Home News Darshan: ನಟ ದರ್ಶನ್ ಪ್ರೀತಿಯಿಂದ ಸಾಕಿದ್ದ ಕುದುರೆಯನ್ನು ಮಾರಾಟಕ್ಕಿಟ್ಟ ಕುಟುಂಬಸ್ಥರು !! ದಿಢೀರ್ ನಿರ್ಧಾರಕ್ಕೆ ಕಾರಣವೇನು?

Darshan: ನಟ ದರ್ಶನ್ ಪ್ರೀತಿಯಿಂದ ಸಾಕಿದ್ದ ಕುದುರೆಯನ್ನು ಮಾರಾಟಕ್ಕಿಟ್ಟ ಕುಟುಂಬಸ್ಥರು !! ದಿಢೀರ್ ನಿರ್ಧಾರಕ್ಕೆ ಕಾರಣವೇನು?

Hindu neighbor gifts plot of land

Hindu neighbour gifts land to Muslim journalist

Darshan : ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿ ಕಂಬಿ ಎಣಿಸುತ್ತಿದ್ದಾರೆ. ದರ್ಶನ್ ಅವರ ಸ್ಥಿತಿಯನ್ನು ಕಂಡು ಅಭಿಮಾನಿಗಳಾದಿಯಾಗಿ ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ. ಇದರ ನಡುವೆ ದರ್ಶನ್ ಅವರು ಪ್ರೀತಿಯಿಂದ ಸಾಕಿದ್ದ ಕುದುರೆಯನ್ನು ಅವರ ಕುಟುಂಬಸ್ಥರು ಮಾರಾಟಕ್ಕಿಟ್ಟಿದ್ದಾರೆ ಎನ್ನಲಾಗಿದೆ.

ಹೌದು, ಮೈಸೂರಿನಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ವೈವಿಧ್ಯಮಯ ಪ್ರಾಣಿ-ಪಕ್ಷಿಗಳನ್ನು ಅವರು ಸಾಕಿರುವುದು ಗೊತ್ತೇ ಇದೆ. ಆದರೆ ಇಷ್ಟೆಲ್ಲ ಒಳ್ಳೆಯ ಕಾರ್ಯ ಮಾಡುತ್ತಿದ್ದ ದರ್ಶನವರು ಒಂದು ಹೆಣ್ಣು ಹೆಂಗಸಿನ ಹಿಂದೆ ಬಿದ್ದು ಕೊಲೆಯ ಆರೋಪದಡಿ ಜೈಲು ಪಾಲಾಗಿದ್ದಾರೆ. ಈ ನೋವಿನಲ್ಲೇ ಅವರ ಕುಟುಂಬ ಕೂಡ ದಿನಗಳನ್ನು ದೂಡುತ್ತಿದೆ. ಇದೀಗ ದರ್ಶನ್‌ ಪ್ರೀತಿಯಿಂದ ಸಾಕಿದ್ದ ಕುದುರೆಗಳನ್ನು ಮಾರಾಟ ಮಾಡಲು ಅವರ ಕುಟುಂಬಸ್ಥರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ದರ್ಶನ್‌ ಅವರು ಪ್ರಾಣವೇ ಇಟ್ಟುಕೊಂಡಿದ್ದ ಈ ಕುದುರೆಗಳನ್ನು ದಿಢೀರ್‌ ಮಾರಾಟ ಮಾಡಲು ಕಾರಣವೇನು ಎಂದು ಅವರ ಅಭಿಮಾನಿಗಳು ಶಾಕ್‌ಗೆ ಒಳಗಾಗಿದ್ದರು. ಇದಕ್ಕೆ ಅವರ ಮ್ಯಾನೇಜರ್‌ ಸ್ಪಷ್ಟನೆ ನೀಡಿದ್ದಾರೆ.

ಅಂದಹಾಗೆ ದರ್ಶನ್‌ ಫಾರ್ಮ್‌ಹೌಸ್‌ನಲ್ಲಿರುವ ಬೋರ್ಡ್‌ನಲ್ಲಿಯೂ ಕುದುರೆ ಮಾರಾಟಕ್ಕಿದೆ ಎಂದು ಜಾಹೀರಾತು ನೀಡಲಾಗಿದೆ. ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಈ ಕುರಿತಾಗಿ ಮಾತನಾಡಿದ ಅವರ ಮ್ಯಾನೇಜರ್ ಕೆಲ ವರ್ಷಗಳ ಹಿಂದೆ ತಮ್ಮ ನೆಚ್ಚಿನ ಕುದುರೆ ಸ್ಯಾಂಡಿ ಮೃತಪಟ್ಟಾಗ ದರ್ಶನ್‌ ನೊಂದಿದ್ದರು.ಅದರ ನೆನಪಿಗಾಗಿ ಕುದುರೆಯ ಟ್ಯಾಟೋ ಕೂಡ ಹಾಕಿಸಿಕೊಂಡಿದ್ದರು. ಈಗ ಕುದುರೆ ಮಾರಾಟಕ್ಕಿಟ್ಟಿರುವ ಬಗ್ಗೆ ಮಾತನಾಡಿರುವ ಮ್ಯಾನೇಜರ್‌, ದರ್ಶನ್‌ ಸರ್‌ ತೊಂದರೆಯಲ್ಲಿರುವ ಕಾರಣಕ್ಕೆ ಕುದುರೆ ಮಾರಾಟಕ್ಕಿಟ್ಟಿದ್ದಾರೆ ಎಂದೆಲ್ಲ ಸುದ್ದಿ ಹರಿದಾಡುತ್ತಿದೆ.ಇದು ನಮ್ಮ ಕೆಟ್ಟ ಸಮಯ, ಏನೂ ಮಾಡೋಕಾಗಲ್ಲ. ಒಳ್ಳೆಯವರಿಗೆ ಒಳ್ಳೆಯದೇ ನಡೆಯುತ್ತೆ ಎಂದಿದ್ದಾರೆ.

ಇದನ್ನೂ ಓದಿ;Nobel Prize : ನುಚ್ಚು ನೂರಾದ ಟ್ರಂಪ್ ಕನಸು – ವೆನೆಜುವೆಲಾದ ಮರಿಯಾ ಕೊರಿನಾ ಮಚಾಡೊ ಮೂಡೆಗೀರಿದ ನೊಬೆಲ್ ಶಾಂತಿ ಪ್ರಶಸ್ತಿ!!