Home News Udupi: ಕರಾವಳಿಯಲ್ಲಿ ದೈವ ಪವಾಡ – 28 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಗನನ್ನು ಮನೆಗೆ ಕರೆಸಿದ...

Udupi: ಕರಾವಳಿಯಲ್ಲಿ ದೈವ ಪವಾಡ – 28 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಗನನ್ನು ಮನೆಗೆ ಕರೆಸಿದ ದೈವ !!

Hindu neighbor gifts plot of land

Hindu neighbour gifts land to Muslim journalist

Udupi: ಕಾಲ ಎಷ್ಟೇ ಬದಲಾದರೂ ಕೂಡ ಕರಾವಳಿ ಭಾಗದ ತುಳುನಾಡಿನಲ್ಲಿ ದೈವಗಳ ಪವಾಡ ಇನ್ನೂ ಕೂಡ ಹಾಗೆಯೇ ಉಳಿದುಕೊಂಡಿದೆ. ಅಷ್ಟೇ ಭಯ ಭಕ್ತಿಗಳಿಂದ ಜನರು ಅದಕ್ಕೆ ಕೋಲ ನೇಮಗಳನ್ನು ನಡೆಸಿಕೊಂಡು ಅನೇಕ ಪವಾಡಗಳಿಗೆ ಸಾಕ್ಷಿಯಾಗಿದ್ದಾರೆ.ಅಂತಯೇ ಇದೀಗ ತುಳುನಾಡಿನ ದೈವಗಳ ಪವಾಡಕ್ಕೆ ಸಾಕ್ಷಿ ಎಂಬಂತೆ ಮತ್ತೊಂದು ಘಟನೆ ನಡೆದಿದೆ.

ಹೌದು, ಉಡುಪಿ(Udupi) ಜಿಲ್ಲೆಯ ಹೆಬ್ರಿ ತಾಲೂಕಿನ ವರಂಗ ಗ್ರಾಮದ ಹೊಸಬೆಟ್ಟು ಎಂಬಲ್ಲಿ ದೈವದ ಪವಾಡವೊಂದು ನಡೆದಿದೆ ಸುಮಾರು 28 ವರ್ಷಗಳ ಹಿಂದೆ ಮನೆಬಿಟ್ಟು ಹೋಗಿದ್ದ ಮಗ ಮತ್ತೆ ಮನೆ ಸೇರಿದ್ದಾನೆ. ನಂಬದ ದೈವದ ಮಾತು ಹಾಗೂ ಸಾಮಾಜಿಕ ಜಾಲತಾಣಗಳಿಂದಾಗಿ ಮಗ ಮತ್ತೆ ತನ್ನ ತಂದೆತಾಯಿ ಜೊತೆ ಸೇರಿಕೊಂಡಿದ್ದಾನೆ.

ಏನಿದು ಘಟನೆ?
ವರಂಗ ಗ್ರಾಮದ ಹೊಸಬೆಟ್ಟುವಿನಲ್ಲಿ ಸುಮಾರು 6 ದಶಕಗಳಿಂದ ದೈವದ ಚಾಕರಿ ಮಾಡುತ್ತಿರುವ ಸುಂದರ ಪೂಜಾರಿ (80) ಅವರ ಮಗ ಭೋಜ 28 ವರ್ಷಗಳ ನಂತರ ಮರಳಿ ಮನೆಗೆ ಬಂದಿದ್ದಾರೆ. ಅಂದು ಯಾವುದೋ ಕಾರಣಕ್ಕೆ ಮುನಿದು ಮನೆ ಬಿಟ್ಟಿದ್ದ ಮಗ 28 ವರ್ಷಗಳಾದರೂ ಮನೆಗೆ ಬಾರಲೇ ಇಲ್ಲ. ಮಗನನ್ನು ಸಾಯುವ ಒಳಗೆ ಒಂದು ಸಲ ಆದರೂ ನೋಡಿ ಕಣ್ಣುಮುಚ್ಚತ್ತೇವೆ ಎಂಬ ಭರವಸೆಯಲ್ಲಿ ತಾವು ನಂಬಿದ ದೈವಗಳಿಗೆ ಕೈಮುಗಿದಿದ್ದಾರೆ. ಅಲ್ಲದೆ ಕಳೆದ ವರ್ಷ ಬ್ರಹ್ಮಬೈದರ್ಕಳ ಕೋಲದ ಸಂದರ್ಭದಲ್ಲಿ ದೈವದಲ್ಲಿ ನಿವೇದಿಸಿಕೊಂಡಿದ್ದರು.

ದೈವವು ವರ್ಷದೊಳಗೆ ಮಗನ ಮುಖ ನೋಡುವಂತೆ ಮಾಡುತ್ತೇನೆ ಎಂದು ಅಭಯ ನೀಡಿತ್ತು. ದೈವದ ಅಭಯದಂತೆ ಅದೇ ವೇಳೆ ಉಡುಪಿ ಕಂಡೀರಾ ಖ್ಯಾತಿಯ ಮಂಜುನಾಥ ಕಾಮತ್ ಅವರು, ಈ ಹೆತ್ತವರ ಇಳಿವಯಸ್ಸಿನ ನೋವನ್ನು ಫೇಸ್ಟುಕ್ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದರು. ವೃದ್ಧ ದಂಪತಿಗಳ ಕಣ್ಣೀರನ್ನು ನೋಡಿದ ಹುಬಳ್ಳಿಯಲ್ಲಿ ತನ್ನಪಾಡಿಗೆ ತಾನು ಹೊಟೇಲ್ ಕಾರ್ಮಿಕನಾಗಿದ್ದ ಭೋಜ ಅವರ ಮನ ಕರಗಿ ಹೊರಟು ಊರಿಗೆ ಬಂದು ಹೆತ್ತವರ ಕಾಲಿಗೆ ಬಿದ್ದರು. ಬಾಲ್ಯದಿಂದಲೇ ಮಗನ ಕೈಯ ಮೇಲಿದ್ದ ಗುಳ್ಳೆಯನ್ನು ನೋಡಿ ಆತನೇ ತಮ್ಮ ಮಗ ಎಂದು ಖಚಿತಪಟ್ಟುಕೊಂಡು ಸುಂದರ ಪೂಜಾರಿ ಮತ್ತವರ ಪತ್ನಿ ದೈವಕ್ಕೆ ಬಾರಿಬಾರಿ ಕೈ ಮುಗಿದರು. ಇದಾಗಿ ನಾಲೈದು ದಿನಗಳ ಭೋಜ ಮತ್ತೆ ಹುಬ್ಬಳ್ಳಿಗೆ ತೆರಳಿದರು. ವಾರ ಕಳೆಯುವಷ್ಟರಲ್ಲಿ ಮಗನನ್ನು ಕೊನೆಯ ಬಾರಿ ನೋಡುವುದಕ್ಕಾಗಿಯೇ ಕಾಯುತ್ತಿದ್ದವರಂತೆ ತಾಯಿ ಸುಶೀಲ ಅನಾರೋಗ್ಯ ಹಾಸಿಗೆ ಹಿಡಿದು ಎರಡು ವಾರಗಳ ಹಿಂದೆ ಕೊನೆಯುಸಿರೆಳೆದಿದ್ದಾರೆ. ವಿಷಯ ತಿಳಿದು ಮತ್ತೆ ಓಡಿ ಬಂದ ಭೋಜ ತಾಯಿಯ ಅಂತ್ಯ ಸಂಸ್ಕಾರವನ್ನು ಮುಗಿಸಿದ್ದಾರೆ.