

CID: ಡಿಕೆ ಸುರೇಶ್ ಸಹೋದರಿ ಎಂದು ಹೇಳಿಕೊಂಡು ಚಿನ್ನಾಭರಣ ವಂಚನೆ ಕೇಸ್ನಲ್ಲಿ ಬಂಧಿತಳಾಗಿದ್ದ ಐಶ್ವರ್ಯ ಗೌಡ ಇದೀಗ ಜಾಮೀನು ಮೇಲೆ ಹೊರಬಂದಿದ್ದಾರೆ.
ಇದೀಗ ಐಶ್ವರ್ಯ ಮೇಲಿನ ಎಲ್ಲಾ ಆರೋಪದ ಪ್ರಕರಣಗಳನ್ನು ಸಿಐಡಿ ಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಚಿನ್ನಾಭರಣ ವಂಚನೆ ಹಾಗೂ ಹಣವನ್ನು ದುಪ್ಪಟ್ಟು ಮಾಡಿಕೊಡುವ ಈ ರೀತಿಯಾದ ಹಲವಾರು ಪ್ರಕರಣಗಳಲ್ಲಿ ಈಕೆ ಭಾಗಿಯಾಗಿದ್ದು, ಇದೀಗ ಎಲ್ಲವನ್ನು ಸಿಐಡಿ ಗೆ ವಹಿಸಲಾಗಿದೆ.













