Home News IPL ನಲ್ಲಿ ಮಹತ್ವದ ಬದಲಾವಣೆ – ಈ ಬಾರಿ ಇರಲಿದೆ 10 ಹೆಚ್ಚು ಪಂದ್ಯಗಳು

IPL ನಲ್ಲಿ ಮಹತ್ವದ ಬದಲಾವಣೆ – ಈ ಬಾರಿ ಇರಲಿದೆ 10 ಹೆಚ್ಚು ಪಂದ್ಯಗಳು

Hindu neighbor gifts plot of land

Hindu neighbour gifts land to Muslim journalist

IPL: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮಹತ್ವದ ಬದಲಾವಣೆಯನ್ನು ತರಲು ಬಿಸಿಸಿಐ ನಿರ್ಧರಿಸಿದ್ದು ಈ ವರ್ಷದಿಂದ ಅಂದರೆ 2026 ಐಪಿಎಲ್ ಮ್ಯಾಚ್ ನಲ್ಲಿ ಸುಮಾರು 10 ಪಂದ್ಯಗಳನ್ನು ಹೆಚ್ಚಾಗಿ ನಡೆಸಲು ನಿರ್ಧರಿಸಿದೆ.

ಯಸ್, IPL ನಲ್ಲಿ ಮಹತ್ವದ ಬದಲಾವಣೆಯಾಗಲಿರುವುದು ಖಚಿತವಾಗಿದೆ. ಅಂದರೆ ಐಪಿಎಲ್ 2026 ರಿಂದ ಹೆಚ್ಚುವರಿ 10 ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಚಿಂತಿಸಿದೆ. 2025ರಲ್ಲಿಯೇ ಪಂದ್ಯಗಳನ್ನು ಹೆಚ್ಚು ಮಾಡಲು ಸಂಸ್ಥೆಯು ನಿರ್ಧರಿಸಿದ್ದು ಆದರೆ ಇದು ಕಾರ್ಯಗತವಾಗಿರಲಿಲ್ಲ.

ಆದರೆ 2026 ರಲ್ಲಿ ಒಟ್ಟು 84 ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆಯಿದೆ. ಅಂದರೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚುವರಿ 10 ಪಂದ್ಯಗಳಿರಲಿದೆ. ಇದಕ್ಕೂ ಮುನ್ನ 74 ಪಂದ್ಯಗಳನ್ನು ಆಯೋಜಿಸಲಾಗುತ್ತಿತ್ತು. ಇದೀಗ 84 ಪಂದ್ಯಗಳ ಟೂರ್ನಿ ನಡೆಸಲು ಚಿಂತಿಸಲಾಗಿದೆ. ಅಂದರೆ ಇಲ್ಲಿ ಪ್ರತಿ ತಂಡಗಳು 18 ಪಂದ್ಯಗಳನ್ನಾಡಲಿದೆ. 9 ಪಂದ್ಯಗಳು ಹೋಮ್ ಗ್ರೌಂಡ್​ನಲ್ಲಿ ನಡೆದರೆ, ಉಳಿದ 9 ಪಂದ್ಯಗಳು ಅವೇ ಮೈದಾನದಲ್ಲಿ ಜರುಗಲಿದೆ. ಈ ಮೂಲಕ ಲೀಗ್​ ಹಂತದಲ್ಲಿ ಪ್ರತಿ ತಂಡಗಳು 18 ಪಂದ್ಯಗಳನ್ನಾಡಲಿದೆ. ಒಟ್ಟಿನಲ್ಲಿ ಐಪಿಎಲ್ ಸೀಸನ್-19 ರಲ್ಲಿ 84 ಪಂದ್ಯಗಳನ್ನು ವೀಕ್ಷಿಸುವ ಅವಕಾಶ ಪ್ರೇಕ್ಷಕರಿಗೆ ದೊರೆಯಲಿದೆ.