Home News ಉಡುಪಿ ಉಡುಪಿ: ತಾಯಿ ಮಗುವಿನ ಮೃತದೇಹ ಪತ್ತೆ-ಕೊಲೆಯೆಂಬ ಶಂಕೆ!! ಗಂಡ ಹೆಂಡಿರ ಮಧ್ಯೆ ಕಂದಕ ಸೃಷ್ಟಿಸಿದನಾ ಮುಸ್ಲಿಂ...

ಉಡುಪಿ: ತಾಯಿ ಮಗುವಿನ ಮೃತದೇಹ ಪತ್ತೆ-ಕೊಲೆಯೆಂಬ ಶಂಕೆ!! ಗಂಡ ಹೆಂಡಿರ ಮಧ್ಯೆ ಕಂದಕ ಸೃಷ್ಟಿಸಿದನಾ ಮುಸ್ಲಿಂ ವ್ಯಕ್ತಿ!!

Hindu neighbor gifts plot of land

Hindu neighbour gifts land to Muslim journalist

ಉಡುಪಿ:ಜಿಲ್ಲೆಯ ಹೆಬ್ರಿ ಸಮೀಪದ ಆತ್ರಾಡಿ ಎಂಬಲ್ಲಿನ ಮನೆಯೊಂದರಲ್ಲಿ ನಡೆದ ಜೋಡಿ ಕೊಲೆಯ ಪ್ರಕರಣವು ತಿರುವು ಪಡೆದುಕೊಂಡಿದ್ದು, ದಂಪತಿಗಳ ನಡುವೆ ಮುಸ್ಲಿಂ ವ್ಯಕ್ತಿಯೊಬ್ಬನ ಎಂಟ್ರಿಯಾಗಿದ್ದೇ ಕೊಲೆಗೆ ಕಾರಣ ಎನ್ನುವ ಸಂಶಯ ವ್ಯಕ್ತವಾಗಿದೆ.

ಹೌದು, ಅತ್ರಾಡಿ ಗ್ರಾಂ.ಪಂ ವ್ಯಾಪ್ತಿಯ ಮದಗ ಅಂಗನವಾಡಿ ಬಳಿಯ ಮನೆಯೊಂದರಲ್ಲಿ ಪತ್ತೆಯಾಗಿದ್ದ ತಾಯಿ ಮಗಳ ಮೃತದೇಹದ ಸುತ್ತ ಹಲವು ಅನುಮಾನಗಳು ವ್ಯಕ್ತವಾದ ಬೆನ್ನಲ್ಲೇ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ವ್ಯವಸ್ಥಿತ ಕೊಲೆಯ ಹಿಂದೆ ಮಹಿಳೆಯ ಗಂಡ ಅಥವಾ ಇನ್ನೋರ್ವ ವ್ಯಕ್ತಿಯದ್ದೇ ಪಾತ್ರವಿದೆ ಎನ್ನುವಷ್ಟರ ಮಟ್ಟಿಗಿದೆ ಸಾರ್ವಜನಿಕರ ಅನುಮಾನ.

ಮೂಲತಃ ಆಂಧ್ರ ಪ್ರದೇಶದ ಚೆಲುವಿ ಎಂಬಾಕೆ ತನ್ನ ಹತ್ತು ವರ್ಷದ ಮಗಳು ಪ್ರಿಯಾಳೊಂದಿಗೆ ತಾಯಿ ಮನೆಯಲ್ಲಿ ವಾಸವಿದ್ದರು. ಘಟನೆ ನಡೆದ ದಿನ ತಾಯಿ ಹಾಗೂ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದು, ಹಂತಕರ ಕೈಗೆ ಏಕಾಂಗಿಯಾಗಿ ಸಿಕ್ಕ ಚೆಲುವಿ ಹತ್ಯೆಯಾಗಿದ್ದಲ್ಲದೆ, ಏನೂ ಅರಿಯದ ಮುಗ್ಧ ಕಂದಮ್ಮ ಕೂಡಾ ಬರ್ಬರವಾಗಿ ಹತ್ಯೆಯಾಗುವುದರೊಂದಿಗೆ ಜೋಡಿ ಕೊಲೆ ಪ್ರಕರಣವು ಜನತೆಯನ್ನು ಬೆಚ್ಚಿಬೀಳಿಸಿದೆ.

ಮೃತ ಚೆಲುವಿ ಹದಿನೈದು ವರ್ಷಗಳ ಹಿಂದೆ ಸುಬ್ರಮಣ್ಯ ಎಂಬವರನ್ನು ವಿವಾಹವಾಗಿದ್ದು, ಆ ಬಳಿಕ ರಶೀದ್ ಎನ್ನುವ ಮುಸ್ಲಿಂ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದಳು. ಇದೇ ವಿಚಾರವಾಗಿ ಗಂಡ ಹೆಂಡತಿ ನಡುವೆ ಮನಸ್ತಾಪ ಉಂಟಾಗಿದ್ದು, ಚೆಲುವಿ ಪತಿಯನ್ನು ತೊರೆದು ರಶೀದ್ ನೊಂದಿಗೆ ಮುಂಬೈಗೆ ತೆರಳಿದ್ದಳು. ಬಳಿಕ ಊರಿಗೆ ಮರಳಿದ ಆಕೆ ಮತ್ತೊಮ್ಮೆ ಗಂಡನ ಜೊತೆ ಸೇರಿದ್ದು, ಆದರೂ ಅವರಿಬ್ಬರ ನಡುವೆ ಸರಿ ಹೋಗದೆ ತಾಯಿ ಮನೆ ಸೇರಿದ್ದಳು.

ಇತ್ತ ಗಂಡನನ್ನು ತೊರೆದು ಮಗಳೊಂದಿಗೆ ತಾಯಿ ಮನೆಯಲ್ಲಿದ್ದ ಚೆಲುವಿ ಮೃತಪಟ್ಟಿದ್ದು, ಮೃತದೇಹದಲ್ಲಿ ರಕ್ತದ ಗುರುತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಇದೊಂದು ವ್ಯವಸ್ಥಿತ ಕೊಲೆ ಎಂದು ಶಂಕಿಸಲಾಗಿದ್ದು ಕೊಲೆ ನಡೆಸಿದ ಆರೋಪಿ ಯಾರೆಂಬುವುದು ಪೊಲೀಸರ ತನಿಖೆಯ ಬಳಿಕ ಸತ್ಯಾಂಶ ಹೊರಬರಲಿದೆ.