Home News Kasaragod: ಪ್ರಿಯಕರನ ಜೊತೆ ಮಾತನಾಡಲು ಅಡ್ಡಿಯಾದ 10 ವರ್ಷದ ಮಗ: ಕಾದ ಪಾತ್ರೆಯಿಂದ ಹೊಟ್ಟೆ ಸುಟ್ಟು,...

Kasaragod: ಪ್ರಿಯಕರನ ಜೊತೆ ಮಾತನಾಡಲು ಅಡ್ಡಿಯಾದ 10 ವರ್ಷದ ಮಗ: ಕಾದ ಪಾತ್ರೆಯಿಂದ ಹೊಟ್ಟೆ ಸುಟ್ಟು, ತಾಯಿ ಪ್ರಿಯಕರನ ಜೊತೆ ಎಸ್ಕೇಪ್‌

Hindu neighbor gifts plot of land

Hindu neighbour gifts land to Muslim journalist

Kasaragod: ಕ್ರೂರಿ ತಾಯೊಬ್ಬಳು ತನ್ನ ಪ್ರೇಮ ಸಂಬಂಧಕ್ಕೆ ತಾನೇ ಹೆತ್ತ ಮಗು ಅಡ್ಡಿಯಾಗಿದೆ ಎಂದು ಹತ್ತು ವರ್ಷದ ಮಗನಿಗೆ ಬಿಸಿ ಪಾತ್ರೆಯಿಂದ ಬರೆ ಎಳೆದು ನರಳುವಂತೆ ಮಾಡಿ, ನಂತರ ಪ್ರಿಯಕರನ ಜೊತೆ ಪರಾರಿಯಾಗಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಮಹಿಳೆ ಓರ್ವ ಯುವಕನ ಜೊತೆ ಅಕ್ರಮ ಪ್ರೇಮ ಸಂಬಂಧ ಹೊಂದಿದ್ದಳು. ಇವರಿಬ್ಬರೂ ವಿಡಿಯೋ ಕಾಲ್‌ನಲ್ಲಿ ತಮ್ಮ ಸರಸ ಸಲ್ಲಾಪದಲ್ಲಿ ದಿನಾ ಗಂಟೆಗಟ್ಟಲೆ ಸಮಯ ಕಳೆಯುತ್ತಿದ್ದರು. ಆದರೆ ಇವರ ಈ ಅಕ್ರಮ ಸಂಬಂಧಕ್ಕೆ ಮಗ ಅಡ್ಡಿಯಾಗಿದ್ದಾನೆ. ಪ್ರಿಯಕರನ ಜೊತೆ ಮಾತನಾಡುವಾಗ ಮಗ ಅಡ್ಡಿಯಾಗುತ್ತಾನೆಂದು, ಕ್ರೂರಿ ತಾಯಿ ಅಲ್ಯೂಮಿನಿಯಂ ಪಾತ್ರೆನ್ನು ಕಾಯಿಸಿ ಮಗನ ಹೊಟ್ಟೆಗೆ ಒತ್ತಿ ಇಟ್ಟು ಹಿಂಸೆ ಕೊಟ್ಟಿದ್ದಾಳೆ.

ನಂತರ ಆತನನ್ನು ಅಲ್ಲೇ ನರಳಲು ಬಿಟ್ಟು, ಪ್ರಿಯತಮನ ಜೊತೆ ಎಸ್ಕೇಪ್‌ ಆಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.