Home News PUC, SSLC ಪರೀಕ್ಷೆ ಸಮಯದಲ್ಲೇ 4ರಿಂದ 9ನೇ ಕ್ಲಾಸ್‌ ಟೆಸ್ಟ್‌

PUC, SSLC ಪರೀಕ್ಷೆ ಸಮಯದಲ್ಲೇ 4ರಿಂದ 9ನೇ ಕ್ಲಾಸ್‌ ಟೆಸ್ಟ್‌

Board Exam Cancel

Hindu neighbor gifts plot of land

Hindu neighbour gifts land to Muslim journalist

Exams: ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷಾ ದಿನಗಳಲ್ಲಿ 4ರಿಂದ 9ನೇ ತರಗತಿವರೆಗಿನ ಮಕ್ಕಳಿಗೆ ಶೈಕ್ಷಣಿಕ ಸಾಲಿನ ಎರಡನೇ ಸಂಕಲನಾತ್ಮಕ ಪರೀಕ್ಷೆ ನಡೆಸುವಂತೆ ಶಿಕ್ಷಣ ಇಲಾಖೆಯ ಬೆಂಗಳೂರು ಉತ್ತರ ಉಪನಿರ್ದೇಶಕರು ವೇಳಾಪಟ್ಟಿ ಪ್ರಕಟ ಮಾಡಿರುವುದು ಗೊಂದಲಕ್ಕೆ ಕಾರಣವಾಗಿದೆ.

ಮಾ.1 ರಿಂದ 20ರವರೆಗೆ ದ್ವಿತೀಯ ಪಿಯು ಪರೀಕ್ಷೆ, ಮಾ.21 ರಿಂದ ಏ.4 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗಳು ಬೆಳಗ್ಗೆ ನಡೆಯಲಿದೆ. ಇದರ ಮಧ್ಯೆ ಮಾ.10ರಿಂದ 18ರವರೆಗೆ 8 ಮತ್ತು 9 ನೇ ತರಗತಿ ಮಕ್ಕಳಿಗೆ 4 ರಿಂದ 7 ನೇ ತರಗತಿ ಮಕ್ಕಳಿಗೆ ಮಾ.21 ರಿಂದ 29 ರವರೆಗೆ ಎರಡನೇ ಸಂಕಲನಾತ್ಮಕ ಪರೀಕ್ಷೆಗಳನ್ನು ಮಧ್ಯಾಹ್ನದ 2ಗಂಟೆ ನಂತರ ಶಾಲಾ ಹಂತದಲ್ಲೇ ಪ್ರಶ್ನೆ ಪತ್ರಿಕೆ ತಯಾರಿಸಿಕೊಂಡು ನಡೆಸುವಂತೆ ಸೂಚಿಸಲಾಗಿದೆ.

ಇದು ಪಿಯು, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಿಗೆ ಪಡೆದಿರುವ ಶಾಲೆಗಳಲ್ಲಿ ಸಮಸ್ಯೆ ಬರಲಿದೆ. ಮಧ್ಯಾಹ್ನ 1 ರವರೆಗೆ ಪರೀಕ್ಷೆ ನಡೆಯಲಿದೆ. ಸಿಸಿ ಕ್ಯಾಮೆರಾ ವೆಬ್‌ಕಾಸ್ಟಿಂಗ್‌ ಇರುತ್ತದೆ. ಪರೀಕ್ಷೆ ಬಳಿಕ ಉತ್ತರ ಪತ್ರಿಕೆಗಳ ಬಂಡೆಲ್‌ ಮಾಡಿಕೊಂಡು ಯಾವುದೇ ಲೋಪವಾಗದಂತೆ ಕ್ರಮ ವಹಿಸಬೇಕಾಗುತ್ತದೆ. ಇದಕ್ಕೆ ತುಂಬಾ ಸಮಯ ಬೇಕು. ಪ್ರೌಢಶಾಲಾ ಶಿಕ್ಷಕರನ್ನು ಪರೀಕ್ಷಾ ಕಾರ್ಯಗಳಿಗೆ ನಿಯೋಜನೆ ಮಾಡಲಾಗಿದೆ. ಮಧ್ಯಾಹ್ನ 2 ರ ನಂತರ ಸಂಕಲನಾತ್ಮಕ ಪರೀಕ್ಷೆ ಹೇಗೆ ಮಾಡಲು ಸಾಧ್ಯ? ಹಾಗಾಗಿ ಇದನ್ನು ರದ್ದುಪಡಿಸಿ ಆ ಪರೀಕ್ಷೆಗಳ ಜವಾಬ್ದಾರಿಯನ್ನು ಆಯಾ ಶಾಲೆಗಳಿಗೆ ಬಿಡಬೇಕೆಂದು ಶಿಕ್ಷಕರು ಹಾಗೂ ಪೋಷಕರ ವಲಯದಲ್ಲಿ ಆಗ್ರಹ ಕೇಳಿ ಬರುತ್ತಿದೆ.