Home Crime NIA: ಲಾರೆನ್ಸ್ ಬಿಷ್ಣೋಯ್ ಸಹೋದರನ ಪತ್ತೆಗೆ ಖೆಡ್ಡಾ ತೋಡಿದ ಎನ್‌ಐಎ; ಸುಳಿವು ನೀಡಿದವರಿಗೆ 10 ಲಕ್ಷ...

NIA: ಲಾರೆನ್ಸ್ ಬಿಷ್ಣೋಯ್ ಸಹೋದರನ ಪತ್ತೆಗೆ ಖೆಡ್ಡಾ ತೋಡಿದ ಎನ್‌ಐಎ; ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ

Hindu neighbor gifts plot of land

Hindu neighbour gifts land to Muslim journalist

NIA: ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಅನ್ಮೋಲ್ ಬಿಷ್ಣೋಯ್ ಮೇಲೆ ಎನ್ಐಎ ತನ್ನ ಹಿಡಿತವನ್ನು ಬಿಗಿಗೊಳಿಸಲು ಪ್ರಾರಂಭಿಸಿದೆ. ಅನ್ಮೋಲ್ ಬಿಷ್ಣೋಯ್‌ಗೆ ತನಿಖಾ ಸಂಸ್ಥೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. 2022 ರಲ್ಲಿ ಎನ್ಐಎ ದಾಖಲಿಸಿದ ಪ್ರಕರಣಗಳಲ್ಲಿ ಅನ್ಮೋಲ್ ಬಿಷ್ಣೋಯ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲಾಗಿದೆ, ಬಾಬಾ ಸಿದ್ದಿಕಿ ಪ್ರಕರಣದಲ್ಲಿ ಅನ್ಮೋಲ್ ಬಿಷ್ಣೋಯ್ ಅವರ ಹೆಸರು ಕೂಡ ಕಾಣಿಸಿಕೊಂಡಿದೆ.

ಅನ್ಮೋಲ್ ಬಿಷ್ಣೋಯ್ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ. ಸ್ನ್ಯಾಪ್‌ಚಾಟ್ ಮೂಲಕ ಬಾಬಾ ಸಿದ್ದಿಕಿ ಶೂಟರ್‌ಗಳೊಂದಿಗೆ ಸಂಪರ್ಕದಲ್ಲಿದ್ದು, ಸ್ನ್ಯಾಪ್‌ಚಾಟ್‌ನಲ್ಲಿ ಶೂಟರ್‌ಗಳಿಗೆ ಬಾಬಾ ಸಿದ್ದಿಕಿ ಮತ್ತು ಜಿಶಾನ್ ಅವರ ಫೋಟೋಗಳನ್ನು ಕಳುಹಿಸುವ ಮೂಲಕ ಶೂಟರ್‌ಗಳಿಗೆ ಗುತ್ತಿಗೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಅನ್ಮೋಲ್ ಬಿಷ್ಣೋಯ್ ಪ್ರಸ್ತುತ ಅಮೆರಿಕದಲ್ಲಿ ನೆಲೆಸಿದ್ದು ಲಾರೆನ್ಸ್ ಗ್ಯಾಂಗ್ ನಡೆಸುತ್ತಿದ್ದಾರೆ. ದರೋಡೆಕೋರ ಗೋಲ್ಡಿ ಬ್ರಾರ್‌ನ ಸಹಯೋಗದಲ್ಲಿ ಆತ ಗ್ಯಾಂಗ್ ನಡೆಸುತ್ತಿದ್ದಾನೆ. ಅನ್ಮೋಲ್ ಬಿಷ್ಣೋಯ್ ವಿರುದ್ಧ 18 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ.

ಅನ್ಮೋಲ್ ಬಿಷ್ಣೋಯ್ ಜೋಧ್‌ಪುರ ಜೈಲಿನಲ್ಲಿದ್ದು,7 ಅಕ್ಟೋಬರ್ 2021 ರಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ನಂತರ ನಕಲಿ ಪಾಸ್‌ಪೋರ್ಟ್‌ನಲ್ಲಿ ಕೆನಡಾಕ್ಕೆ ಪರಾರಿಯಾಗಿರುವುದಾಗಿ ವರದಿಯಾಗಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಸಲ್ಮಾನ್ ಬಾಲ್ಕನಿಯಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದ ಹೊಣೆಯನ್ನು ಅನ್ಮೋಲ್ ಬಿಷ್ಣೋಯ್ ವಹಿಸಿಕೊಂಡಿದ್ದರು. ಅನ್ಮೋಲ್ ಅವರ ನಿಜವಾದ ಹೆಸರು ಭಾನು. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲೂ ಅನ್ಮೋಲ್ ಬಿಷ್ಣೋಯ್ ಹೆಸರು ಕೇಳಿಬಂದಿತ್ತು. ವಿದೇಶದಲ್ಲಿ ಕುಳಿತುಕೊಂಡು ಗೋಲ್ಡಿ ಬ್ರಾರ್ ಮತ್ತು ರೋಹಿತ್ ಗೋಡಾರಾ ಜೊತೆಗೂಡಿ ಸಿದ್ದು ಮೂಸೆವಾಲಾ ಹತ್ಯೆಗೆ ಸಂಪೂರ್ಣ ಯೋಜನೆ ರೂಪಿಸಿದ್ದರು ಎನ್ನುವ ಆರೋಪ ಈತನ ಮೇಲಿದೆ.