Home News Andra Pradesh: ಲೇಡಿಸ್ ಹಾಸ್ಟೆಲ್ ಬಾತ್ರೂಮ್ ನಲ್ಲಿ ಸೀಕ್ರೇಟ್ ಕ್ಯಾಮರಾ – ರೆಕಾರ್ಡ್ ಆದ 300...

Andra Pradesh: ಲೇಡಿಸ್ ಹಾಸ್ಟೆಲ್ ಬಾತ್ರೂಮ್ ನಲ್ಲಿ ಸೀಕ್ರೇಟ್ ಕ್ಯಾಮರಾ – ರೆಕಾರ್ಡ್ ಆದ 300 ಕ್ಕೂ ಹೆಚ್ಚು ವಿಡಿಯೋಗಳು ಬಾಯ್ಸ್ ಹಾಸ್ಟೆಲ್ನಲ್ಲಿ ಮಾರಾಟ !!

Hindu neighbor gifts plot of land

Hindu neighbour gifts land to Muslim journalist

Andhra Pradesh ಇಂಜಿನಿಯರಿಂಗ್ ಕಾಲೇಜಿನಲ್ಲಿ (Engineering College) ಮಹಿಳಾ ಹಾಸ್ಟೆಲ್ (Women’s Hostel) ವಾಶ್ ರೂಂನಲ್ಲಿ (Washroom) ರಹಸ್ಯ ಕ್ಯಾಮೆರಾ (Hidden Camera) ಪತ್ತೆಯಾಗಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.

ಹೌದು, ಕೃಷ್ಣ ಜಿಲ್ಲೆಯ ಗುಡಿವಾಡ ಮಂಡಲದ ಗುಡ್ಲವಲ್ಲೂರ್ ಎಂಜಿನಿಯರಿಂಗ್ ಕಾಲೇಜು ಹಾಸ್ಟೆಲ್ ನ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಲಾಗಿದೆ, ಇದರಿಂದ ರೆಕಾರ್ಡ್ ಆದ 300ಕ್ಕೂ ಹೆಚ್ಚ ವಿಡಿಯೋಗಳು ಬಾಯ್ಸ್ ಹಾಸ್ಟೆಲ್ ನಲ್ಲಿ ಸೋರಿಕೆಯಾಗಿದ್ದು, ಇದನ್ನು ಕೆಲವು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಅಂದಹಾಗೆ ವಿದ್ಯಾರ್ಥಿನಿಯರ ಗುಂಪೊಂದು ಗುರುವಾರ ಸಂಜೆ ತಮ್ಮ ವಾಶ್‌ರೂಮ್‌ನಲ್ಲಿ ಹಿಡನ್ ಕ್ಯಾಮೆರಾ ಇರುವುದನ್ನು ಕಂಡು ತಕ್ಷಣ ನೀಡಿದೆ. ಹೀಗಾಗಿ ವಿದ್ಯಾರ್ಥಿಗಳು ತಕ್ಷಣ ಪ್ರತಿಭಟನೆಗೆ ಇಳಿದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪೋಲೀಸರು ಇದ್ದಕ್ಕಿದ್ದಂತೆ, ಎಂಜಿನಿಯರಿಂಗ್ ಕಾಲೇಜಿನ ಹುಡುಗಿಯರು ನ್ಯಾಯಕ್ಕಾಗಿ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಿದ್ದು ಒಂದು ವಾರದ ಹಿಂದೆ ಬೆಳಕಿಗೆ ಬಂದ ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಆರೋಪಿಸಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಬಾಲಕರ ಹಾಸ್ಟೆಲ್‌ನ ವಿಜಯ್ ಕುಮಾರ್ ಎಂಬ ಬಿಟೆಕ್ ಅಂತಿಮ ವರ್ಷದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಲ್ಯಾಪ್‌ಟಾಪ್ ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ವರದಿಗಳ ಪ್ರಕಾರ, ಮಹಿಳಾ ಹಾಸ್ಟೆಲ್ ವಾಶ್‌ರೂಮ್‌ನಿಂದ 300 ಕ್ಕೂ ಹೆಚ್ಚು ಫೋಟೋಗಳು ಮತ್ತು ವೀಡಿಯೊಗಳು ಸೋರಿಕೆಯಾಗಿದ್ದು, ಕೆಲವು ವಿದ್ಯಾರ್ಥಿಗಳು ವಿಜಯ್ ಅವರಿಂದ ಈ ವೀಡಿಯೊಗಳನ್ನು ಖರೀದಿಸಿದ್ದಾರೆ ಎನ್ನಲಾಗಿದೆ.