Home News Actor Siddhartha: ಶಿವರಾಜ್ ಕುಮಾರ್ ಅವರ ಕ್ಷಮೆ ನನಗೆ ಬೇಕಿಲ್ಲ, ನಾನದನ್ನು ಸ್ವೀಕರಿಸುವುದೂ ಇಲ್ಲ- ಅಚ್ಚರಿ...

Actor Siddhartha: ಶಿವರಾಜ್ ಕುಮಾರ್ ಅವರ ಕ್ಷಮೆ ನನಗೆ ಬೇಕಿಲ್ಲ, ನಾನದನ್ನು ಸ್ವೀಕರಿಸುವುದೂ ಇಲ್ಲ- ಅಚ್ಚರಿ ಹೇಳಿಕೆ ನೀಡಿದ ತಮಿಳು ನಟ ಸಿದ್ಧಾರ್ಥ್ !

Actor Siddhartha

Hindu neighbor gifts plot of land

Hindu neighbour gifts land to Muslim journalist

Actor Siddhartha: ತಮಿಳಿನ ನಟ ಸಿದ್ದಾರ್ಥ (Actor Siddhartha) ತಮ್ಮ ಸಿನಿಮಾದ ಪತ್ರಿಕಾಗೋಷ್ಠಿಗಾಗಿ ಬೆಂಗಳೂರಿಗೆ ಬಂದಾಗ ಕನ್ನಡಪರ ಕೆಲ ಹೋರಾಟಗಾರರು ಅವರನ್ನು ತಡೆದಿದ್ದರು. ಕಾವೇರಿ (Cauvery) ಹೋರಾಟ ನಡೆಯುತ್ತಿರುವಾಗ ತಮಿಳು ಚಿತ್ರವೊಂದರ ಪತ್ರಿಕಾಗೋಷ್ಠಿಯನ್ನು ನಡೆಸಬಾರದು ಎಂದು ಮನವಿ ಮಾಡಿಕೊಂಡಿದ್ದರು. ಆ ವಿಡಿಯೋ ವೈರಲ್ ಆಗಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಕನ್ನಡ ನಟ ಶಿವರಾಜ್ ಕುಮಾರ್ ಮತ್ತು ಪ್ರಕಾಶ್ ರಾಜ್ ಇಬ್ಬರೂ ಸಿದ್ದಾರ್ಥಗೆ ಕ್ಷಮೆ ಕೇಳಿದ್ದರು. ಸದ್ಯ ಈ ಕುರಿತು ಸಿದ್ದಾರ್ಥ (Siddhartha) ಮಾತನಾಡಿದ್ದು, ಶಿವರಾಜ್ ಕುಮಾರ್ ಅವರ ಕ್ಷಮೆ ನನಗೆ ಬೇಕಿಲ್ಲ, ನಾನದನ್ನು ಸ್ವೀಕರಿಸುವುದೂ ಇಲ್ಲ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಸಿದ್ದಾರ್ಥ,
”ಶಿವರಾಜ್ ಕುಮಾರ್ (Shivraj Kumar) ಮತ್ತು ಪ್ರಕಾಶ್ ರಾಜ್ (Prakash Raj)ಹಿರಿಯ ಕಲಾವಿದರು. ಅವರಿಗೂ ಮತ್ತು ನಡೆದ ಘಟನೆಗೂ ಸಂಬಂಧವೇ ಇರಲಿಲ್ಲ. ಆದರೂ, ಕಲಾವಿದರ ಮೇಲಿನ ಗೌರವಕ್ಕಾಗಿ ಅವರು ನನಗೆ ಕ್ಷಮೆ ಕೇಳಿದ್ದಾರೆ. ಅವರು ಮಾಡದೇ ಇರುವ ತಪ್ಪಿಗೆ ಕ್ಷಮೆ ಕೇಳಬಾರದಿತ್ತು. ಹಾಗಾಗಿ ನಾನು ಅವರ ಕ್ಷಮೆಯನ್ನು ಸ್ವೀಕರಿಸುವುದಿಲ್ಲ. ಆ ಇಬ್ಬರ ಕಲಾವಿದರ ಮೇಲೆ ನನಗೆ ಇನ್ನೂ ಗೌರವ ಹೆಚ್ಚಾಯಿತು” ಎಂದಿದ್ದಾರೆ.

 

ಇದನ್ನು ಓದಿ: Permanent Disability: ಹಲ್ಲು ನೋವಿಗೆ ಚಿಕಿತ್ಸೆ ಪಡೆದಿದಕ್ಕೆ ಅಂಗವೈಕಲ್ಯ- ಡಾಕ್ಟರ್ ಜೇಬಿಗೆ ಬಿತ್ತು 9 ಲಕ್ಷ ಕತ್ತರಿ