Home News Uppinangadi: ಶ್ರೀಮಂತನೆಂದು ಹಿಂದೂ ಯುವತಿಯನ್ನು ಮದುವೆಯಾದ ಸಮೀರುಲ್ಲ !! ಗಂಡನ ನಿಜ ಬಣ್ಣ ತಿಳಿಯುತ್ತಿದ್ದಂತೆ ರಸ್ತೆಯಲ್ಲಿ...

Uppinangadi: ಶ್ರೀಮಂತನೆಂದು ಹಿಂದೂ ಯುವತಿಯನ್ನು ಮದುವೆಯಾದ ಸಮೀರುಲ್ಲ !! ಗಂಡನ ನಿಜ ಬಣ್ಣ ತಿಳಿಯುತ್ತಿದ್ದಂತೆ ರಸ್ತೆಯಲ್ಲಿ ಹಿಗ್ಗಾಮುಗ್ಗ ಜಾಡಿಸಿದ ಪತ್ನಿ

Hindu neighbor gifts plot of land

Hindu neighbour gifts land to Muslim journalist

Uppinangadi: ಮುಸ್ಲಿಂ ವ್ಯಕ್ತಿ ಒಬ್ಬ ತಾನು ಶ್ರೀಮಂತನಂದು ಹೇಳಿಕೊಂಡು ಹಿಂದೂ ಯುವತಿಯನ್ನು ಮದುವೆಯಾಗಿದ್ದು, ಆಕೆಗೆ ಮಗುವಾದ ಬಳಿಕ ಸತ್ಯಂಸವೆಲ್ಲವೂ ತಿಳಿದು ಬಂದಿದೆ. ಎಲ್ಲಾ ನಿಜಾಂಶ ಗೊತ್ತಾದ ಬಳಿಕ ಕುಪಿತಗೊಂಡ ಆ ಹೆಂಡತಿ ನಡು ರಸ್ತೆಯಲ್ಲಿ ತನ್ನ ಪತಿಗೆ ಜಾಡಿಸಿದ ಘಟನೆ ಉಪ್ಪಿನಂಗಡಿಯಲ್ಲಿ( uppinangadi)ಬೆಳಕಿಗೆ ಬಂದಿದೆ.

ಹೌದು, ಹಿಂದಿ ಭಾಷಿಗ ಸಮಿರುಲ್ಲಾ ಎಂಬಾತ ಶಿಕಾರಿಪುರದ ಪವಿತ್ರ ಎಂಬವರನ್ನು ತಾನು ಸಿರಿವಂತ, ಸಾಕಷ್ಟು ಹಣ ತನ್ನಲ್ಲಿದೆ ಎಂದು ನಂಬಿಸಿ ಪ್ರೇಮಕ್ಕೆ ಸಿಲುಕಿಸಿದ್ದ. ಹೆತ್ತವರನ್ನು ಧಿಕ್ಕರಿಸಿ ಪ್ರಿಯತಮನೊಂದಿಗೆ ಬದುಕು ಕಟ್ಟಬಲ್ಲೆನೆಂದು ಪವಿತ್ರಳುಬೆಂಗಳೂರಿಗೆ ಬಂದಿದ್ದರು. ದಿನ ಕಳೆದಂತೆಲ್ಲಾ ತಾನು ನಂಬಿ ಬಂದಾತನ ನಿಜ ಸ್ವರೂಪ ನಿಧಾನವಾಗಿ ತಿಳಿಯಲಾರಂಭಿಸಿತು. ಅಷ್ಟರಲ್ಲಾಗಲೇ ಆಕೆ ಗರ್ಭಿಣಿಯಾಗಿ ಮಗುವಿನ ತಾಯಿಯೂ ಆಗಿಬಿಟ್ಟಿದ್ದಳು.

ತನ್ನ ಪತಿ ಮೋಸಗಾರ ಎಂದು ಗೊತ್ತಾಗಿದ್ದು ಹೇಗೆ?
ಸಮೀರುಲ್ಲಾ ಕಳೆದೆರಡು ದಿನಗಳ ಹಿಂದೆ ಉಡುಪಿಯತ್ತ ಹೋಗೋಣವೆಂದು ಪತ್ನಿ ಪವಿತ್ರಾಳನ್ನು ಬುರ್ಖಾ ತೊಡಿಸಿ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದ್ದ. ಈ ವೇಳೆ ಸಮಿರುಲ್ಲಾನಲ್ಲಿ ಬಸ್ಸಿನ ಟಿಕೆಟಿಗೂ ಹಣವಿರಲಿಲ್ಲ. ಹೀಗಾಗಿ ನಿರ್ವಾಹಕ ಉಪ್ಪಿನಂಗಡಿಯಲ್ಲಿ ಸಮಿರುಲ್ಲಾನನ್ನು ಇಳಿಸಿದ್ದ. ಪತಿಯೊಂದಿಗೆ ಬಸ್ಸಿನಿಂದ ಇಳಿದ ಪವಿತ್ರಾಳಿಗೆ ಅವಮಾನವಾದಂತಾಗಿ ಹಣವಿಲ್ಲದ ಮೇಲೆ ಪ್ರಯಾಣಕ್ಕೆ ಮುಂದಾದ ಗಂಡನ ವರ್ತನೆಯಿಂದ ಆಕ್ರೋಶಗೊಂಡು ಬೀದಿಯಲ್ಲೇ ಆತನಿಗೆ ಹೊಡೆದಿದ್ದಾಳೆ.

ಇವರಿಬ್ಬರ ಸಂಘರ್ಷವನ್ನು ಕಂಡು ಜನ ಜಮಾಯಿಸಿ ವಿಚಾರಿಸಿದಾಗ ಸಮೀರನು ತಾನು ಮುಸ್ಲಿಂ ಎಂದೂ, ತನ್ನ ಪತ್ನಿ ಹಿಂದೂ ಎಂದೂ ಪರಿಚಯಿಸಿದ್ದ. ಅಲ್ಲದೆ ಪತ್ನಿ ಪವಿತ್ರಳು ಹೆಚ್ಚಾಗಿ ತನ್ನ ಮೇಲೆ ದಾಳಿ ಮಾಡುತ್ತಿದ್ದಾಳೆ ಎಂದು ಗೊತ್ತಾದಾಗ ಇದು ಮುಸ್ಲಿಮರು ಹೆಚ್ಚಿರುವ ಪ್ರದೇಶ ನೀನು ನನಗೇನು ಮಾಡಲು ಸಾಧ್ಯವಿಲ್ಲ ಎಂದು ಅವಾಜ್ ಹಾಕಿದ್ದನು. ಅಷ್ಟರಲ್ಲಿ ಪೊಲೀಸರು ಬಂದು ಇವರನ್ನು ವಶಕ್ಕೆ ಪಡೆದು ಎಲ್ಲವನ್ನು ವಿಚಾರಿಸಿದ ಬಳಿಕ ತಾವೇ ಟಿಕೇಟಿಗೆ ಹಣ ನೀಡಿ ಮರಳಿ ಬೆಂಗಳೂರಿಗೆ ಕಳುಹಿಸಿದ್ದಾರೆ.