Home News ಮಂಚಕ್ಕಾಗಿ ಲಂಚ ತಪ್ಪೇನಿಲ್ಲ ಎಂದ ನಟಿ ರಮ್ಯಾ! ಆಕಿ ಮುಖ ನೋಡ್ರಲಾ ಕೊಂಚ!

ಮಂಚಕ್ಕಾಗಿ ಲಂಚ ತಪ್ಪೇನಿಲ್ಲ ಎಂದ ನಟಿ ರಮ್ಯಾ! ಆಕಿ ಮುಖ ನೋಡ್ರಲಾ ಕೊಂಚ!

Hindu neighbor gifts plot of land

Hindu neighbour gifts land to Muslim journalist

ಕನ್ನಡದಲ್ಲಿ ನಟಿಸಿದ ನಟಿ ಒಬ್ಬಳು ಇತ್ತೀಚಿನ ಸಂದರ್ಶನವೊಂದರಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾಹಿತಿಯನ್ನ ಬಹಿರಂಗಪಡಿಸಿದ್ದಾರೆ. ಸುಮಾರು ಎರಡು ದಶಕಗಳಿಂದ ತಮ್ಮ ವೃತ್ತಿಜೀವನದಲ್ಲಿ ಯಾವುದೇ ರೀತಿಯ ಕೆಟ್ಟ ಪರಿಸ್ಥಿತಿಯನ್ನ ನಾನು ಎದುರಿಸಿಲ್ಲ.. ಆದರೆ ಉದ್ಯಮದ ಆರಂಭಿಕ ವರ್ಷಗಳಲ್ಲಿ ಕಾಸ್ಟಿಂಗ್ ಕೌಚ್ ಅನುಭವವಾಗಿದೆ ಎಂದು ಆಕೆ ಹೇಳಿಕೊಂಡಿದ್ದಾರೆ.

ತಮ್ಮ ಹಾಟ್ ಬ್ಯೂಟಿಯ ಮೂಲಕ ಹೆಸರು ಮಾಡಿದ ಆಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಭೋಜ್‌ಪುರಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದು, ಆಕೆ ಒಟ್ಟು 250ಕ್ಕೂ ಹೆಚ್ಚು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ರಮ್ಯಾಶ್ರೀ ಬೋಲ್ಡ್ ಮತ್ತು ಬಿ-ಗ್ರೇಡ್ ಪಾತ್ರಗಳಿಂದ ಗಮನ ಸೆಳೆದಿದ ನಟಿ. ಆಕೆ ಬೇರಾರೂ ಅಲ್ಲ, ರಮ್ಯಾ ಶ್ರೀ. ಆಕೆ ತೆಲುಗು ಹುಡುಗಿಯಾಗಿದ್ದರೂ ಮೊತ್ತ ಮೊದಲು ನಟಿಸಿದ್ದು ಕನ್ನಡ ಚಿತ್ರದಲ್ಲಿ. ನಂತರ ತಮಿಳ್ ನಲ್ಲಿ ಸುಮಾರು 30 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ನಂತರ ನಾಯಕಿಯಾಗಿ ಸರಿಯಾದ ಅವಕಾಶಗಳು ಸಿಗದ ಕಾರಣ ಆಕೆ ಪೋಷಕ ಪಾತ್ರ ಕಲಾವಿದೆಯಾದರು. ಆಗಿನ ಈ ಹಾಟ್ ಬ್ಯೂಟಿ ಪ್ರಣಯ ಪಾತ್ರಗಳಲ್ಲೇ ನಂತರ ಹೆಚ್ಚಾಗಿ ನಟಿಸಿದ್ದಾಳೆ.

ಈ ನಟಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿರುವ ವಿಡಿಯೋಗಳು ಸೋಷಿಯಲ್‌ ಮಿಡಿಯಾದಲ್ಲಿ ಸಂಚಲನ ಮೂಡಿಸುತ್ತಿವೆ. ಹಾಗಾದರೆ ಏನಂದ್ರು ನಟಿ ರಮ್ಯ ಶ್ರೀ?

“ನೋಡಿ, ಚಿತ್ರರಂಗದಲ್ಲಿ ಆಫರ್‌ ನೀಡುವವರು ಹಾಗೆ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಒಬ್ಬ ತಾಯಿ ಕೂಡಾ ಮಗು ಕೇಳದೆ ಊಟ ಕೊಡುವುದಿಲ್ಲ ಅಲ್ಲವೇ? ಅದೇ ರೀತಿ ಇದು ಕೂಡ.. ಕೆಲವೊಮ್ಮೆ ಅಂತಹ ಪ್ರಸ್ತಾಪಗಳು ಆಕರ್ಷಕ ಅನ್ನಿಸುತ್ತದೆ. ಆದರೆ ಅಂತಹ ಕೆಲಸ ಮಾಡಲು ಕೆಲವರು ಧೈರ್ಯ ಮಾಡುವುದಿಲ್ಲ. ಕೆಲವರು ಒಪ್ಪಿಕೊಳ್ಳುತ್ತಾರೆ, ಮತ್ತೆ ಕೆಲವರು ಒಪ್ಪಿಕೊಳ್ಳಲ್ಲ. ಹೀಗಾಗಿ ಈ ರೀತಿಯ ವಿಷಯಗಳು ಉದ್ಯಮದಲ್ಲಿ ಸಾಮಾನ್ಯವೆಂಬಂತೆ ನಡೆಯುತ್ತವೆ ಎಂದು ನಟಿ ಹೇಳಿದ್ದಾರೆ.

ನಿಮ್ಮನ್ನು ಕೇಳುವುದು ತಪ್ಪಲ್ಲ. ಇಷ್ಟ ಇದ್ದರೆ ಒಪ್ಪಿಕೊಳ್ಳಿ. ಇಲ್ಲದಿದ್ದರೆ ತಿರಸ್ಕರಿಸಿ. ಬಲವಂತ ಮಾಡಿದರೆ ಎಚ್ಚರಿಸಿ ತಿಳಿಸಿ. ಒಂದು ವೇಳೆ ನಿಮ್ಮ ಮೇಲೆ ಏನಾದರೂ ಅತ್ಯಾಚಾರ ನಡೆದರೆ ಧೈರ್ಯವಾಗಿ ಪೊಲೀಸರಿಗೆ ದೂರು ನೀಡಿ. ಕೆಲವರು ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಮಂಚ ಹತ್ತುತ್ತಾರೆ. ಅದು ತಪ್ಪೇನಲ್ಲ, ಆದರೆ ಬಲವಂತದಿಂದ ಯಾವುದೂ ಆಗಬಾರದು. ಪ್ರತಿಯೊಬ್ಬರಿಗೂ ಇದರ ಬಗ್ಗೆ ಪ್ರತಿಭಟಿಸುವ ಹಕ್ಕಿರುತ್ತದೆ. ಹೀಗಾಗಿ ಧೈರ್ಯವಾಗಿಯೇ ಎಲ್ಲವನ್ನೂ ಎದುರಿಸಬೇಕೆಂದು ರಮ್ಯಾ ಶ್ರೀ ಸಲಹೆ ನೀಡಿದ್ದಾರೆ. ಆಕೆಯ ಮಾತು ಈಗ ಚರ್ಚೆಗೆ ಅವಕಾಶ ಕಲ್ಪಿಸಿದೆ.