Home News Mumbai: ಸ್ನಾನ ಮಾಡಿ, ಬರೀ ಟವೆಲ್ ಸುತ್ತಿಕೊಂಡು ರಸ್ತೆಗಿಳಿದ ಯುವತಿ – ಸಡನ್ ಆಗಿ ಜಾರಿಸಿ...

Mumbai: ಸ್ನಾನ ಮಾಡಿ, ಬರೀ ಟವೆಲ್ ಸುತ್ತಿಕೊಂಡು ರಸ್ತೆಗಿಳಿದ ಯುವತಿ – ಸಡನ್ ಆಗಿ ಜಾರಿಸಿ ಒಳಗಿದ್ದನ್ನು ತೋರಿಸುತ್ತಿದ್ದಂತೆ ಹೌಹಾರಿದ ಜನ !!

Mumbai

Hindu neighbor gifts plot of land

Hindu neighbour gifts land to Muslim journalist

Mumbai: ಜನರು ಫೇಮಸ್ ಆಗಲು, ವೈರಲ್ ಆಗಲು ಏನೆಲ್ಲಾ ಮಾಡ್ತಾರೆ ಅಲ್ವಾ? ಕೆಲವೊಂದು ತುಂಬಾ ಡಿಫ್ರೆಂಟ್ ಅನಿಸಿದ್ರೆ, ಇನ್ನು ಕೆಲವು ಯಪ್ಪಾ.. ಏನಿದು ಅನ್ನುವಷ್ಟರ ಮಟ್ಟಿಗೆ ವಿಚಿತ್ರ ಅನಿಸುತ್ತದೆ. ಅಂತೆಯೇ ಇದೀಗ ಮುಂಬೈ ನಗರದೊಲ್ಲೆಂದೆಡೆ ಯುವತಿ ಮಾಡಿರುವ ವಿಚಿತ್ರ ವರ್ತನೆ ಕಂಡು ನೀವೂ ಬೆರಗಾಗ್ತೀರಾ!!

ಹೌದು, ಮುಂಬೈನಲ್ಲಿ(Mumbai) ಇತ್ತೀಚೆಗೆ ನಾಟಕೀಯ ಘಟನೆಯೊಂದು ನಡೆದಿದೆ. ಅದೇನೆಂದರೆ ಯುವತಿಯೊಬ್ಬಳು ಕೇವಲ ಟವೆಲ್ ಕಟ್ಟಿಕೊಂಡು ಜನನಿಬಿಡ ರಸ್ತೆಗೆ ಇಳಿದಿದ್ದು, ಆಕೆಯ ಈ ಬಿಂದಾಸ್ ವರ್ತನೆಯಿಂದ ದಾರಿಹೋಕರು ಬೆರಗಾಗಿದ್ದಾರೆ. ಅಷ್ಟೇ ಅಲ್ಲ, ಹೀಗೆ ನಡೆದುಕೊಂಡು ಹೋಗುತ್ತಿದ್ದ ಆಕೆ ಬೇಕೆಂದೇ ಒಮ್ಮೆ ಟವೆಲ್ ಜಾರಿಸಿದಾಗ ಹೌಹಾರಿದ್ದಾರೆ.

ಯಸ್, ವೈರಲ್ ಆದ ವಿಡಿಯೋದಲ್ಲಿ ಯುವತಿಯು ಆಗಷ್ಟೇ ಸ್ನಾನ ಮುಗಿಸಿಕೊಂಡು ಬಂದಂತಿದ್ದ ಆಕೆ ಶೂ ಧರಿಸಿ ತನ್ನ ದೇಹಕ್ಕೆ ಟವೆಲ್ ಸುತ್ತಿಕೊಂಡು ರಸ್ತೆಗೆ ಇಳಿದಿದ್ದಾರೆ. ಜನನಿಬಿಡ ರಸ್ತೆಯಲ್ಲಿ ಕೇವಲ ಟವೆಲ್(Tavel) ಧರಿಸಿ ಹೋಗುತ್ತಿದ್ದ ಆಕೆಯನ್ನು ಜನ ಅಚ್ಚರಿಯಿಂದ ನೋಡಿದ್ದಾರೆ. ಇದ್ಯಾವುದಕ್ಕೂ ಡೋಂಟ್ ಕೇರ್ ಎಂಬಂತೆ ನಡೆದುಕೊಂಡು ಹೋಗುತ್ತಿದ್ದ ಆಕೆ ಒಮ್ಮೆ ಬೇಕೆಂದೇ ಟವೆಲ್ ಜಾರಿಸಿದ್ದು, ಇದರಿಂದ ಸುತ್ತಮುತ್ತಲು ಇದ್ದವರು ಒಂದು ಕ್ಷಣ ಗಾಬರಿಯಾಗಿದ್ದಾರೆ.

ಅಂದಹಾಗೆ ಈಕೆ ಒಳಗೊಂದು ಬೇರೆಯೇ ಬಟ್ಟೆ ಹಾಕಿಕೊಂಡಿದ್ದು, ಅದರ ಮೇಲೆ ಜನರನ್ನು ಮಂಗ ಮಾಡಲು ಟವೆಲ್ ಸುತ್ತಿಕೊಂಡು ಹೊರಬಂದಿದ್ದಾಳೆ. ಅಂತೆಯೇ ಟವೆಲ್ ಜಾರಿಸುತ್ತಿದ್ದಂತೆ ಒಳಗೆ ಹಾಕಿದ ಬಟ್ಟೆ ತೋರಿಸುತ್ತಾ, ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸ್ಟೈಲ್ ಆಗಿ ಮುನ್ನಡೆದಿದ್ದಾಳೆ. ಸಿಕ್ಕಾಪಟ್ಟೆ ವೈರಲ್ ಆಗುತ್ತಿರೋ ಈ ವಿಡಿಯೋ ಈಗಾಗಲೇ 10 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದೆ.