತ್ತು...

Bengaluru : ಬೆಂಗಳೂರಲ್ಲಿ ವಲಸಿಗರ ಮತ್ತೊಂದು ಕೃತ್ಯ ಬೆಳಕಿಗೆ – ಕನ್ನಡಿಗರಿಬ್ಬರಿಗೆ ಮನಬಂದಂತೆ ಥಳಿಸಿ, ಕತ್ತು ಹಿಸುಕಿದ ಮಹಿಳೆ

Hindu neighbor gifts plot of land

Hindu neighbour gifts land to Muslim journalist

Bengaluru : ಕನ್ನಡಿಗನ ಮೇಲೆ ಅಪವಾದ ಹೊರಿಸಿ ಮಾರಣಾಂತಿಕ ಹಲ್ಲೆ ಎಸಗಲಾಗಿದೆ ಎಂಬ ಕತೆ ಕಟ್ಟಿದ್ದ ವಿಂಗ್‌ ಕಮಾಂಡರ್‌ ಶಿಲಾದಿತ್ಯ ಬೋಸ್‌ (Wing Commander Shiladitya Bose)​ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ವಲಸಿಗರು ಕನ್ನಡಿಗರ ಮೇಲೆ ತೋರುತ್ತಿರುವ ದರ್ಪದ ಮತ್ತೊಂದು ಕೃತ್ಯ ಬೆಳಕಿಗೆ ಬಂದಿದೆ.
https://x.com/Chethan_Surya_S/status/1916042185734005188?t=1onaCcdtNJ-VKZrdXgWDhQ&s=19
ಹೌದು, ಬೆಂಗಳೂರಿನಲ್ಲಿ ವಲಸಿಗ ಮಹಿಳೆಯೊಬ್ಬಳು ಇಬ್ಬರು ಕನ್ನಡಿಗ ಯುವಕರನ್ನು ಥಳಿಸಿ, ಕುತ್ತಿಗೆ ಹಿಚುಕಿ ಮನಬಂದಂತೆ ವರ್ತಿಸಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವೈರಲ್ ಆದ ವಿಡಿಯೋದಲ್ಲಿ ಮಹಿಳೆಯೊಬ್ಬರು ನಡು ರಸ್ತೆಯಲ್ಲಿ ಯುವಕರಿಬ್ಬರನ್ನು ಮನಬಂದಂತೆ ಥಳಿಸುತ್ತಿರುವುದನ್ನು ಕಾಣಬಹುದಾಗಿದೆ.ಇನ್ನು ನೆಟ್ಟಿಗ ಹಂಚಿಕೊಂಡಿರುವ ವಿಡಿಯೊದಲ್ಲಿ ಜೀವನ್‌ ಭೀಮ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ಆರೋಪಿಸಿದ್ದು, ವಲಸಿಗರ ಮತ್ತೊಂದು ದರ್ಪದ ವಿಡಿಯೊ ಎಂದು ಬರೆದುಕೊಂಡಿದ್ದಾರೆ.

ಇನ್ನು ವಿಡಿಯೊಗಳಲ್ಲಿನ ಚಟುವಟಿಕೆಗಳನ್ನು ಗಮನಿಸಿದರೆ ವಾಹನಗಳ ಡಿಕ್ಕಿಗೆ ಸಂಬಂಧಿಸಿದ ಜಗಳ ಇರಬಹುದು ಎಂಬುದು ತಿಳಿದುಬರುತ್ತಿದ್ದು, ಘಟನೆ ಕುರಿತ ಸಂಪೂರ್ಣ ಮಾಹಿತಿ ಇನ್ನೂ ಹೊರಬರಬೇಕಿದೆ. ನೆಟ್ಟಿಗರು ಬೆಂಗಳೂರು ನಗರ ಪೊಲೀಸರ ಎಕ್ಸ್‌ ಖಾತೆಯನ್ನು ಉಲ್ಲೇಖಿಸುವ ಮೂಲಕ ಆನ್‌ಲೈನ್‌ ದೂರನ್ನು ನೀಡಿದ್ದಾರೆ.