Home News ಅಲೆರಿ ಶ್ರೀ ಸತ್ಯ ಸಾರಮಾನಿ ಕಾನದ- ಕಟ್ಟದ ಮೂಲ ಕ್ಷೇತ್ರ ಶಿಲಾನ್ಯಾಸ ಕಾರ್ಯಕ್ರಮ; ಕುಕ್ಕೇಡಿಯಲ್ಲಿ ಪೂರ್ವ...

ಅಲೆರಿ ಶ್ರೀ ಸತ್ಯ ಸಾರಮಾನಿ ಕಾನದ- ಕಟ್ಟದ ಮೂಲ ಕ್ಷೇತ್ರ ಶಿಲಾನ್ಯಾಸ ಕಾರ್ಯಕ್ರಮ; ಕುಕ್ಕೇಡಿಯಲ್ಲಿ ಪೂರ್ವ ಸಿದ್ದತಾ ಸಭೆ

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ; ಅಲೆರಿ ಶ್ರೀ ಸತ್ಯ ಸಾರಾಮಾನಿ ಕಾನದ – ಕಟದ ಮೂಲ ಕ್ಷೇತ್ರ ಆಲೇರಿ,ಮಿಜಾರು ಮೂಡಬಿದ್ರೆ ತಾಲೂಕು , ಫೆ.8ರಂದು ನಡೆಯುವಂತಹ ಶಿಲಾನ್ಯಾಸ ಕಾರ್ಯಕ್ರಮದ ಪೂರ್ವ ಸಿದ್ಧತೆ ಸಭೆಯನ್ನು ಕುಕ್ಕೇಡಿ – ನಿಟ್ಟಡೆ, ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ ಭವನದಲ್ಲಿ ಸಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ತಾಲೂಕು ಸಮಿತಿಯ ಅಧ್ಯಕ್ಷ ಚಂದ್ರಪ್ಪ ಮಾಸ್ಟರ್, ತಾಲೂಕು ಸಮಿತಿ ಉಪಾಧ್ಯಕ್ಷ ಶೇಖರ್.ವಿ.ಧರ್ಮಸ್ಥಳ, ಕೇಂದ್ರ ಸಮಿತಿಯ ಕೋಶಾಧಿಕಾರಿಯಾದ ಶೇಖರ್ ಕುಕ್ಕೇಡಿ ಭಾಗವಹಿಸಿದರು.

ಕ.ದ.ಸಂ.ಸ ಹೋಬಳಿ ಸಂಚಾಲಕರಾದ ಚರಣ್ ಕುಕ್ಕೇಡಿ ಇವರು ಸ್ವಾಗತ ಮಾಡಿದರು. ಈ ಸಂದರ್ಭದಲ್ಲಿ ಕುಕ್ಕೇಡಿ ಗ್ರಾಮ ಸಮಿತಿಯ ಪದಾಧಿಕಾರಿಗಳನ್ನು ವಿಸ್ತರಣೆ ಮಾಡಲಾಯಿತು. ಗೌರವ ಅಧ್ಯಕ್ಷರಾದ ಕೃಷ್ಣಪ್ಪ ನೆಲ್ಲಿಗುಡ್ಡೆ, ಅಧ್ಯಕ್ಷರಾಗಿ ಸಂಜೀವ ಪಿಲಿಯೂರು, ಉಪಾಧ್ಯಕ್ಷರಾಗಿ ನವೀನ್ ಕಾಂಜರಕಟ್ಟೆ, ಇನ್ನೋರ್ವ ಉಪಾಧ್ಯಕ್ಷರಾಗಿ ವಸಂತ ನಿಟ್ಟಡೆ, ಕಾರ್ಯದರ್ಶಿಯಾಗಿ ಆನಂದ ಅಮೈಪಲ್ಕೆ, ಜೊತೆ ಕಾರ್ಯದರ್ಶಿಯಾಗಿ ನಾಗಮ್ಮ ಕಾಂಜರಾಕಟ್ಟೆ, ಕೋಶಾಧಿಕಾರಿಯಾಗಿ ಪೂರ್ಣಿಮಾ ನಿಟ್ಟಡೆ, ಕಾರ್ಯಕಾರಿಣಿ ಸಮಿತಿ ಸದಸ್ಯರುಗಳಾಗಿ ಉಮೇಶ್ ಪಿಲಿಯೂರು, ಹರೀಶ್ ಕಾಂಜರಕಟ್ಟೆ, ಶೀನ ಪಿಲಿಯೂರು, ಜಗದೀಶ್ ನಡ್ಯಲಿಕೆ, ರಮೇಶ್ ಕುಕ್ಕೇಡಿ, ಚಂದ್ರಾವತಿ ಹೊಸಗುಡ್ಡೆ, ಸದಾನಂದ ನಿಟ್ಟಡೆ, ಅಂಥೋನಿ ಪಂಡಿಜೆ, ಸಂಜೀವ ನೆಲ್ಲಿಗುಡ್ಡೆ, ಸುಜಯ್ ಪರಿಂಜೆ, ಆಯ್ಕೆಯಾದರು.

ವಿಶ್ವನಾಥ ಹೊಸಗುಡ್ಡೆ, ಚಂದ್ರಪ್ಪ ಮಾಸ್ಟರ್ , ಶೇಖರ್ ವಿ ಧರ್ಮಸ್ಥಳ , ಶೇಖರ್ ಕುಕ್ಕೇಡಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕುಕ್ಕೇಡಿ ಕ.ದ.ಸಂ.ಸ ಸಂಚಾಲಕರಾದ ಹರೀಶ್ ಪಂಡಿಜೆ ಧನ್ಯವಾದ ನೀಡಿದರು.