Home News Airplanes: ಬಸ್‌ನಲ್ಲಿ ನಡೆಯುತ್ತೆ ಸೀಟ್, ಲಗೇಜ್, ಟಿಕೆಟ್ ಗಾಗಿ ಬೀದಿ ರಂಪ – ಇದೆಲ್ಲಾ...

Airplanes: ಬಸ್‌ನಲ್ಲಿ ನಡೆಯುತ್ತೆ ಸೀಟ್, ಲಗೇಜ್, ಟಿಕೆಟ್ ಗಾಗಿ ಬೀದಿ ರಂಪ – ಇದೆಲ್ಲಾ ವಿಮಾನದಲ್ಲಿ ನಡೆಯುತ್ತಾ? ಹೇ ಛಾನ್ಸೆ ಇಲ್ಲ ಅನ್ನೋರು ಈ ವರದಿ ನೋಡಿ

Hindu neighbor gifts plot of land

Hindu neighbour gifts land to Muslim journalist

Airplanes : ಈ ಬಾರಿ‌ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಜನರಿಗೆ ಸಿಕ್ಕಿದ್ದು ಉಚಿತ, ಉಚಿತ, ಎಲ್ಲವೂ ಉಚಿತ. ಅದರಲ್ಲಿ ಮಹಿಳೆಯರಿಗೆ ಬಸ್ ಸಂಚಾರ ಫುಲ್ ಫ್ರೀಯಾಗಿ ಘೊಷಣೆಯಾಗಿತ್ತು. ಸಿಕ್ಕಿದ್ದೇ ಚಾನ್ಸ್ ನೋಡಿ.. ರಾಜ್ಯದ ಮಹಿಳಾ ಮಣಿಯರು ಉಚಿತವಾಗಿ ಬಸ್ ಹತ್ತಿದ್ದೇ ತಡ.. ಸೀಟ್ ಗಾಗಿ, ಕಿತ್ತಾಡಿದ್ದೇ‌ ಕಿತ್ತಾಡಿದ್ದು.. ಅದೆಷ್ಟು ಬಸ್‌ಗಳ ಸೊಂಟ ಮುರಿತೋ ಗೊತ್ತಿಲ್ಲ. ಇಂಥದ್ದು‌ ಏನಿದ್ರು ಸರ್ಕಾರಿ ಬಸ್‌ಗಳಲ್ಲಿ ನಡೆಯಕೆ‌ ಮಾತ್ರ ಸಾಧ್ಯ ಅಂತ ನೀವು ಅಂದುಕೊಳ್ಳಬಹುದು. ತಪ್ಪು.. ಇಂಥ ಬೀದಿ ಜಗಳ ವಿಮಾನದಲ್ಲೂ ಆಗುತ್ತೆ ಅಂದ್ರೆ ನಂಬೋದು ಕಷ್ಟ ಅಲ್ವಾ.. ಹೌದು ಹೈ ಕ್ಲಾಸ್ ಓಡಾಡೋ ವಿಮಾನದಲ್ಲಿ ಚೀಪ್ ಲೆವೆಲಲ್ಲಿ ಜಗಳ ಆಡೋರು ಇರಲ್ಲ ಬಿಡಿ ಅಂತ ಅಂದುಕೊಂಡರೆ ನಿಮ್ಮ ಊಹೆ ತಪ್ಪು.

 

ಲಗೇಜ್ ವಿಚಾರಕ್ಕೆ ವಿಮಾನ‌ದಲ್ಲಿ ಮಹಿಳೆಯೊಬ್ಬರು ರಂಪಾಟ ಮಡಿದ‌ ಘಟನೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ವಿಮಾನದ ಸಿಬ್ಬಂದಿ ಮತ್ತು ಪೊಲೀಸರ ಜೊತೆ ಈ ಮಹಿಳೆ ಕಿರಿಕ್‌ ಮಾಡಿದ್ದಾಳೆ.

 

ಕಿರಿಕ್ ಮಾಡಿ‌ ಗಲಾಟೆ ಮಾಡಿದ ಮಹಿಳೆ ವಿರುದ್ದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಯಲಹಂಕ ಮೂಲದ ವ್ಯಾಸ್ ಹಿರಲ್ ಮೋಹನ್ ಬಾಯಿ ಎಂಬ ಮಹಿಳೆ ವಿರುದ್ದ ಪ್ರಕರಣ ದಾಖಲಾಗಿದೆ.

 

17 ರ‌ಂದು ಕೆಐಎಬಿಯಿಂದ ಸೂರತ್ಗೆ AI 2749 F ವಿಮಾನದಲ್ಲಿ ತೆರಳುತ್ತಿದ್ದ ಮಹಿಳೆ, ಈ ವೇಳೆ ಪ್ಲೈಟ್ ನಲ್ಲಿ ಬೋರ್ಡಿಂಗ್ ಆಗಿ ಲಗೇಜ್ ಸೀಟ್ ಬಳಿ ಬಿಟ್ಟಿದ್ದ ಮಹಿಳೆ.

ಲಗೇಜ್ ಬಗ್ಗೆ ಪ್ರಶ್ನಿಸಿದಕ್ಕೆ ಪ್ಲೈಟ್ ಕ್ರ್ಯೂ ಸಿಬ್ಬಂದಿ ಜೊತೆ ಅನುಚಿತವಾಗಿ ನಡೆದುಕೊಂಡಿದ್ದಲ್ಲದೆ, ಇದೇ ವೇಳೆ ಸಹ ಪ್ರಯಾಣಿಕರ ಜೊತೆಯು ರಂಪಾಟ ಮಾಡಿದ್ದಾರೆ.

 

ಆಕೆಯ ರಂಪಾಟ ತಡೆಯಲಾಗದೆ, ಮಹಿಳೆಯನ್ನ ಪ್ಲೈಟ್ ನಿಂದ ಇಳಿಸಿ ಏರ್ಪೋಟ್ ಪೊಲೀಸರ ವಶಕ್ಕೆ ವಿಮಾನ ಸಿಬ್ಬಂದಿಗಳು ನೀಡಿದ್ದಾರೆ. ಅಲ್ಲಿಂದ ಹೋದ ಕಿರಿಕ್ ಲೇಡಿ ಪೊಲೀಸ್ ಠಾಣೆಯಲ್ಲು ಕಿರಿಕ್ ಮಾಡಿ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ.

 

ಆಕೆಯ ಅನುಚಿತ ವರ್ತನೆಯಿಂದ ಬೇಸತ್ತ ಪೋಲಿಸರು ಮಹಿಳೆಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗಿದೆ.