Home News ಬೆಂಗಳೂರು Bengaluru: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಅವ್ಯವಸ್ಥೆ! ಕಣ್ಣು, ಮೂಗು ಇಲಿಗಳ ಪಾಲು! ಇದಕ್ಕೆಲ್ಲಾ ಹೊಣೆ...

Bengaluru: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಅವ್ಯವಸ್ಥೆ! ಕಣ್ಣು, ಮೂಗು ಇಲಿಗಳ ಪಾಲು! ಇದಕ್ಕೆಲ್ಲಾ ಹೊಣೆ ಯಾರು?!

Hindu neighbor gifts plot of land

Hindu neighbour gifts land to Muslim journalist

Bengaluru: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಪ್ರತಿಷ್ಠಿತ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದ ಮೃತದೇಹದ ಸಿಕ್ಕ ಸಿಕ್ಕ ಭಾಗಗಳನ್ನು ಇಲಿಗಳು ಕಚ್ಚಿ ತಿಂದಿರುವುದಲ್ಲದೆ, ಸ್ಥಳಗಳು ಗಬ್ಬು ನಾರುತ್ತಿರುವುದು ಬೆಳಕಿಗೆ ಬಂದಿದೆ. ಹೌದು, ಕುಟುಂಬದ ಸದಸ್ಯರು, ಕುಟುಂಬದ ವ್ಯಕ್ತಿ ಒಬ್ಬರು ಸಾವನ್ನಪ್ಪಿದ್ದಾರೆ ಎಂಬ ನೋವಿನ ಜೊತೆಗೆ ಈಗ ಅವರ ಶವವನ್ನು ಇಲಿಗಳು ತಿಂದು ವಿರೂಪವಾಗಿ ನೋಡುವ ನೋವು ಕುಟುಂಬದ ಸದಸ್ಯರಿಗೆ ಎದುರಾಗಿದೆ.

ಮಾಹಿತಿ ಪ್ರಕಾರ, ನಗರದ ರಂಗಸ್ವಾಮಿ (37) ಹರ್ನಿಯಾ ಸಮಸ್ಯೆಯಿಂದ ಶೇಷಾದ್ರಿಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಗಾಗಿತ್ತು. ಆಪರೇಷನ್ ಸಂದರ್ಭದಲ್ಲಿ ಸಮಸ್ಯೆ ಆದ ಕಾರಣ ಕೆಜಿ ಹಳ್ಳಿಯ ಅಂಬೇಡ್ಕರ್ ಮೆಡಿಕಲ್ ಕಾಲೇಜಿಗೆ ಕಳುಹಿಸಲಾಗಿತ್ತು. ಆದ್ರೆ ಕೆಲ ಹೊತ್ತಲೇ ಅವರು ಸಾವನ್ನಪ್ಪಿದ್ದಾರೆ.
ಇನ್ನು ಸಣ್ಣ ಶಸ್ತ್ರಚಿಕಿತ್ಸೆಯಲ್ಲೂ ನಿರ್ಲಕ್ಷ್ಯ ಮಾಡಿದ ವೈದ್ಯರ ವಿರುದ್ಧ ದೂರು ಕೊಡಲು ಶವಾಗಾರದಲ್ಲೇ ದೇಹ ಇರಿಸಲು ಕುಟುಂಬ ತೀರ್ಮಾನಿಸಿತ್ತು. ಇನ್ನೇನು ದೂರು ಕೊಟ್ಟು ಬರುವಷ್ಟರಲ್ಲಿ ಶವದ ಮುಖ ವಿಕಾರವಾಗಿತ್ತು.

ಹೌದು, ಸೋಮವಾರ ಸಂಜೆ ಸಾವನ್ನಪ್ಪಿದ್ದ ವ್ಯಕ್ಯಿಯ ಮೃತದೇಹವನ್ನ ನಗರದ ಕೆಜಿ ಹಳ್ಳಿಯ ಅಂಬೇಡ್ಕರ್ ಮೆಡಿಕಲ್ ಕಾಲೇಜಿನ ಶವಾಗಾರದಲ್ಲಿ ಇಡಲಾಗಿತ್ತು. ಆದ್ರೆ ಕೋಲ್ಡ್ ಸ್ಟೋರೆಜ್‍ನಲ್ಲಿ ಶವ ಇಟ್ಟಿದ್ರೂ ಮೂಗು, ಕಣ್ಣಿನ ರೆಪ್ಪೆಯನ್ನು ಇಲಿಗಳು ತಿಂದು ಹಾಕಿದೆ ಎಂದು ಆರೋಪ ಮಾಡಲಾಗಿರುವುದು ವಿಷಾದನೀಯವೇ ಸರಿ. ಇದೀಗ ಇಲಿಗಳು ಕಣ್ಣಿನ ರೆಪ್ಪೆ ಹಾಗೂ ಮೂಗನ್ನು ತಿಂದಿರುವುದನ್ನು ಆಸ್ಪತ್ರೆಯವರು ಒಪ್ಪಿಕೊಂಡಿದ್ದಾರೆ. ಇವರ ವಿರುದ್ಧ ಕ್ರಮ ಆಗಬೇಕು, ನಮಗೆ ನ್ಯಾಯ ಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.