Home News Gold Smuggling Case: ವಕೀಲರ ಮುಂದೆ ಕಣ್ಣೀರು ಹಾಕಿದ ನಟಿ ರನ್ಯಾ; ಒಂದೇ ಜೊತೆ ಬಟ್ಟೆಯಲ್ಲಿ...

Gold Smuggling Case: ವಕೀಲರ ಮುಂದೆ ಕಣ್ಣೀರು ಹಾಕಿದ ನಟಿ ರನ್ಯಾ; ಒಂದೇ ಜೊತೆ ಬಟ್ಟೆಯಲ್ಲಿ ಐದು ದಿನ ಕಳೆದ ನಟಿ!

Hindu neighbor gifts plot of land

Hindu neighbour gifts land to Muslim journalist

Actress Ranya Rao: ದುಬೈನಿಂದ ಚಿನ್ನ ಕಳ್ಳ ಸಾಗಾಣೆ ಪ್ರಕರಣದಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ಅವರಿಂದ 4.83 ಕೋಟಿ ರೂ. ಸುಂಕ ನಷ್ಟವಾಗಿದೆ ಎಂದು ಡಿಆರ್‌ಐ ಅಧಿಕಾರಿಗಳು ಹೇಳಿದ್ದಾರೆ.‌

ವಿದೇಶದಿಂದ ಚಿನ್ನ ಸಾಗಿಸುವಾಗ ಸುಂಕ ಪಾವತಿ ಮಾಡಬೇಕು. ಆದರೆ ಕಳ್ಳ ಮಾರ್ಗದಲ್ಲಿ ರನ್ಯಾ ಚಿನ್ನ ಸಾಗಾಟ ಮಾಡಿದ್ದಾರೆ.

ವಕೀಲರ ಮುಂದೆ ಕಣ್ಣಿರು ಹಾಕಿದ ರನ್ಯಾ!

ʼನಾನು ತಪ್ಪು ಮಾಡಿದ್ದೇನೆ. ನನಗೆ ಈ ಪರಿಸ್ಥಿತಿ ಎದುರಿಸಲು ಆಗುತ್ತಿಲ್ಲ. ಅರೆ ಕ್ಷಣವೂ ನಿದ್ರೆ ಮಾಡಲು ಆಗುತ್ತಿಲ್ಲ. ನನ್ನನ್ನು ಈ ಯಾತನೆಯಿಂದ ಪಾರು ಮಾಡಿʼ ಎಂದು ವಕೀಲರ ಬಳಿ ರನ್ಯಾ ಕಣ್ಣೀರಿಟ್ಟಿದ್ದಾರೆ.

ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕರೆದೊಯ್ಯುವ ಸಮಯದಲ್ಲಿ ವಕೀಲರ ಭೇಟಿಗೆ ರನ್ಯಾಗೆ ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಈ ಸಮಯದಲ್ಲಿ ತಮ್ಮ ವಕೀಲರ ಮುಂದೆ ಕಂಬನಿಗೆರೆಯುತ್ತ ವಿನಂತಿಸಿಕೊಂಡಿರುವ ಘಟನೆ ನಡೆದಿದೆ. ನಾನು ತಪ್ಪು ಮಾಡಿಬಿಟ್ಟಿದ್ದೇನೆ. ನನ್ನನ್ನು ಕಾಪಾಡಿ ಎಂದು ವಿನಂತಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳ ಬಲೆಗೆ ಬಿದ್ದ ದಿನ ಹಾಕಿದ ಬಟ್ಟೆಯಲ್ಲೇ ಐದು ದಿನ ಕಳೆದಿದ್ದಾರೆ ರನ್ಯಾ ರಾವ್.‌ ನ್ಯಾಯಾಲಯದ ವಿಚಾರಣೆ ಮುಗಿಸಿ ಮರಳುವಾಗ ಸೋದರ ರಿಷಬ್‌ ಸ್ನೇಹಿತರು ಬಟ್ಟೆಯ ಬ್ಯಾಗ್‌ ಕೊಟ್ಟು ಮರಳಿದ್ದಾರೆ. ಹಾಗಾಗಿ ರನ್ಯಾ ಅವರು ಕೋರ್ಟ್‌ಗೆ ಬಂದಾಗ ದುಬೈ ಪ್ರಯಾಣದಿಂದ ಮರಳುವಾಗ ಧರಿಸಿದ ಬಟ್ಟೆಯಲ್ಲಿಯೇ ಕಂಡು ಬಂದಿದ್ದಾರೆ ಎಂದು ತಿಳಿದು ಬಂದಿದೆ.