Home News King Cobra: ಮೌಂಟ್ ಎವರೆಸ್ಟ್ ನಲ್ಲಿ ಕಾಣಿಸಿಕೊಂಡ 10 ವಿಷಕಾರಿ ಕಾಳಿಂಗ ಸರ್ಪ – ವಿಜ್ಞಾನಿಗಳಲ್ಲಿ...

King Cobra: ಮೌಂಟ್ ಎವರೆಸ್ಟ್ ನಲ್ಲಿ ಕಾಣಿಸಿಕೊಂಡ 10 ವಿಷಕಾರಿ ಕಾಳಿಂಗ ಸರ್ಪ – ವಿಜ್ಞಾನಿಗಳಲ್ಲಿ ಹೆಚ್ಚಿದ ಆತಂಕ.. ಇದು ಎಚ್ಚರಿಕೆಯ ಸಂದೇಶ!!

Hindu neighbor gifts plot of land

Hindu neighbour gifts land to Muslim journalist

King Cobra : ನಾವು ಆಗಾಗ ಕೆಲವು ಮಾಧ್ಯಮಗಳಲ್ಲಿ ಸಮುದ್ರದ ಬಳಿಯಲ್ಲಿ ಅಥವಾ ದಡದಲ್ಲಿ ಕೆಲವು ವಿಶೇಷ ಹಾಗೂ ಅಚ್ಚರಿಯ ಮೀನುಗಳು ಕಾಣಿಸಿಕೊಂಡಿದ್ದು ಇದು ಭೂಮಿಯ ಅಂತ್ಯದ ಎಚ್ಚರಿಕೆ ಎಂದೆಲ್ಲ ಹೇಳುವುದನ್ನು ಕೇಳಿದ್ದೇವೆ. ಇದೀಗ ಹಿಮಾಲಯದಲ್ಲೂ ಕೂಡ ಇಂಥದ್ದೇ ಘಟನೆ ಬೆಳಕಿಗೆ ಬಂದಿದೆ. ಹಿಮಾಲಯದಲ್ಲಿ, ಅದರಲ್ಲೂ ವಿಶೇಷವಾಗಿ ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಬಳಿ ವಿಷಕಾರಿ ಹಾವುಗಳು ಕಾಣಿಸಿಕೊಂಡಿರುವುದು ವಿಜ್ಞಾನಿಗಳನ್ನು ಚಿಂತೆಗೀಡು ಮಾಡಿದೆ.

 

ಹೌದು, ಒಂದೂವರೆ ತಿಂಗಳ ಅವಧಿಯಲ್ಲಿ, ನೇಪಾಳದ ಮೌಂಟ್ ಎವರೆಸ್ಟ್ ಬಳಿ 9 ಕಾಳಿಂಗ ಸರ್ಪಗಳು ಸೇರಿದಂತೆ 10 ವಿಷಕಾರಿ ಹಾವುಗಳನ್ನು ಹಿಡಿಯಲಾಗಿದೆ. ಮೌಂಟ್ ಎವರೆಸ್ಟನಿಂದ ಕೇವಲ 160 ಕಿಲೋಮೀಟರ್ ದೂರದಲ್ಲಿ ಈ ಹಾವುಗಳು ಕಂಡು ಬಂದಿವೆ. ಮೌಂಟ್ ಎವರೆಸ್ಟ್ ಸುತ್ತಲೂ ಈ ಹಾವುಗಳು ಕಂಡು ಬಂದಿರುವುದು ಕೇವಲ ಅಚ್ಚರಿಯ ಘಟನೆ ಮಾತ್ರವಲ್ಲ, ಇದು ಇದು ಜಾಗತಿಕ ತಾಪಮಾನ ಏರಿಕೆಯ ವ್ಯಾಪಕ ಪರಿಣಾಮಗಳ ಎಚ್ಚರಿಕೆಯ ಸಂಕೇತವಾಗಿದೆ ಎಂದು ತಜ್ಞರು ಹೇಳಿದ್ದಾರೆ.

 

ನೇಪಾಳ ಪರ್ವತ ಪ್ರದೇಶಗಳಲ್ಲಿ ಪ್ರತಿವರ್ಷ 0.05 ಡಿಗ್ರಿ ಸೆಲ್ಸಿಯಸ್‌ ನಷ್ಟು ತಾಪಮಾನ ಏರಿಕೆಯಾಗುತ್ತಿರುವುದೇ ಈ ಹಾವುಗಳ ವಲಸೆಗೆ ಕಾರಣವಾಗುತ್ತಿದೆ ಎಂದು ವಿಜ್ಞಾನಿಗಳು ದೂರಿದ್ದಾರೆ. ತಜ್ಞರ ಅಧ್ಯಯನದ ಪ್ರಕಾರ, ಬಿಸಿಯೇರುತ್ತಿರುವ ತಾಪಮಾನದಿಂದಾಗಿ ಉಷ್ಣವಲಯದ ಈ ಹಾವುಗಳು ಇಲ್ಲಿ ವಾಸಿಸಲು ಅನುವು ಮಾಡುತ್ತಿದೆ. ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು, ನಾವು ತಾಪಮಾನ ಏರಿಕೆ ನಿಗ್ರಹದಲ್ಲಿ ಹಿಂದೆ ಬಿದ್ದಿರುವುದರ ಸೂಚನೆಯಾಗಿದೆ ಎಂದು ಉರಗ ರಕ್ಷಕ ಸುಬೋಧ್‌ ಆಚಾರ್ಯ ತಿಳಿಸಿದ್ದಾರೆ.