Home News Holiday: ನಾಳೆಯಿಂದ 3 ದಿನ ರಜೆ !!

Holiday: ನಾಳೆಯಿಂದ 3 ದಿನ ರಜೆ !!

Hindu neighbor gifts plot of land

Hindu neighbour gifts land to Muslim journalist

 

Holiday: ಕಳೆದ ವಾರ ಹಾಗೂ ಈ ವಾರ ರಾಜ್ಯಾದ್ಯಂತ ಮತ್ತು ದೇಶಾದ್ಯಂತ ಶಾಲಾ-ಕಾಲೇಜು, ಕಚೇರಿಗಳಿಗೆ ಸಾಲು ಸಾಲು ರಜೆಗಳು ಎದುರಾಗಿದೆ. ಈ ಬೆನ್ನಲ್ಲೇ ಮತ್ತೆ ಕೆಲವೆಡೆ ನಾಳೆಯಿಂದ ಮೂರು ದಿನ ರಜೆಯನ್ನು ಘೋಷಿಸಲಾಗಿದೆ.

 

ಹೌದು, ನಾಳೆಯಿಂದ ಅಂದರೆ ಏಪ್ರಿಲ್‌ 18 ಸೇರಿ ಸತತ ಮೂರು ದಿನ ಬಹುತೇಕ ಕಚೇರಿಗಳಿಗೆ ರಜೆ ಇರಲಿದೆ. ಹಾಗಾದ್ರೆ ಯಾರಿಗೆಲ್ಲ ರಜೆ, ಕಾರಣ ಏನು? ಇಲ್ಲಿದೆ ನೋಡಿ ಡೀಟೇಲ್ಸ್.

 

ಯಸ್, ಹಲವು ರಾಜ್ಯಗಳಲ್ಲಿ ಮೂರು ದಿನಗಳ ದೀರ್ಘ ವಾರಾಂತ್ಯ ರಜೆ ಇರಲಿದೆ. ನಾಳೆ ಅಂದರೆ ಏಪ್ರಿಲ್‌ 18ರ ಶುಕ್ರವಾರ ಗುಡ್‌ ಫ್ರೈಡೇ ಹಿನ್ನೆಲೆ ರಜೆ ಇರಲಿದೆ. ಇನ್ನು ಏಪ್ರಿಲ್ 19 ಶನಿವಾರ ಮತ್ತು ಏಪ್ರಿಲ್ 20 ಭಾನುವಾರದಂದು ಉದ್ಯೋಗಿಗಳಿಗೆ ರಜೆ ಸಿಕ್ಕಂತಾಗಲಿದೆ.

 

ಏಪ್ರಿಲ್‌ 18ರಂದು ದೇಶದ ಹಲವು ಭಾಗಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇರಲಿದೆ. ವಿಶೇಷವಾಗಿ ಕೇರಳ, ಗೋವಾ, ತಮಿಳುನಾಡು ಮತ್ತು ಈಶಾನ್ಯ ರಾಜ್ಯಗಳಿಗೆ ಇದು ಅನ್ವಯವಾಗಲಿದೆ. ಆದರೂ, ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ ಶಾಲೆ ಅಥವಾ ಕಾಲೇಜಿನಿಂದ ರಜೆ ಬಗ್ಗೆ ಮಾಹಿತಿಯನ್ನು ಪಡೆಯುವುದು ಒಳಿತು. ಏಕೆಂದರೆ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ನಿಯಮಗಳಿರುತ್ತವೆ.