Home National 11 ವರ್ಷದ ಬಾಲಕಿಯ ಮೇಲೆ ಅಕ್ಕನ ಪ್ರಿಯಕರನಿಂದ ಭೀಕರ ಅತ್ಯಾಚಾರ | ಬಾಲಕಿಯ ಗುಪ್ತಾಂಗಕ್ಕೆ ಕೋಲು...

11 ವರ್ಷದ ಬಾಲಕಿಯ ಮೇಲೆ ಅಕ್ಕನ ಪ್ರಿಯಕರನಿಂದ ಭೀಕರ ಅತ್ಯಾಚಾರ | ಬಾಲಕಿಯ ಗುಪ್ತಾಂಗಕ್ಕೆ ಕೋಲು ತುರುಕಿ ವಿಕೃತಿ ಮೆರೆದ ಕಾಮುಕನ ಬಂಧನ!

Hindu neighbor gifts plot of land

Hindu neighbour gifts land to Muslim journalist

ಅತ್ಯಾಚಾರ ಪ್ರಕರಣ ಅದು ಮಹಿಳೆ ಮೇಲಾಗಿರಲಿ ಬಾಲಕಿಯರ ಮೇಲಾಗಿರಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಮ್ಮಲ್ಲಿ ಕಠಿಣ ಕಾನೂನು ಇದ್ದರೂ ಕ್ಯಾರೇ ಎನ್ನದೇ ಎಗ್ಗಿಲ್ಲದೆ ಅತ್ಯಾಚಾರ ನಡೆಯುತ್ತಲೇ ಇದೆ. ಇಲ್ಲೊಂದು ನಡೆದಿರುವ ಅತ್ಯಾಚಾರ ಪ್ರಕರಣ ಯಾರ ರಕ್ತವನ್ನು ಕೂಡಾ ಕುದಿಯುವಂತೆ ಮಾಡುವುದರಲ್ಲಿ ತಪ್ಪೇನಿಲ್ಲ.

ಸ್ವಂತ ಪ್ರೇಯಸಿಯ ತಂಗಿಯನ್ನು ಪ್ರಿಯಕರನೋರ್ವ ಅತ್ಯಾಚಾರ ಮಾಡಿದ್ದಾನೆ‌ ಅಷ್ಟು ಮಾತ್ರವಲ್ಲದೇ ಆಕೆಯ ಗುಪ್ತಾಂಗಕ್ಕೆ ಕೋಲು ತುರುಕಿ, ವಿಪರೀತ ರಕ್ತಸ್ರಾವವಾಗುವಂತೆ ಮಾಡಿರುವ ಭೀಕರ ಘಟನೆಯೊಂದು ನಡೆದಿದೆ.

ಈ ಘಟನೆ ನಡೆದಿರೋದು ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ. ಬಾಲಕಿ ಈಗ ಸಾವು ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದು, ಕೊಲ್ಕತ್ತಾದ ಸರಕಾರಿ ಆಸ್ಪತ್ರೆಯಲ್ಲಿ ಬದುಕಿಗಾಗಿ ಹೋರಾಟ ನಡೆಸುತ್ತಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಈ ದುರಂತ ಘಟನೆ ಬೆಳಕಿಗೆ ಬಂದ ನಂತರ ಪೊಲೀಸರು ಹೌರಾದ ಡೊಮ್ಮೂರ್ ಜಿಲ್ಲೆಯಿಂದ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆಸಿದವನನ್ನು ಬಂಧಿಸಿದ್ದಾರೆ. 22 ವರ್ಷದ ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.