Home News ಉಡುಪಿ ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ವತಿಯಿಂದ ದೀಪಾವಳಿ ಸಂಭ್ರಮ | ವಲಯಾಧ್ಯಕ್ಷರ ಭೇಟಿ, ಪೆರ್ವಾಜೆ ಪ್ರಾಥಮಿಕ...

ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ವತಿಯಿಂದ ದೀಪಾವಳಿ ಸಂಭ್ರಮ | ವಲಯಾಧ್ಯಕ್ಷರ ಭೇಟಿ, ಪೆರ್ವಾಜೆ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ಆರ್ಥಿಕ ನೆರವು ಹಸ್ತಾಂತರ

Hindu neighbor gifts plot of land

Hindu neighbour gifts land to Muslim journalist

ಕಾರ್ಕಳ : ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ಇದರ ವತಿಯಿಂದ ದೀಪಾವಳಿ ಸಂಭ್ರಮ ಹಾಗೂ ವಲಯಾಧ್ಯಕ್ಷರ ಭೇಟಿಯ ಕಾರ್ಯಕ್ರಮ ನ.18ರಂದು ಶಿರಡಿ ಸಾಯಿಬಾಬ ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ವಲಯಾಧ್ಯಕ್ಷರಾದ ಲಯನ್ ಸುಭಾಷ್ ಸುವರ್ಣ ದಂಪತಿಗಳು ದೀಪ ಬೆಳಗಿ ಉದ್ಘಾಟನೆ ಮಾಡುವ ಮೂಲಕ ಪ್ರಾರಂಭಿಸಲಾಯಿತು. ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡು ಮುಂದುವರಿಯುತ್ತಿರುವುದು ಸಂತೋಷದಾಯಕ ವಿಚಾರ,ಇನ್ನು ಮುಂದಕ್ಕು ಹೆಚ್ಚು ಹೆಚ್ಚಿನ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಅಂತೆಯೇ ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ಇದರ ನೂತನ ಸದಸ್ಯರಿಗೆ ಲಯನ್ ಪಿನ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತರನ್ನು ಗುರುತಿಸಲಾಯಿತು.

ಪೆರ್ವಾಜೆ ಪ್ರಾಥಮಿಕ ಶಾಲೆಯ ಕಟ್ಟಡಕ್ಕೆ ಸಹಾಯಾರ್ಥವಾಗಿ 10 ಸಾವಿರ ಧನಸಹಾಯವನ್ನು ಶಾಲಾ ಮುಖ್ಯಸ್ಥರಿಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಲಯನ್ ಜ್ಯೋತಿ ರಮೇಶ್, ಕಾರ್ಯದರ್ಶಿ ಲಯನ್ ಪ್ರವೀಣ್ ಸುವರ್ಣ, ಕೋಶಾಧಿಕಾರಿ ಲಯನ್ ವನಿತಾ ವಿಶ್ವನಾಥ್, ಎಕ್ಷಟೆನ್ಶನ್ ಚೇರ್ ಪರ್ಸನ್ ಲಯನ್ ಚಂದ್ರಹಾಸ ಸುವರ್ಣ, ಕ್ಯಾಬಿನೆಟ್ ಸದಸ್ಯರಾದ ಲಯನ್ ಡಾ. ರಾಬರ್ಟ್ ಡಿ’ಮೆಲ್ಲೋ, ಕಾರ್ಕಳ ಲಯನ್ಸ್ ನಿಕಟ ಪೂರ್ವ ಅಧ್ಯಕ್ಷರಾದ ಪ್ರವೀಣ್ ಕೆ. ದಂಪತಿ, ಲಯನ್ ನೋವೆಲ್ ಡಿ’ ಸಿಲ್ವಾ, ಲಯನ್ ಯೋಗೀಶ್ ನಾಯಕ್, ಲಯನ್ ಶರತ್ ಕಾನಂಗಿ, ಲಯನ್ ಗೋಪಾಲ್ ಅಂಚನ್, ಲಯನ್ ಕೆ.ಎಸ್. ರಘುನಾಥ್ ಮೊದಲಾದವರು ಉಪಸ್ಥಿತರಿದ್ದರು.