Home National 16 ವರ್ಷದ ಬಾಲಕಿಯನ್ನು ಪುಸಲಾಯಿಸಿ ತಾಳಿ ಕಟ್ಟಿ ಮೂರು ದಿನ ಸಂಸಾರ ಮಾಡಿದ ಯುವಕ|ಬಾಲಕಿಯ ತಂದೆಯ...

16 ವರ್ಷದ ಬಾಲಕಿಯನ್ನು ಪುಸಲಾಯಿಸಿ ತಾಳಿ ಕಟ್ಟಿ ಮೂರು ದಿನ ಸಂಸಾರ ಮಾಡಿದ ಯುವಕ|ಬಾಲಕಿಯ ತಂದೆಯ ದೂರಿನನ್ವಯ ಆರೋಪಿ ಅರೆಸ್ಟ್

Hindu neighbor gifts plot of land

Hindu neighbour gifts land to Muslim journalist

ಬಾಲ್ಯ ವಿವಾಹ ಕಾನೂನು ಪ್ರಕಾರ ಅಪರಾಧ. ಆದರೂ ಕೆಲವೊಂದು ಕಡೆ ಈ ಪದ್ಧತಿ ಜಾರಿಯಲ್ಲಿದೆ. ಸರಕಾರ ಈ ಪದ್ಧತಿಯನ್ನು ತೊಡೆದು ಹಾಕಲು ಪರಿಶ್ರಮ ಪಡುತ್ತಲೇ ಇದೆ. ಇದಕ್ಕೆ ಪೂರಕವಾಗಿ ಇಲ್ಲೊಬ್ಬ 16 ವರ್ಷದ ಬಾಲಕಿಯನ್ನು ಮದುವೆಯಾಗಿದ್ದಾನೆ. ಅದು ಕೂಡಾ ಆಕೆಯನ್ನು ಬಣ್ಣ ಬಣ್ಣದ ಮಾತುಗಳಿಂದ ಪುಸಲಾಯಿಸಿ ಆಕೆಯನ್ನು ತಮಿಳುನಾಡಿಗೆ ಕರೆದುಕೊಂಡು ಹೋಗಿ ಅಲ್ಲೇ ಒಂದು ಮನೆ ಮಾಡಿ, ಮನೆಯಲ್ಲೇ ತಾಳಿ ಕಟ್ಟಿದ್ದಾನೆ.

ಈತನ ಉದ್ದೇಶ ಆಕೆಯನ್ನು ಮದುವೆ ಆಗುವುದೋ ಅಥವಾ ಆಕೆಯನ್ನು ಕಾಮವಾಂಛೆಗೆ ಬಳಸಿಕೊಳ್ಳುವುದೋ ಎಲ್ಲವೂ ತನಿಖೆಯ ಮೂಲಕ ತಿಳಿದು ಬರಬೇಕಿದೆ.

ಬಾಲಕಿಯನ್ನು ತಮಿಳುನಾಡಿಗೆ ಕರೆದುಕೊಂಡು ಹೋದ ಗುಂಡ್ಲುಪೇಟೆ ತಾಲೂಕಿನ ಬೆಳಚವಾಡು ಗ್ರಾಮದ ಮಹೇಂದ್ರ ( 21) ಎಂಬಾತ ಆಕೆಯನ್ನು ಆ ಮನೆಯಲ್ಲಿ ಮೂರು ದಿನಗಳ ಕಾಲ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎನ್ನಲಾಗಿದೆ.

ಬಾಲಕಿಯನ್ನು ಕರೆದೊಯ್ದು ತಾಳಿ ಕಟ್ಟಿ, 3 ದಿನ ಸಂಸಾರ ನಡೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬೇಗೂರು ಪಿಎಸ್ ಐ ರಾಜೇಂದ್ರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ. ಬಾಲಕಿಯನ್ನು ಬಾಲಮಂದಿರಕ್ಕೆ ಸೇರಿಸಲಾಗಿದೆ.

ಬಾಲಕಿಯ ತಂದೆ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.