Home News Shivamogga: ಪೆಟ್ರೋಲ್‌ ಬಂಕ್‌ ತೋರಿಸಿ 17 ಜನರಿಗೆ ಮೋಸ; ಕೋಟಿ ಕೋಟಿ ವಂಚನೆ!

Shivamogga: ಪೆಟ್ರೋಲ್‌ ಬಂಕ್‌ ತೋರಿಸಿ 17 ಜನರಿಗೆ ಮೋಸ; ಕೋಟಿ ಕೋಟಿ ವಂಚನೆ!

Hindu neighbor gifts plot of land

Hindu neighbour gifts land to Muslim journalist

Shivamogga: ಒಂದು ಪೆಟ್ರೋಲ್‌ ಬಂಕ್‌ ತೋರಿಸಿ ಪಾರ್ಟ್ನರ್‌ಶಿಪ್‌ ಕೊಡುವುದಾಗಿ ಹೇಳಿ ಕೋಟಿ ಕೋಟಿ ಹಣ ಲೂಟಿ ಮಾಡಿದ ಆರೋಪದಲ್ಲಿ ತೀರ್ಥಹಳ್ಳಿಯ ಗೋಮತಿ ಪೆಟ್ರೋಲ್‌ ಬಂಕ್‌ ಓನರ್‌ ಆರತಿಯ ಮೇಲೆ ದೂರು ದಾಖಲಾಗಿದೆ.

ಗೋಮತಿ ಪೆಟ್ರೋಲ್‌ ಬಂಕ್‌ ಓನರ್‌ ಆಗಿರುವ ಆರತಿ ಅವರು ಬಂಕ್‌ ತೋರಿಸಿ ಜನರಿಗೆ ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ. ಪೆಟ್ರೋಲ್‌ ಬಂಕ್‌ನಲ್ಲಿ ಪಾರ್ಟ್ನರ್‌ಶಿಪ್‌ ಕೊಡುತ್ತೇನೆಂದು ನಂಬಿಸಿ 4 ಲಕ್ಷದಿಂದ 50 ಲಕ್ಷ ರೂಪಾಯಿ ತನಕ ವಂಚನೆ ಮಾಡಿರುವ ಆರೋಪವಿದೆ.

ಆರತಿ ವಿಶಾಲ್‌ ಮತ್ತು ಆಕೆಯ ಪತಿ ಕಳೆದ ಎರಡು ವರ್ಷಗಳಿಂದ ತೀರ್ಥಹಳ್ಳಿ ಮತ್ತು ಶಿವಮೊಗ್ಗದಲ್ಲಿ 17 ಜನರಿಗೆ ವಂಚನೆ ಮಾಡಿರುವ ಆರೋಪವಿದೆ. ಬ್ಯಾಂಕ್‌ ಖಾತೆ ಮೂಲಕ ಹಣ ಸ್ವೀಕರಿಸಿ ವಂಚಿಸಿದ್ದಾರೆನ್ನಲಾಗಿದೆ.

ಪಡೆದ ಹಣಕ್ಕೆ ಚೆಕ್‌ ಮತ್ತಿತರ ದಾಖಲೆಗಳನ್ನು ನೀಡಿದ್ದು, ಹಣ ಪಾವತಿ ಕುರಿತು ವಿಚಾರ ಮಾಡಿದವರಿಗೆ ಆವಾಜ್‌ ಹಾಕಿದ್ದಾರೆ ಎಂದು ಹೇಳಲಾಗಿದೆ. ವಂಚನೆಗೆ ಒಳಗಾದವರು ಇದೀಗ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಆರತಿ ಮತ್ತು ಆಕೆಯ ಪತಿಯ ವಿರುದ್ಧ ವಿವಿಧ ಠಾಣೆಗಳಲ್ಲಿ FIR ದಾಖಲು ಮಾಡಲಾಗಿದೆ.