Home News ಉಚಿತ ಟಿಕೆಟ್‌ ಘೋಷಣೆ ಮತ್ತು ಗೇಟ್ ತೆರೆಯುವುದು ತಡ ಕಾಲ್ತುಳಿತಕ್ಕೆ ಕಾರಣ: ಐಪಿಎಸ್‌ ದಯಾನಂದ್‌

ಉಚಿತ ಟಿಕೆಟ್‌ ಘೋಷಣೆ ಮತ್ತು ಗೇಟ್ ತೆರೆಯುವುದು ತಡ ಕಾಲ್ತುಳಿತಕ್ಕೆ ಕಾರಣ: ಐಪಿಎಸ್‌ ದಯಾನಂದ್‌

Hindu neighbor gifts plot of land

Hindu neighbour gifts land to Muslim journalist

Bengaluru : ಸ್ಟೇಡಿಯಂಗೆ ಉಚಿತ ಟಿಕೆಟ್‌ (Entry Free) ಎಂದು ಘೋಷಣೆ ಮಾಡಿದ್ದರಿಂದ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stampede) ನಲ್ಲಿ ಕಾಲ್ತುಳಿತ ಸಂಭವಿಸಿತು ಎಂದು ಅಮಾನತಾಗಿರುವ ಐಪಿಎಸ್‌ ಅಧಿಕಾರಿ ದಯಾನಂದ್‌ (Dayanand) ತಿಳಿಸಿದ್ದಾಗಿ ಮೂಲಗಳಿಂದ ತಿಳಿದು ಬಂದಿದೆ.

ಐಪಿಲ್ ನಲ್ಲಿ ಆರ್‌ಸಿಬಿ (RCB) ವಿಜಯೋತ್ಸವ ಸಂದರ್ಭ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಪ್ರಕರಣದ ಮ್ಯಾಜಿಸ್ಟ್ರೇಟ್ ತನಿಖೆ ನಡೆದು ಅದೀಗ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಅಲ್ಲಿ ನಡೆದ ವಿಚಾರಣೆಯ ಪ್ರಮುಖ ಭಾಗವಾಗಿ ದಯಾನಂದ್‌ ಅವರ ಹೇಳಿಕೆ ಇದೀಗ ಬಂದಿದ್ದು ಮಹತ್ವ ಪಡೆದುಕೊಂಡಿದೆ.

ಗುರುವಾರ ಮ್ಯಾಜಿಸ್ಟ್ರೇಟ್ ಮುಂದೆ ವಿಚಾರಣೆಗೆ ಹಾಜರಾದ ದಯಾನಂದ್‌ ರವರು ಅಂದು ನಡೆದ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ. ಘಟನೆ ದಿನ 21 ಗೇಟ್‌ಗಳಿಗೂ ನಾನೇ ಖುದ್ದಾಗಿ ಭೇಟಿ ನೀಡಿದ್ದೆ. ಸಂಪೂರ್ಣವಾಗಿ ಬಂದೋಬಸ್ತ್‌ ಮಾಡಿಕೊಳ್ಳಲಾಗಿತ್ತು. ಪ್ರತಿ ಬಾರಿ ಐಪಿಎಲ್ ಮ್ಯಾಚ್ ನಡೆಯುವಾಗ ಇರುವಷ್ಟು ಬಂದೋಬಸ್ತ್‌ ಮಾಡಿಕೊಳ್ಳಲಾಗಿತ್ತು. ಆದರೆ ಅಂದು ಗೇಟ್ ತೆಗೆಯಲು ತಡ ಮಾಡಿದ್ದರು. ಉಚಿತ ಟಿಕೆಟ್‌ ಎಂದು ಘೋಷಣೆ ಮಾಡಿದ್ದರಿಂದ ಇಷ್ಟೆಲ್ಲ ಅವಾಂತರ ನಡೆದಿದೆ ಎಂದು ಅವರ್ಟ್ ಹೇಳಿಕೆ ದಾಖಲಿಸಿದ್ದಾರೆ.

ವಿಜಯೋತ್ಸವ ಸಂದರ್ಭ ಕಾಲ್ತುಳಿತಕ್ಕೆ ಬಲಿಯಾದ 11 ಜನರ ಸಾವಿನ ತನಿಖೆ ಅಂತಿಮ ಹಂತಕ್ಕೆ ಬಂದಿದೆ. ಇಂದು, ಶುಕ್ರವಾರ ಇಡೀ ದಿನ ಓಪನ್ ಡೇ. ಇಂದು ತನಿಖೆ ಕೊನೆಯ ಭಾಗವಾಗಿ ಸಾರ್ವಜನಿಕರು ಭಾಗಿಯಾಗಲಿದ್ದಾರೆ. ಒಟ್ಟಾರೆ ಈ ಸಂಬಂಧ ಈವರೆಗೆ 140 ಮಂದಿ ಸಾಕ್ಷಿಗಳ ಹೇಳಿಕೆ ದಾಖಲಿಸಲಾಗಿದ್ದು ಮುಂದಿನ ವಾರ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ;Mangaluru: ಹೆಣ ಹೂತಿದ್ದ ಸ್ಥಳ ಗುರುತು ಮಾಡುವೆ: ಅಪರಿಚಿತ ವ್ಯಕ್ತಿ ಹೇಳಿಕೆ, ಎಸ್‌ಪಿ ಭೇಟಿಗೆ ಮಂಗಳೂರಿಗೆ ಬಂದ ವಕೀಲರ ತಂಡ