Home News Andrapradesh: ಬೆಳಿಗ್ಗೆ 2ನೇ ಮಗುವಿನ ಜನನ, ಅದೇ ದಿನ ಸಂಜೆ ಮೊದಲ ಮಗುವಿನ ಮರಣ !!...

Andrapradesh: ಬೆಳಿಗ್ಗೆ 2ನೇ ಮಗುವಿನ ಜನನ, ಅದೇ ದಿನ ಸಂಜೆ ಮೊದಲ ಮಗುವಿನ ಮರಣ !! ಆಂಧ್ರ ಕುಟುಂಬದಲ್ಲೊಂದು ಮನ ಮಿಡಿಯುವ ಘಟನೆ

Hindu neighbor gifts plot of land

Hindu neighbour gifts land to Muslim journalist

Andrapradesh: ಮಹಿಳೆಯೊಬ್ಬಳು ಬೆಳಿಗ್ಗೆ ತನ್ನ ಎರಡನೇ ಮಗುವಿಗೆ ಜನ್ಮ ನೀಡಿದ್ದು, ಅದೇ ದಿನ ಸಂಜೆ ಆಕೆಯ ಮೊದಲ ಮಗು ಸಾವನ್ನಪ್ಪಿದ ಮನ ಮಿಡಿಯುವ ಘಟನೆಯೊಂದು ಆಂಧ್ರಪ್ರದೇಶದಲ್ಲಿ ನಡೆದಿದೆ.

ಆಂಧ್ರಪ್ರದೇಶದ ಸತ್ಯ ಸಾಯಿ ಜಿಲ್ಲೆಯಲ್ಲಿ ಈ ಒಂದು ದುರಂತ ಬೆಳಕಿಗೆ ಬಂದಿದೆ. ಅಂದಹಾಗೆ ಜಿಲ್ಲೆಯ ಚೆನ್ನೆಕೊಥಪಲ್ಲಿ ಮಂಡಲದ ಪ್ಯಾಡಿಂಡಿಯ ದಂಪತಿಗಳಾದ ಪ್ರಸಾದ್ ಮತ್ತು ಅಂಜಲಿ 10 ವರ್ಷಗಳ ಹಿಂದೆ ವಿವಾಹವಾಗಿದ್ದು, ಈ ದಂಪತಿಗೆ 8 ವರ್ಷದ ಮಗ ದಿಲೀಪ್ ಇದ್ದಾರೆ. ಈಗ ಪ್ರಸಾದ್ ಅವರ ಪತ್ನಿ ಇತ್ತೀಚೆಗೆ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದರು. ಅಜ್ಜಿ ಬಟ್ಟೆ ಒಗೆಯಲು ಕೊಳಕ್ಕೆ ಹೋದಾಗ, ಅವರನ್ನು ಹಿಂಬಾಲಿಸಿದ ದಿಲೀಪ್ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಬೆಳಿಗ್ಗೆ ಮಗುವಿಗೆ ಜನ್ಮ ನೀಡಿದ ಸಂತೋಷ ದಂಪತಿಗಳಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ. ಆ ಸಂಜೆ ಪ್ರಸಾದ್ ಮತ್ತು ಅಂಜಲಿ ದಂಪತಿಯ ಮೊದಲ ಮಗ ದಿಲೀಪ್ ಕೊಳದಲ್ಲಿ ಸಾವನ್ನಪ್ಪಿದ್ದು ಕುಟುಂಬವನ್ನು ತೀವ್ರ ದುಃಖದಲ್ಲಿ ಮುಳುಗಿಸಿದೆ.