Home News Metro Station: ಮೆಟ್ರೋ ನಿಲ್ದಾಣಗಳಲ್ಲಿ ಇನ್ನು ಮುಂದೆ ಸಿಗಲಿದೆ ಅಮುಲ್‌ ಉತ್ಪನ್ನಗಳು

Metro Station: ಮೆಟ್ರೋ ನಿಲ್ದಾಣಗಳಲ್ಲಿ ಇನ್ನು ಮುಂದೆ ಸಿಗಲಿದೆ ಅಮುಲ್‌ ಉತ್ಪನ್ನಗಳು

Hindu neighbor gifts plot of land

Hindu neighbour gifts land to Muslim journalist

Metro Station: ಮೆಟ್ರೋ ನಿಲ್ದಾಣಗಳಲ್ಲಿ ಅಮೂಲ್‌ ಉತ್ಪನ್ನಗಳ ಮಾರಾಟ ಮಳಿಗೆ ತೆರೆಯಲು ಬಿಎಂಆರ್‌ಸಿಎಲ್‌ ಮುಂದಾಗಿದ್ದು, ಇದಕ್ಕೆ ಗ್ರೀನ್‌ ಸಿಗ್ನಲ್‌ ದೊರಕಿದೆ ಎನ್ನಲಾಗಿದೆ.

ಗುಜರಾತ್‌ನ ಅಮೂಲ್‌ ಉತ್ಪಾದನಾ ಕಂಪನಿ ಜೊತೆ ಬಿಎಂಆರ್‌ಸಿಎಲ್‌ ಒಪ್ಪಂದ ಮಾಡಿದ್ದು, ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಕಿಯೋಸ್ಕ ಮಳಿಗೆ ತಲೆ ಎತ್ತಲಿದೆ. ಕಿಯೋಸ್ಕ ಎಂದರೆ ಯಂತ್ರದ ಸಹಾಯದಿಂದ ಬಳಸುವ ಉಪಕರಣ.

ಪಟ್ಟಂದೂರು ಅಗ್ರಹಾರ ಮೆಟ್ರೋ ನಿಲ್ದಾಣ, ಇಂದಿರಾನಗರ, ಬೆನ್ನಿಗಾನಹಳ್ಳಿ, ಟ್ರಿನಿಟಿ, ಬೈಯ್ಯಪ್ಪನಹಳ್ಳಿ, ಸರ್‌ ಎಂ ವಿಶ್ವೇಶ್ವರಯ್ಯ, ನ್ಯಾಷನಲ್‌ ಕಾಲೇಜು, ಬನಶಂಕರಿ ಮೆಟ್ರೋ ನಿಲ್ದಾಣ ಸೇರಿ ಹತ್ತು ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್‌ ಮಳಿಗೆ ತೆರೆಯಲಿದೆ.

ಆದರೆ ಬಿಎಂಆರ್‌ಸಿಎಲ್‌ ಈ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದ್ದು, ನಂದಿನಿ ಉತ್ಪನ್ನಗಳಿಗೆ ಉತ್ತೇಜನ ನೀಡುವ ಬದಲು ಹೊರ ರಾಜ್ಯದ ಉತ್ಪನ್ನಗಳಿಗೆ ಮಳಿಗೆ ತೆರೆಯಲು ನಿರ್ಧಾರ ಮಾಡಿರುವುದು ಸರಿಯಲ್ಲ ಎನ್ನಲಾಗಿದೆ.