Home News ಉಡುಪಿ ಉಡುಪಿ: ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯಿಂದ ಖಡಕ್ ವಾರ್ನಿಂಗ್ !! | ಸರ್ಕಾರದ ನಿಯಮ ಪಾಲಿಸದಿದ್ದರೆ ಡಿಬಾರ್...

ಉಡುಪಿ: ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯಿಂದ ಖಡಕ್ ವಾರ್ನಿಂಗ್ !! | ಸರ್ಕಾರದ ನಿಯಮ ಪಾಲಿಸದಿದ್ದರೆ ಡಿಬಾರ್ ಫಿಕ್ಸ್

Hindu neighbor gifts plot of land

Hindu neighbour gifts land to Muslim journalist

ಉಡುಪಿಯ ಹಿಜಾಬ್ ವಿವಾದ ಇನ್ನು ಕೂಡ ಮುಂದುವರಿಯುತ್ತಲೇ ಇದೆ. ಆದರೆ ಇದೀಗ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ವಾರ್ನಿಂಗ್ ನೀಡಿದೆ. ಸರ್ಕಾರದ ನಿಯಮ ಪಾಲಿಸದಿದ್ದರೆ ವಿದ್ಯಾರ್ಥಿಗಳನ್ನು ಡಿಬಾರ್ ಮಾಡುತ್ತೇವೆ ಎಂದು ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕಾಲೇಜಿನಲ್ಲಿ ಮೂವತ್ತು ವರ್ಷಗಳಿಂದ ಯಾವುದೇ ತಾರತಮ್ಯ ಮಾಡಿಲ್ಲ. ಆದರೆ ಸರ್ಕಾರದ ನಿಯಮ ಪಾಲಿಸದಿದ್ದರೆ ವಿದ್ಯಾರ್ಥಿಗಳನ್ನು ಡಿಬಾರ್ ಮಾಡುತ್ತೇವೆ. ನಮಗೂ ಪ್ರತಿರೋಧ ಒಡ್ಡಲು ಗೊತ್ತಿದೆ ಎಂದರಲ್ಲದೆ, ಆರು ಜನ ವಿದ್ಯಾರ್ಥಿಗಳು ಸಾವಿರಾರು ವಿದ್ಯಾರ್ಥಿನಿಯರ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿದ್ದಾರೆ ಎಂದು ಗುಡುಗಿದರು.

ಸರ್ಕಾರದ ಆದೇಶದಲ್ಲಿ ಯಾವುದೇ ರಾಜಿ ಇಲ್ಲ. ಆಡಳಿತ ಮಂಡಳಿಯ ಸದಸ್ಯನಾಗಿ ಈವರೆಗೆ ಚರ್ಚೆ ಮಾಡಿದ್ದೇನೆ. ಶೈಕ್ಷಣಿಕವಾಗಿ ಕೊರತೆಯಿದ್ದರೆ ನೀಗಿಸುತ್ತೇವೆ. ಮುಂದಿನ ದಿನದಲ್ಲಿ ಡಿಬಾರ್ ಮಾಡುವ ಕೆಲಸ ನೂರಕ್ಕೆ ನೂರು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.