Home News Karnataka Gvt: 2025-26ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ – ಈ ವರ್ಷ ಶಾಲೆಗಳಿಗೆ...

Karnataka Gvt: 2025-26ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ – ಈ ವರ್ಷ ಶಾಲೆಗಳಿಗೆ 100ಕ್ಕೂ ಹೆಚ್ಚು ದಿನ ರಜೆ

Hindu neighbor gifts plot of land

Hindu neighbour gifts land to Muslim journalist

Karnataka Gvt : ರಾಜ್ಯದ ಎಲ್ಲ ಸರಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ರಾಜ್ಯ ಸರ್ಕಾರವು 2025-26ನೆ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಮಾಡಿದೆ. ಎ.11ರಿಂದ ಬೇಸಿಗೆ ರಜೆ ಆರಂಭವಾಗಲಿದ್ದು, ಮೇ 25ರಿಂದ ಶಾಲೆಗಳು ಪುನಾರಾರಂಭಗೊಳ್ಳಲಿವೆ.

2025-26ನೆ ಸಾಲಿನ ಶಾಲಾ ಕರ್ತವ್ಯದ ದಿನಗಳ ಮೊದಲನೆ ಅವಧಿಯು ಮೇ 29ರಿಂದ ಸೆ.19ರವರೆಗೆ ಇರಲಿದೆ. ದಸರಾ ರಜೆ ಸೆ.20ರಿಂದ ಅ.7ರವರೆಗೆ ಇರುತ್ತದೆ. ಶಾಲಾ ಕರ್ತವ್ಯದ ದಿನಗಳ ಎರಡನೆ ಅವಧಿಯು ಅ.8ರಿಂದ 2026ರ ಎ.10ರವರೆಗೆ ಇರಲಿದೆ. ಬೇಸಿಗೆ ರಜೆಯು ಎ.11ರಿಂದ ಎ.28ರವರೆಗೆ ಇರುತ್ತದೆ. ಎ.14ರಂದು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಆಚರಿಸಬೇಕು ಎಂದು ಶಿಕ್ಷಣ ಇಲಾಖೆ ಹೇಳಿದೆ.

ವಾರ್ಷಿಕವಾಗಿ ಒಟ್ಟು 365 ದಿನಗಳು ಲಭ್ಯವಿದ್ದು, ಇದರಲ್ಲಿ 123 ದಿನಗಳು ರಜೆಯ ದಿನಗಳಾಗಿರುತ್ತವೆ. ಉಳಿದ 242 ದಿನಗಳು ಶಾಲೆ ನಡೆಯಲಿವೆ. 242 ದಿನಗಳಲ್ಲಿ ಪರೀಕ್ಷೆ ಮತ್ತು ಮೌಲ್ಯಾಂಕನ ಕಾರ್ಯಕ್ಕಾಗಿ 26 ದಿನಗಳನ್ನು ನಿಗದಿ ಮಾಡಲಾಗಿದೆ. 22 ದಿನಗಳನ್ನು ಪಠ್ಯೇತರ ಚಟುವಟಿಕೆಗಳ/ಪಠ್ಯ ಚಟುವಟಿಕೆಗಳ, ಸ್ಪರ್ಧೆಗಳ ನಿರ್ವಹಣಾ ಕಾರ್ಯಕ್ಕಾಗಿ 22 ದಿನಗಳಿರಲಿವೆ. ಮೌಲ್ಯಮಾಪನ ಮತ್ತು ಲಿತಾಂಶ ವಿಶ್ಲೇಷಣೆ ಕಾರ್ಯಕ್ಕಾಗಿ 10 ದಿನ, ಶಾಲಾ ಸ್ಥಳೀಯ ರಜೆಗಳಿಗೆ 04 ದಿನ ಮತ್ತು ಬೋಧನಾ ಕಲಿಕಾ ಪ್ರಕ್ರಿಯೆಗೆ ಉಳಿಯುವ ಕರ್ತವ್ಯಕ್ಕೆ 178 ದಿನಗಳನ್ನು ಮೀಸಲಿಡಲಾಗಿದೆ.

ಇನ್ನು ಎ.11ರಿಂದ ಎ.28ರವರೆಗೆ ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆಯಾಗಿದೆ. ಆದ್ದರಿಂದ ಶಾಲಾ ಮುಖ್ಯಸ್ಥರು ಶಾಲಾ ದಾಸ್ತಾನು ಮತ್ತು ದಾಖಲೆಗಳನ್ನು ಹಾಗೂ ಅಕ್ಷರ ದಾಸೋಹ ಕಾರ್ಯಕ್ರಮದಡಿ ಮಧ್ಯಾಹ್ನದ ಬಿಸಿಯೂಟದ ಸಾಮಗ್ರಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಬೇಕು. ರಜಾ ಅವಧಿಯಲ್ಲಿ ಬರಪೀಡಿತ ತಾಲ್ಲೂಕುಗಳ ಮಕ್ಕಳಿಗೆ ಬಿಸಿಯೂಟ ನೀಡುವ ಕುರಿತು ನಿರ್ದೇಶನಾಲಯದಿಂದ ನೀಡುವ ಸೂಚನೆಗಳಂತೆ ಕ್ರಮವಹಿಸಬೇಕು. ಒಂದು ವೇಳೆ ಈ ಅವಧಿಯಲ್ಲಿ ಚುನಾವಣಾ ಕಾರ್ಯಕ್ಕೆ ಮತಗಟ್ಟೆ ಕೇಂದ್ರಗಳನ್ನಾಗಿ ಶಾಲೆಗಳನ್ನು ಬಳಸಲು ಸಂಬಂಧಿಸಿದ ಪ್ರಾಧಿಕಾರ ಕೋರಿದ್ದಲ್ಲಿ ಸಹಕರಿಸಬೇಕು ಎಂದು ಶಿಕ್ಷಣ ಇಲಾಖೆ ಹೇಳಿದೆ.