Home News Dharmasthala Case: ಪಾಯಿಂಟ್‌ ನಂಬರ್‌ 11 ರಲ್ಲಿ 6ಅಡಿ ಅಗೆತ: ಸಿಕ್ಕಿದ್ದೇನು?

Dharmasthala Case: ಪಾಯಿಂಟ್‌ ನಂಬರ್‌ 11 ರಲ್ಲಿ 6ಅಡಿ ಅಗೆತ: ಸಿಕ್ಕಿದ್ದೇನು?

Hindu neighbor gifts plot of land

Hindu neighbour gifts land to Muslim journalist

Dharmasthala Case: ಧರ್ಮಸ್ಥಳದ ತಲೆಬುರುಡೆ ರಹಸ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಳಗ್ಗೆಯೇ ಮಾಸ್ಕ್‌ಮ್ಯಾನ್‌ ಜೊತೆ ಸ್ಥಳಕ್ಕೆ ಬಂದ ಎಸ್ಐಟಿ ಅಧಿಕಾರಿಗಳು ಉತ್ಖನನ ಕಾರ್ಯ ಮಾಡಿದ್ದು, ಪಾಯಿಂಟ್ ನಂಬರ್ 11ರಲ್ಲಿ ಆರಂಭದಲ್ಲಿ ಮೂರು ಅಡಿ ಅಗೆಯಲಾಯ್ತಾದರೂ ಏನೂ ಸಿಕ್ಕಿರಲಿಲ್ಲ. ಬಳಿಕ ಮತ್ತಷ್ಟು ಅಗೆಯಲು ಸೂಚಿಸಿದ್ರು. ಕಾರ್ಮಿಕರು ಮತ್ತೆ 6 ಅಡಿ‌‌ ಅಗೆದಿದ್ದಾರೆ.

ಪಾಯಿಂಟ್ ನಂಬರ್ 11ರಲ್ಲಿ 5 ಅಡಿಗಳ ಆಳದವರೆಗೆ ಅಗೆಯಲಾಯಿತಾದರೂ ಯಾವುದೇ ಕಳೇಬರ ಸಿಕ್ಕಿಲ್ಲ. ಮುಂದಿನ ಶೋಧಕ್ಕೆ SIT ತಂಡ ಜೆಸಿಬಿ ಬಳಕೆ ಮಾಡಿಲ್ಲ. ಸ್ಪಾಟ್ 11ರಲ್ಲಿ 6 ಫಿಟ್ ತೆಗೆದ ಬಳಿಕ ಮುಚ್ಚಿದ್ದಾರೆ.

ಇಂದು ಕೂಡಾ ಮಾರ್ಕ್‌ ಮಾಡಿದ ಜಾಗ ಬಟ್ಟು ಬೇರೆ ಕಡೆ ಉತ್ಖನನ ನಡೆಯೋ ಸಾಧ್ಯತೆ ಇದೆ ಎನ್ನಲಾಗಿದೆ.
ಪಾಯಿಂಟ್‌ ನಂಬರ್‌ 11 ರಲ್ಲಿ ಯಾವುದೇ ಕಳೇಬರ ಸಿಗದ ಕಾರಣ, ಎಸ್‌ಐಟಿ ಆ ಜಾಗವನ್ನು ಮುಚ್ಚಿ ಸೀಲ್‌ ಮಾಡಿದ್ದು, ನಂತರ ಊಟಕ್ಕೆ ತೆರಳಿದ್ದಾರೆ. ಊಟದ ವಿರಾಮದ ನಂತರ 12ನೇ ಪಾಯಿಂಟ್‌ನಲ್ಲಿ ಉತ್ಖನನ ಕಾರ್ಯ ನಡೆಯಲಿದೆ.

ಇದನ್ನು ಓದಿ: PM Modi: ಆಗಸ್ಟ್‌ 10 ರಂದು ಬೆಂಗಳೂರಲ್ಲಿ ನಿಗದಿ ಮಾಡಲಾಗಿದ್ದ ಪ್ರಧಾನಿ ಮೋದಿ ರೋಡ್‌ಶೋ, ಸಮಾವೇಶ ರದ್ದು!