Home News Darshan Case: ನಟ ದರ್ಶನ್ ಗೆ ಗಲ್ಲು ಶಿಕ್ಷೆ ವಿಧಿಸಿ -ಕೋರ್ಟ್ ನಲ್ಲಿ ದರ್ಶನ್ ಪರ...

Darshan Case: ನಟ ದರ್ಶನ್ ಗೆ ಗಲ್ಲು ಶಿಕ್ಷೆ ವಿಧಿಸಿ -ಕೋರ್ಟ್ ನಲ್ಲಿ ದರ್ಶನ್ ಪರ ವಕೀಲರಿಂದಲೇ ಅಚ್ಚರಿ ಹೇಳಿಕೆ !!

Hindu neighbor gifts plot of land

Hindu neighbour gifts land to Muslim journalist

Darshan Case: ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಹಾಸಿಗೆ, ದಿಂಬು, ಕನ್ನಡ, ಬಾಚಣಿಗೆ ಸೇರಿ ಇನ್ನೂ ಕೆಲವು ಸವಲತ್ತುಗಳಿಗಾಗಿ ಬೇಡಿಕೆ ಇಟ್ಟ ವಿಚಾರವಾಗಿ ಒಂದು ತಿಂಗಳಿನಿಂದ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಲೇ ಇದೆ. ಆದರೆ ಈ ವಾದ ವಿವಾದ ಇನ್ನೂ ಮುಗಿಯದ ಹಂತವನ್ನು ತಲುಪಿದೆ. ಈ ವೇಳೆ ದರ್ಶನ್ ಪರ ವಕೀಲರು ನಟ ದರ್ಶನ್ ಗೆ ಮಾಡಿದ್ದೆ ಮರಣದಂಡನೆ ಶಿಕ್ಷೆಯನ್ನು ವಿಧಿಸಿ ಎಂದು ಅಬ್ಬರಿಸಿದ್ದಾರೆ.

ಹೌದು, ವಿಚಾರಣೆ ಮುಗಿಯದ ಕಾರಣ ಕೋಪಗೊಂಡಿರುವ ದರ್ಶನ್ ಪರ ವಕೀಲ ಸುನಿಲ್ ಅವರು ಆವೇಶಭರಿತವಾಗಿ ವಾದ ಮಂಡಿಸಿದ್ದು ‘ನಾಡಿದ್ದೆ ದರ್ಶನ್​​ಗೆ ಗಲ್ಲು ಶಿಕ್ಷೆ ಬೇಕಾದರೆ ಕೊಡಿ’ ಎಂದು ಸಿಟ್ಟಿನಲ್ಲಿ ಹೇಳಿದ್ದಾರೆ. ಎರಡುವರೆ ತಿಂಗಳು ಸಮಯ ಹಾಳಾಗಿದೆ. ಇನ್ನು ಎಷ್ಟು ಸಮಯ ಕಾಯುವುದು? ನಾವು ಜೈಲಿನಲ್ಲಿ ಇರಲು ಸಿದ್ದವಿದ್ದೇವೆ‌. ಸುಪ್ರೀಂಕೋರ್ಟ್ ಈ ಪ್ರಕರಣ ದಲ್ಲಿ ನಿಗಾ ಇಟ್ಟಿದೆ. ಟ್ರಯಲ್ ಯಾವ ರೀತಿ ನಡೆಸಬೇಕು ಎಂಬುದರ ಬಗ್ಗೆ ನಾನು ಆದೇಶಗಳನ್ನು ನೀಡುತ್ತೇನೆ. ನಾಳೆನೇ ಟ್ರಯಲ್ ಫಿಕ್ಸ್ ಮಾಡಿ, ನಾಳೆ ತೀರ್ಪು ಕೊಡಿ. ನಾಡಿದ್ದು ಶಿಕ್ಷೆ ಕೊಟ್ಟು ಮರಣ ದಂಡನೆ ಕೋಡಿ ನಾವು ಸಿದ್ದ. ಎಲ್ಲಾ ಆರೋಪಿಗಳಿಗೂ ಸೌಲಭ್ಯ ಕೇಳುವ ಅಧಿಕಾರ ಇದೆ. ಇದು ಮೂಲಭೂತ ಹಕ್ಕುಗಳು ಎಂದಿದ್ದಾರೆ.

ಸರ್ಕಾರಿ ವಕೀಲರ ವಾದ ಮಂಡನೆ ಬಳಿಕ ಮತ್ತೆ ವಾದ ಮಂಡಿಸಿದ ದರ್ಶನ್ ಪರ ವಕೀಲ ಸುನಿಲ್, ‘ಆರೋಪಿಗಳು ತಮ್ಮ ಹಕ್ಕಿಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ನ್ಯಾಯಸಮ್ಮತ ವಿಚಾರಣೆ ನಡೆಯಬೇಕೆಂಬುದು ನಿಯಮ. ಅದಕ್ಕಾಗಿ ಮೂರು ನಾಲ್ಕು ವರ್ಷ ಜೈಲಿನಲ್ಲಿರಲು ಹಿಂಜರಿಯುವುದಿಲ್ಲ. ನಾಳೆಯೇ ದೋಷಾರೋಪ ನಿಗದಿ ಮಾಡಿ, ನಾಡಿದ್ದೇ ಗಲ್ಲುಶಿಕ್ಷೆ ಕೊಡಿ. ಶೀಘ್ರ ವಿಚಾರಣೆಗೆ ನಮ್ಮ ಆಕ್ಷೇಪವಿಲ್ಲ’ ಎಂದು ವಕೀಲ ಸುನೀಲ್‌ ಆವೇಶಭರಿತವಾಗಿ ವಾದಿಸಿದ್ದಾರೆ.

ಇದಕ್ಕೆ ಪ್ರಾಸಿಕ್ಯೂಷನ್ ಪರ ವಕೀಲ ಸಚಿನ್ ವಾದ ಮಂಡಿಸಿದ್ದು ಪ್ರತ್ಯಕ್ಷದರ್ಶಿ ಹೇಳಿಕೆಯನ್ನು ಸರಿಯಾದ ಸಮಯಕ್ಕೆ ದಾಖಲಿಸಲಾಗಿದೆ. ಅದಲ್ಲದೇ 164 ಸ್ಟೇಟ್ಮೆಂಟ್ ನಲ್ಲಿ ತಪ್ಪೋಪಿಗೆ ಸಹ ಇದೆ. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಂದೀಶ್ ಪಾತ್ರದ ಬಗ್ಗೆ ವಾದ ಮಾಡಿದ್ದಾರೆ. ಅಲ್ಲದೆ ಹಲ್ಲೆ ನಡೆಯುವಾಗ ರೇಣುಕಾಸ್ವಾಮಿಯನ್ನು ಹಿಡಿದುಕೊಂಡಿದ್ದವರಲ್ಲಿ ನಂದೀಶ್‌ ಕೂಡ ಒಬ್ಬ ಎಂದು ಚಾರ್ಜ್ ಶೀಟಿನಲ್ಲಿರುವ ಅಂಶವನ್ನು ಸಚಿನ್‌ ಉಲ್ಲೇಖಿಸಿದ್ದಾರೆ.