Home National POK ಯಲ್ಲಿ ಪಾಕ್ ಸೇನೆಯ ಮೇಲೆ ಸ್ಥಳೀಯರ ದಾಳಿ, ಮೊದಲ ಸಲ ಹಾರಿದ ಭಾರತ ಧ್ವಜ,...

POK ಯಲ್ಲಿ ಪಾಕ್ ಸೇನೆಯ ಮೇಲೆ ಸ್ಥಳೀಯರ ದಾಳಿ, ಮೊದಲ ಸಲ ಹಾರಿದ ಭಾರತ ಧ್ವಜ, ಭುಗಿಲೆದ್ದು ಹಿಂಸಾಚಾರ !!

POK

Hindu neighbor gifts plot of land

Hindu neighbour gifts land to Muslim journalist

POK: ಪಾಕ್ ಆಕ್ರಮಿತ ಕಾಶ್ಮೀರವನ್ನು ಸದ್ಯದಲ್ಲೇ ಭಾರತಕ್ಕೆ ಸೇರ್ಪಡೆ ಮಾಡುತ್ತೇವೆ, ಅದು ಎಂದಿಗೂ ಭಾರತದ ಅವಿಭಾಜ್ಯ ಅಂಗ ಎಂದು ರಕ್ಷಣಾ ಸಚಿವರು, ಕೇಂದ್ರ ಗೃಹ ಸಚಿವರು ಇತ್ತೀಚೆಗಷ್ಟೆ ಹೇಳಿದ್ದರು. ಈ ಬೆನ್ನಲ್ಲೇ ಇದೀಗ POK ಯಲ್ಲಿ ಮಹತ್ವದ ಬೆಳವಣಿಗೆ ಒಂದು ನಡೆದಿದೆ.

https://twitter.com/TimesAlgebraIND/status/1789060808204509371

ಹೌದು, ಕೆಲ ದಿನಗಳ ಹಿಂದೆ ರಾಜನಾಥ್ ಸಿಂಗ್(Rajanath Singh) ಪಾಕ್ ಆಕ್ರಮಿತ ಕಾಶ್ಮೀರ ತಾನಾಗೆ ಭಾರತದೊಂದಿಗೆ ವಿಲೀನ ಆಗುತ್ತದೆ ಎಂದು ಹೇಳಿದ್ದರು. ಅವರು ಹೇಳಿದಂತೆ ಇದೀಗ ಪಿಒಕೆ ತಾನಾಗೆ ಭಾರತದೊಂದಿಗೆ ವಿಲೀನಗೊಳ್ಳುವ ಲಕ್ಷಣಗಳು ಗೋಚರಿಸಿದೆ. ಯಾಕೆಂದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರಿ ಹಿಂಸಾಚಾರ ಭುಗಿಲೆದ್ದಿದೆ. ಸ್ಥಳೀಯರು ಪಾಕಿಸ್ತಾನ ಸೇನೆ ಮೇಲೆ ದಾಳಿ ಮಾಡಿದ್ದಾರೆ. ಇದೇ ವೇಳೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇದೇ ಮೊದಲ ಭಾರಿಗೆ ಭಾರತದ ದ್ವಜ ಹಾರಾಡಿದೆ.

ಇದನ್ನೂ ಓದಿ: EPFO for Foreign Workers: ಇಂತವರಿಗಿನ್ನು ಪೆನ್ಶನ್ ಮತ್ತು ಪಿಎಫ್ ಇಲ್ಲ !!

ಜನ ಬುಗಿಲೆದ್ದಿರುವುದು ಏಕೆ?
ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆ, ತುತ್ತು ಅನ್ನಕ್ಕೂ ಪರದಾಡ, ವಿದ್ಯುತ್ ಕಡಿತ ಸೇರಿದಂತೆ ಹಲವು ಸಮಸ್ಯೆಗಳಿಂದ ಹೈರಾಣಾಗಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಜನ, ಪಾಕಿಸ್ತಾನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಪಾಕಿಸ್ತಾನ ಸೇನೆ ಹಾಗೂ ಪಾಕಿಸ್ತಾನ ಪೊಲೀಸ್ ವಿರುದ್ಧ ನಡೆಯುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ಸ್ಥಳೀಯರು ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಇದೀಗ ಈ ವಿಡಿಯೋ ಹಾಗೂ ಫೋಟೋಗಳು ಭಾರಿ ವೈರಲ್ ಆಗಿದ್ದು, ಪಾಕಿಸ್ತಾನದ ಆತಂಕ ಹೆಚ್ಚಾಗಿದೆ. ಎಲ್ಲೆಡೆ ಕರ್ಫ್ಯೂ ಜಾರಿ ಮಾಡಲಾಗಿದೆ.

ಇದನ್ನೂ ಓದಿ: Illigal Relationship: ಪರ ಪುರುಷರೊಂದಿಗೆ ರೆಡ್ ಹ್ಯಾಂಡ್ ಆಗಿ ಪತಿ ಕೈಗೆ ಸಿಕ್ಕಿಬಿದ್ದ ವೈದ್ಯೆ ಪತ್ನಿ; ಮುಂದೆ ಆಗಿದ್ದೇನು?

ಕೇಂದ್ರ ನಾಯಕರು ಏನು ಹೇಳಿದ್ದರು?
ಇತ್ತೀಚಗಷ್ಟೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಭಾಗ, ತನಾಗಿಯೇ ಭಾರತದ ಜೊತೆ ಪಿಒಕೆ ವಿಲೀನಗೊಳ್ಳಲಿದೆ ಎಂದಿದ್ದರು. ಇತ್ತ ಕೇಂದ್ರ ಗೃಹ ಸಿಚವ ಅಮಿತ್ ಶಾ ಕೂಡ ಪಿಒಕೆ ನಮ್ಮದು, ಅದು ಎಂದಿಗೂ ನಮ್ಮದಾಗಬೇಕು. ಸದ್ಯದಲ್ಲೆ ನಮಗೆ ಸೇರುತ್ತದೆ ಎಂದು ಪುನರುಚ್ಚರಿಸಿದ್ದರು.

ಇದನ್ನೂ ಓದಿ: Pakistan Honey Trapping: ಪಾಕಿಸ್ತಾನಿ ಮಹಿಳೆಯ ಹನಿಟ್ರ್ಯಾಪ್‌ಗೆ ಸಿಲುಕಿದ ಭಾರತೀಯ ಡ್ರೋನ್ ಇಂಜಿನಿಯರ್ : ಸೇನೆಯ ಪ್ರಮುಖ ಮಾಹಿತಿ ಸೋರಿಕೆ