Home News K S Eshwarappa: ‘ ಅಮಿತ್ ಶಾ ಹೇಳಿದ ಆ ಒಂದೇ ಒಂದು ಮಾತು ಕೇಳಿ...

K S Eshwarappa: ‘ ಅಮಿತ್ ಶಾ ಹೇಳಿದ ಆ ಒಂದೇ ಒಂದು ಮಾತು ಕೇಳಿ ಮೋಸ ಹೋದೆ’ – ಎಂದು ಮರುಗುತ್ತಿರುವ ಈಶ್ವರಪ್ಪ !! ಶಾ ಹೇಳಿದ್ದೇನು?

Hindu neighbor gifts plot of land

Hindu neighbour gifts land to Muslim journalist

K S Eshwarappa: ಲೋಕಸಭಾ ಚುನಾವಣೆ ವೇಳೆ ಮಗನಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಮುನಿಸಿಕೊಂಡು ಪಕ್ಷ ತೊರೆದು, ಪಕ್ಷೇತರವಾಗಿ ಸ್ಪರ್ಧಿಸಿದ್ದ ಈಶ್ವರಪ್ಪನವರ ಸ್ಥಿತಿ ಇದೀಗ ಅತಂತ್ರವಾಗಿದೆ. ಆಗೊಮ್ಮೆ ಈಗೊಮ್ಮೆ ಮಾಧ್ಯಮಗಳ ಮುಂದೆ ಕಾಣಿಸುವ ಈಶ್ವರಪ್ಪನವರು(K S Eshwarappa) ಯಡಿಯೂರಪ್ಪನವರ ಕುಟುಂಬದ ಮೇಲೆ ಮುಗಿಬೀಳುತ್ತಾರೆ. ಆದರೀಗ ಈಶ್ವರಪ್ಪನವರು ಅಮಿತ್ ಶಾ (Amit shah) ಹೇಳಿದ ಮಾತು ಕೇಳಿ ತಪ್ಪು ಮಾಡಿದೆ, ಮೋಸ ಹೋದೆ ಎಂದು ಬೇಸರಿಸಿಕೊಂಡಿದ್ದಾರೆ.

ಹೌದು, ಬಾಗಲಕೋಟೆ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ರಾಯಣ್ಣ ಬ್ರಿಗೇಡ್‌ಗೆ(Rayanna Brigade) ಹಿಂದುಳಿದವರು, ದಲಿತರು ಹಾಗೂ ಸಮಸ್ತ ಹಿಂದೂ ಸಮಾಜ ಬೆಂಬಲ ನೀಡಿತ್ತು. ಎಲ್ಲಾ ಪಕ್ಷದವರು ಆ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ ಇದನ್ನು ಸಹಿಸದ ಕೆಲವರು ಅಮಿತ್ ಶಾ ಅವರಲ್ಲಿ ದೂರು ನೀಡಿದ್ದರು. ಆಗ ಕೇಂದ್ರ ನಾಯಕರಾದ ಅಮಿತ್ ಶಾ ನನ್ನನ್ನು ಕರೆದು ರಾಯಣ್ಣ ಬ್ರಿಗೇಡ್ ಯಾಕೆ ಬೇಕು? ಇದೆಲ್ಲ ಬೇಡ ಅಂತ ನನಗೆ ಹೇಳಿದ್ದರು. ಹಿರಿಯರ ಮಾತನ್ನು ಕೇಳಬೇಕು ಎಂಬುದು ನನಗೆ ಮುಂಚೆಯಿಂದ ಬಂದ ಸ್ವಭಾವ. ಆದರೆ ಈಗ ಅವರ ಮಾತನ್ನು ನಾನು ಕೇಳಿದ್ದೇ ತಪ್ಪಾಯ್ತಾ ಎಂದು ಅನಿಸುತ್ತಿದೆ ಎಂದು ಬೇಸರಿಸಿಕೊಂಡಿದ್ದಾರೆ.

ಅಲ್ಲದೆ ಇಡೀ ರಾಜ್ಯದ ಜನ ಮತ್ತೆ ಬ್ರಿಗೇಡ್‌ ಕಟ್ಟುವಂತೆ ಆಗ್ರಹಿತ್ತಿದ್ದಾರೆ. ಅ. 20ರಂದು ಅದಕ್ಕೆ ಅಂತಿಮ ರೂಪ ನೀಡಲಿದ್ದೇವೆ. ಮುಂದೆ ಯಾವುದೇ ಕಾರಣಕ್ಕೂ ಹೊಸ ಬ್ರಿಗೇಡ್‌ ಮಾಡುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಒಂದು ಕುಟುಂಬದ ಹಿಡಿತದಿಂದ ಹೊರ ಬರಬೇಕು. ಹೊಂದಾಣಿಕೆ ಮತ್ತು ಕುಟುಂಬ ರಾಜಕಾರಣದ ಶುದ್ಧೀಕರಣ ಆಗುವವರೆಗೂ ಬಿಜೆಪಿಗೆ ಮರಳಿ ಹೋಗುವುದಿಲ್ಲ. ಇಂದಲ್ಲ-ನಾಳೆ ಶುದ್ಧೀಕರಣ ಆಗುತ್ತದೆ ಎಂಬ ಆಶಾಭಾವ ಇದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಅವರು ಸುದ್ದಿಗಾರರಲ್ಲಿ ಹೇಳಿದರು.