Home News Old Bill: 1962ರ ದಿನಸಿ ಅಂಗಡಿಯ ಬಿಲ್ ವೈರಲ್ – ಅಂದಿನ ರೇಟ್ ನೋಡಿ ನೆಟ್ಟಿಗರು...

Old Bill: 1962ರ ದಿನಸಿ ಅಂಗಡಿಯ ಬಿಲ್ ವೈರಲ್ – ಅಂದಿನ ರೇಟ್ ನೋಡಿ ನೆಟ್ಟಿಗರು ಫುಲ್ ಶಾಕ್

Hindu neighbor gifts plot of land

Hindu neighbour gifts land to Muslim journalist

Old Bill: ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ಹಳೆಯ ಬಿಲ್ ಗಳು ವೈರಲಾಗುತ್ತಿವೆ. ಅಂದರೆ ಎಲ್ಲೋ ಮರೆಮಾಚಿಕೊಂಡಿದ್ದ 90ರ ದಶಕದ ವಿವಿಧ ವಸ್ತುಗಳ, ಅಂಗಡಿಗಳ ಬಿಲ್ ಗಳು ಇಂದು ವೈರಲಾಗುತ್ತಿದ್ದು ಇಂದಿನ ಬೆಲೆಗೆ ಅವುಗಳನ್ನು ತಾಳೆ ಮಾಡಿ ನೆಟ್ಟಿಗರು ಫುಲ್ ಶಾಕ್ ಆಗುತ್ತಿದೆ. ಅಂತೆಯೇ ಇದೀಗ 1962ರ ದಿನಸಿ ಅಂಗಡಿಯ ಒಂದರ ಬಿಲ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದರಲ್ಲಿರುವ ಬೆಲೆಗಳನ್ನು ಕಂಡು ನೆಟ್ಟಿಗರು ಆಶ್ಚರ್ಯ ಪಡುತ್ತಿದ್ದಾರೆ.

 

ಹೌದು, ಸೋಶಿಯಲ್ ಮೀಡಿಯಾದಲ್ಲಿ 1962ರ ಕಿರಾಣಿ ಅಂಗಡಿಯ ರಶೀದಿ ವೈರಲ್ ಆಗುತ್ತಿದೆ. ಮಲ್ಲಿಕಾರ್ಜುನ್ ಮೇಟಿ (Mallikarjun Meti) ಎಂಬವರು ಫೇಸ್‌ಬುಕ್ ಖಾತೆಯಲ್ಲಿ 1962ರ ಕಿರಾಣಿ ಬಿಲ್ ಎಂದು ರಶೀದಿಯ ಫೋಟೋ ಹಂಚಿಕೊಂಡಿದ್ದಾರೆ. ಈ ರಶೀದಿ ಮೇಲೆ 4ನೇ ಆಗಸ್ಟ್ 1962 ಎಂದು ದಿನಾಂಕ ನಮೂದಿಸಲಾಗಿದೆ. ಈ ಬಿಲ್ ನೋಡಿದ ಜನರು ದರಗಳು ಇಷ್ಟು ಕಡಿಮೆ ಇತ್ತಾ ಎಂದು ಆಶ್ವರ್ಯ ವ್ಯಕ್ತಪಡಿಸಿದ್ದಾರೆ. ಈಗಿನ ಬೆಲೆಗೂ 1962ರ ಬೆಲೆಗೂ ಹೆಚ್ಚು ಕಮ್ಮಿ 300ಪಟ್ಟು ಬೆಲೆ ಹೆಚ್ಚಳವಾಗಿದೆ. ಅಬ್ಬಾ ಇಷ್ಟು ಕಡಿಮೆ ಬೆಲೆಗಳು. ಕನಸಿನಲ್ಲೂ ಊಹಿಸಲು ಅಸಾಧ್ಯ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:Crime: ದನದ ಕಾಲು ಕಡಿದ ಪ್ರಕರಣ: ಕಾನೂನು ಕ್ರಮ ಕೈಗೊಳ್ಳಿ ಇಲ್ಲವಾದಲ್ಲಿ ಠಾಣೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತೇವೆ ಹಿಂಜಾವೇ ಎಚ್ಚರಿಕೆ

ಗ್ರಾಹಕರು ಮಾಡಿಕೊಟ್ಟ ಪಟ್ಟಿಯಲ್ಲಿಯೇ ಅಂಗಡಿ ಮಾಲೀಕ ಬೆಲೆ ಬರೆದು ಒಟ್ಟು ಎಷ್ಟು ಹಣ ಎಂದು ನಮೂದಿಸಿದ್ದಾರೆ. ಸಕ್ಕರೆ, ಬೆಲ್ಲ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಆಹಾರ ಸಾಮಾಗ್ರಿಗಳಿಗೆ 53 ರೂಪಾಯಿ ಬಿಲ್ ಆಗಿದೆ. 1 ಕೆಜಿ ಸಕ್ಕರೆ ಬೆಲೆ 1.25 ರೂಪಾಯಿ ಆಗಿದೆ. ಇಂದು 1 ಕೆಜಿ ಸಕ್ಕರೆ 50 ರಿಂದ 55 ರೂಪಾಯಿಯ ಆಸುಪಾಸಿನಲ್ಲಿ ಸಿಗುತ್ತಿದ್ದು, ಹಲವರ ಹುಬ್ಬೇರುವಂತೆ ಮಾಡಿದೆ.