Home News Ram Mandir: ರಾಮಮಂದಿರ ಬಗ್ಗೆ ಅವಹೇಳನ ಮಾಡಿದವನಿಗೆ 60 ದಿನ ಜೈಲು

Ram Mandir: ರಾಮಮಂದಿರ ಬಗ್ಗೆ ಅವಹೇಳನ ಮಾಡಿದವನಿಗೆ 60 ದಿನ ಜೈಲು

Hindu neighbor gifts plot of land

Hindu neighbour gifts land to Muslim journalist

Naragunda: ರಾಮಮಂದಿರ ಭಾವಚಿತ್ರದ ಮೇಲೆ ಅವಹೇಳನಕಾರಿ ಬರಹ ಬರೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ವ್ಯಕ್ತಿಗೆ 60 ದಿನ ಸಾದಾ ಕಾರಾಗೃಹವಾಸ ಶಿಕ್ಷೆ ಹಾಗೂ ರೂ.5000 ದಂಡ ವಿಧಿ ನರಗುಂದ ಸಿ.ಜೆ.ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಆದೇಶ ನೀಡಿದೆ. ಗದಗ ಜಿಲ್ಲೆ ನರಗುಂದ ನಿವಸಿ ನಿವಾಸಿ ಹಾಸಿಂಸಾಬ ಅಕ್ಷರಸಾಬ ಖಾಜಿ ಶಿಕ್ಷೆಗೊಳಗಾದ ವ್ಯಕ್ತಿ.

2018 ಅ.26 ರಂದು ರಾಮಮಂದಿರ ಚಿತ್ರದ ಮೇಲೆ ಹಿಂದಿ ಹಾಗೂ ಇಂಗ್ಲೀಷ್‌ ಅಕ್ಷರಗಳಲ್ಲಿ ಆಕ್ಷೇಪಾರ್ಹ ಸಾಲುಗಳನ್ನು ಬರೆದು ಪೋಸ್ಟ್‌ ಮಾಡಿದ್ದ. ಈ ಕುರಿತು ಕಲಂ 295 ಐಪಿಸಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಕೆ ಮಾಡಲಾಗಿತ್ತು. ವಾದ ಪ್ರತಿವಾದ ಆಲಿಸಿದ ನ್ಯಾಯಧೀಶ ಜಿನ್ನಪ್ಪ ಚೌಗಲಾ ಫೆ.18 ರಂದು ಆರೋಪಿತನಿಗೆ ಶಿಕ್ಷೆ ವಿಧಿಸಿದ್ದಾರೆ.