Home News ವಿಡಿಯೋ ಕಾಲ್ ಮಾಡುವಾಗ ‘ ಅದರ ‘ ಭಾಗ ತೋರಿಸಿದ ಮಹಿಳೆ | ಆನಂತರ ಪತಿಗೆ...

ವಿಡಿಯೋ ಕಾಲ್ ಮಾಡುವಾಗ ‘ ಅದರ ‘ ಭಾಗ ತೋರಿಸಿದ ಮಹಿಳೆ | ಆನಂತರ ಪತಿಗೆ ಸ್ಕ್ರೀನ್ ಶಾಟ್ ಕಳಿಸಿದ್ದ ಪ್ರಿಯಕರ !!

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಮಹಿಳೆಯೇ ಲೈಂಗಿಕ ಕ್ರಿಯೆಗೆ ಒಪ್ಪಿಗೆ ನೀಡಿದ ಮತ್ತು ಮೊಬೈಲ್ ನಲ್ಲಿ ವಿಡಿಯೋ ಕಾಲ್ ಮಾಡುವಾಗ ಖಾಸಗಿ ಭಾಗ ತೋರಿಸಿದ ಹಿನ್ನೆಲೆಯಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ ಹೈಕೋರ್ಟ್ ಜಾಮೀನು ನೀಡಿದೆ.

ಕೊಪ್ಪಳ ಜಿಲ್ಲೆಯ ಆರೋಪಿ ತನ್ನದೇ ಗ್ರಾಮದ ಮತ್ತು ಸಂಬಂಧಿಕರಾಗಿದ್ದ ಯುವತಿಯನ್ನು ಪ್ರೀತಿಸಿದ್ದ.
ಮದುವೆಯಾಗುವುದಾಗಿ ನಂಬಿಸಿದ್ದ ಆತ, 2018 ರ ಡಿಸೆಂಬರ್ ನಲ್ಲಿ ಹಾಗೂ ನಂತರದಲ್ಲಿ ಆಕೆಯೊಂದಿಗೆ ಹಲವು ಬಾರಿ ಲೈಂಗಿಕ ಸುಖ ನಡೆಸಿದ್ದ.

ಬಳಿಕ ಯುವತಿಯನ್ನು ಬೇರೆ ವ್ಯಕ್ತಿಯೊಂದಿಗೆ ಮದುವೆ ಮಾಡಲಾಗಿತ್ತು. ಮದುವೆಯ ನಂತರವೂ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಅಲ್ಲದೆ ಗಂಡ ಮಲಗಿ ನಿದ್ದೆ ಮಾಡಿದಾಗ, ಬೆಳಗಿನ ಜಾವ ಎದ್ದು ಪ್ರಿಯಕರನಿಗೆ ವಿಡಿಯೋ ಕಾಲ್ ಮಾಡಿ ಖಾಸಗಿ ಅಂಗ ತೋರಿಸುವಂತೆ ಕೇಳಿದಾಗ ಮಹಿಳೆ ತನ್ನ ‘ ಅದರ ‘ ಭಾಗ ಮತ್ತು ಎದೆ ಬಿಚ್ಚಿ ತೋರಿಸಿದ್ದಳು. ಆಗ ಆತ ಅವೆಲ್ಲಾ ಫೋಟೊ ವೀಡಿಯೋ ವನ್ನು ತನ್ನ ಮೊಬೈಲಿನಲ್ಲಿ ಸ್ಟೋರ್ ಮಾಡಿಟ್ಟಿದ್ದ. ಅಲ್ಲದೆ ಹಿಂದೆ ಲೈಂಗಿಕ ಕ್ರಿಯೆಗೆ ಒಪ್ಪಿಗೆ ಕೂಡ ನೀಡಿದ್ದನ್ನು ಸ್ಕ್ರೀನ್ಶಾಟ್ ತೆಗೆದುಕೊಂಡು ಇಟ್ಟಿದ್ದನಾತ.
ಅವರಿಬ್ಬರೂ ಹೀಗೆ ಗಂಡನಿಗೆ ಗೊತ್ತಾಗದಂತೆ ಸೆಕ್ಸ್ ಚೆಲ್ಲಾಟ ನಡೆಸಿದ್ದರು. ಅವರ ಕಾಮಕೇಳಿ ಗಂಡನಿಗೆ ಗೊತ್ತಾಗದಂತೆ ಎಗ್ಗಿಲ್ಲದೇ ಸಾಗಿತ್ತು. ಅವೆಲ್ಲವನ್ನು ಆತ ವಿಡಿಯೋ ಮಾಡಿಕೊಂಡು ಇಟ್ಟಿದ್ದ.

ಕಳೆದ 15 ದಿನಗಳ ಕಾಲ ಆತ ಮಹಿಳೆಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದ. ಆದ್ರೆ ಮಹಿಳೆ ಕರೆ ಸ್ವೀಕರಿಸಲಿಲ್ಲ. ಅಲ್ಲದೆ ಆಕೆ ಕೂಡ ಯಾವುದೆ ರೆಸ್ಪಾನ್ಸ್ ಮಾಡದಿರುವುದರಿಂದ ಆಕ್ರೋಶಗೊಂಡಿದ್ದ ಆಕೆಯ ಪ್ರಿಯಕರ. ಖ್ರುದ್ದಗೊಂಡ ಆತ
ಆಕೆಯ ಗಂಡನಿಗೆ ರಾಸಲೀಲೆಯ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸಿದ್ದ.

ಪತ್ನಿಯ ಅಕ್ರಮ ಸಂಬಂಧ ತಿಳಿದ ಪತಿ ಆಕೆಯನ್ನು ತಕ್ಷಣ ಮನೆಯಿಂದ ಒದ್ದು ಓಡಿಸಿದ್ದ. ಆಕೆ ತವರು ಸೇರಿಕೊಂಡಳು. ಆ ನಂತರ ಯಲಬುರ್ಗಾ ಠಾಣೆಗೆ ದೂರು ನೀಡಿದ ಮಹಿಳೆ ಆರೋಪಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಪೊಲೀಸರು 2021ರ ಏಪ್ರಿಲ್ 7ರಂದು ಆರೋಪಿಯನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ಮದುವೆಗೆ ಮೊದಲು ಮತ್ತು ನಂತರ ಆರೋಪಿಯೊಂದಿಗೆ ಸಂಬಂಧ ಹೊಂದಿದ್ದು, ಹಲವಾರು ಬಾರಿ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ. ಅಲ್ಲದೆ, ತನ್ನ ಪತಿಯ ಮೊಬೈಲ್ ಫೋನ್ ನಿಂದ ಪ್ರಿಯಕರನಿಗೆ ಕರೆ ಮಾಡಿದಾಗ ಖಾಸಗಿ ಅಂಗ ತೋರಿಸಿದ್ದಾರೆ. ಆರೋಪಿಗೆ ಲೈಂಗಿಕ ಕ್ರಿಯೆ ನಡೆಸಲು ಒಪ್ಪಿಗೆ ನೀಡಿದ್ದಾರೆ ಎನ್ನುವುದು ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ.