Home News ಉಡುಪಿ Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಗೆ ಕರೆಂಟ್ ಶಾಕ್ ಹೊಡೆದು ಸಾವು !!

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಗೆ ಕರೆಂಟ್ ಶಾಕ್ ಹೊಡೆದು ಸಾವು !!

Hindu neighbor gifts plot of land

Hindu neighbour gifts land to Muslim journalist

Karkala : ತಮ್ಮೆಲ್ಲರನ್ನು ಅಗಲಿದ್ದ ಅಣ್ಣನ ತಿಥಿ ಕಾರ್ಯಕ್ಕೆ ಸಿದ್ಧತೆ ಮಾಡುತ್ತಿರುವ ಸಂದರ್ಭದಲ್ಲಿ ತಂಗಿಗೆ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಕಾರ್ಕಳ(Karkala) ತಾಲೂಕಿನ ನಿಟ್ಟೆ ಪರಪ್ಪಾಡಿ ಎಂಬಲ್ಲಿಗೆ ಅಣ್ಣನ‌ ತಿಥಿಯ ಪೂರ್ವ ಸಿದ್ಧತೆಗಾಗಿ ತಂಗಿ ಲಲಿತಾ ಬೋಂಡ್ರ ಅವರು ಬಂದಿದ್ದರು. ಗುರುವಾರ ರಾತ್ರಿ ಅವರು ಅಡುಗೆ ಪಾತ್ರೆಗಳನ್ನು ತೊಳೆಯುತ್ತಿದ್ದರು. ಅದೇ ಸಂದರ್ಭದಲ್ಲಿ ಮನೆ ಹೊರಾಂಗಣದಲ್ಲಿ ಅಳವಡಿಸಲಾಗಿದ್ದ ಶಾಮಿಯಾನದ ಕಬ್ಬಿಣದ ಕಂಬವನ್ನು ಹಿಡಿಯುತ್ತಿದ್ದಂತೆ ಅವರು ವಿದ್ಯುತ್ ಶಾಕ್ ತಗುಲಿ ಘಟನಾ ಸ್ಥಳದಲ್ಲಿ ಕುಸಿದು ಬಿದ್ದು ದಾರುಣ ಅಂತ್ಯ ಕಂಡಿದ್ದಾರೆ.

ಅಂದಹಾಗೆ ಶಾಮೀಯನ ಅಳವಡಿಸಿದಾಗ ಅದರ ಕಬ್ಬಣದ ಕಂಬಕ್ಕೆ‌ ಟ್ಯೂಬ್ ಲೈಟ್ ಅಳವಡಿಸಲಾಗಿ ಅದರ ಮೂಲ ವಿದ್ಯುತ್ ಸೋರಿಕೆಯಾಗಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.