Home News ಬೆಂಗಳೂರು Bike accident: ಚಿಕ್ಕಮಗಳೂರಿನ ಬ್ಲಾಕ್ ಕ್ಯಾಟ್ ಕಮಾಂಡೋ ರಸ್ತೆ ಅಪಘಾತಕ್ಕೆ ಬಲಿ, ಹೊಸ ಬೈಕ್ ರೈಡ್...

Bike accident: ಚಿಕ್ಕಮಗಳೂರಿನ ಬ್ಲಾಕ್ ಕ್ಯಾಟ್ ಕಮಾಂಡೋ ರಸ್ತೆ ಅಪಘಾತಕ್ಕೆ ಬಲಿ, ಹೊಸ ಬೈಕ್ ರೈಡ್ ಸಂದರ್ಭ ಅವಘಡ

Bike accident

Hindu neighbor gifts plot of land

Hindu neighbour gifts land to Muslim journalist

Bike accident: ಬೈಕ್ ಅಪಘಾತದಲ್ಲಿ ಬ್ಲಾಕ್‌ ಕ್ಯಾಟ್ ಕಮಾಂಡೋ ಒಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಯಡಿಯೂರು ಸಮೀಪದ ಹೇಮಾವತಿ ಕ್ರಾಸ್ ಬಳಿ ನಡೆದಿದೆ.
ಮೃತ ಯೋಧನನ್ನು 22 ವರ್ಷದ ದೀಪಕ್ ಎಂದು ಗುರುತಿಸಲಾಗಿದೆ.

ಮೃತ ದೀಪಕ್ ಮೂಲತಃ ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಹೋಬಳಿಯ ತಣಿಗೇಬೈಲು ಸಮೀಪದ ಜೈಪುರ ಎಂಬಲ್ಲಿಯ ನಿವಾಸಿ. 5 ವರ್ಷಗಳ ಹಿಂದೆ 2018 ರಲ್ಲಿ ಇಂಡೋ ಟಿಬೆಟ್ ಬಾರ್ಡರ್ ಪೊಲೀಸ್ ಫೋರ್ಸ್ ಸೇರಿದ್ದು, ಕೆಲಸದಲ್ಲಿ ದಕ್ಷತೆ ಮೆರೆದಿದ್ದ ದೀಪಕ್ ಇತ್ತೀಚೆಗೆ ಎನ್‌ಎಸ್‌ಜಿ ಬ್ಲಾಕ್‌ ಕ್ಯಾಟ್ ಕಮಾಂಡೋ ಆಗಿ ನೇಮಕವಾಗಿದ್ದ.

ಮೂರು ವರ್ಷದ ಹಿಂದೆ 2020 ರಲ್ಲಿ ಮದುವೆಯಾಗಿದ್ದ ದೀಪಕ್ ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈಗ ತಿಂಗಳ ಮೇಲೆ ರಜೆಗೆ ಊರಿಗೆ ಬಂದಿದ್ದರು ದೀಪಕ್. ಅಲ್ಲದೆ ಇತ್ತೀಚೆಗೆ ಹೊಸ ಬೈಕ್‌ ಕೂಡಾ ಖರೀದಿಸಿದ್ದರು. ಊರಿಗೆ ಬಂದು ರಜೆ ಮುಗಿಸಿ ಕೆಲಸಕ್ಕೆ ತೆರಳಲು ಬೆಂಗಳೂರಿಗೆ ಬೈಕಿನಲ್ಲಿ ಹೋಗುತ್ತಿದ್ದಾಗ ದುರಂತ ಸಂಭವಿಸಿದೆ. ಯಡಿಯೂರಿನ ಹೇಮಾವತಿ ಕ್ರಾಸ್ ಬಳಿ ಬೈಕ್ (Bike accident) ಗೆ ಆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ತರೀಕೆರೆಯ ಜೈಪುರದ ಕೃಷ್ಣಮೂರ್ತಿಯವರ ಮಗನಾದ ದೀಪಕ್ ತಂದೆ-ತಾಯಿಗೆ ಒಬ್ಬನೇ ಮಗನಾಗಿದ್ದು, ದೀಪಕ್ ಸಾವಿನಿಂದ ಆತನ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ದೀಪಕ್ ಸಾವಿಗೆ ಹಲವು ಅಧಿಕಾರಿಗಳು, ರಾಜಕಾರಣಿಗಳು ಸಾಲಾಗಿ.ಬಂದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

 

ಇದನ್ನು ಓದಿ: Sudha Murthy: ಸುಧಾಮೂರ್ತಿ ತಮ್ಮ ಮಗನಿಗೆ ಹಣದ ಮೌಲ್ಯವನ್ನು ಹೇಗೆ ಕಲಿಸಿದರು ಎಂದು ನಿಮಗೆ ತಿಳಿದಿದೆಯೇ?