Home National Lesbian Marriage: ಗರ್ಭಿಣಿಯನ್ನೇ ಮದುವೆಯಾದಳು ಮತ್ತೊಬ್ಬಳು ಯುವತಿ – ಏನಿದು ವಿಚಿತ್ರ ಘಟನೆ ?!

Lesbian Marriage: ಗರ್ಭಿಣಿಯನ್ನೇ ಮದುವೆಯಾದಳು ಮತ್ತೊಬ್ಬಳು ಯುವತಿ – ಏನಿದು ವಿಚಿತ್ರ ಘಟನೆ ?!

Lesbian Marriage

Hindu neighbor gifts plot of land

Hindu neighbour gifts land to Muslim journalist

Lesbian Marriage: ಉತ್ತರ ಪ್ರದೇಶದ ಬದೌನ್‌ ಎಂಬಲ್ಲಿ ಇಬ್ಬರು ಮಹಿಳೆಯರು( Lesbian Marriage)ಮದುವೆಯಾಗಿರುವ ಅಪರೂಪದ ಘಟನೆ ವರದಿಯಾಗಿದೆ.

ಉತ್ತರ ಪ್ರದೇಶದ ದತಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ಬೇರೆ ಬೇರೆ ಗ್ರಾಮಗಳಲ್ಲಿ ನೆಲೆಸಿದ್ದರು. ಇವರಿಬ್ಬರು ದತಗಂಜ್‌ನ ಬಟ್ಟೆ ಅಂಗಡಿಯಲ್ಲಿ ಸೇಲ್ಸ್ ಗರ್ಲ್ ಆಗಿ ಕಾರ್ಯ ಮಾಡುತ್ತಿದ್ದರಂತೆ. ಕೆಲಸ ಮಾಡುತ್ತಿದ್ದಾಗಲೆ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಇದರ ನಂತರ ಇಬ್ಬರೂ ಜೊತೆಯಾಗಿ ಜೀವಿಸುವ ಹಂಬಲ ವ್ಯಕ್ತಪಡಿಸಿಕೊಂಡಿದ್ದಾರೆ. ಇಬ್ಬರಲ್ಲಿ ಒಬ್ಬಳು ಗರ್ಭಿಣಿಯಾಗಿದ್ದು, ತನ್ನ ಗಂಡನ ಕಿರುಕುಳ ತಾಳಲಾರದೆ ಬೇರೆಯಾಗಲು ನಿರ್ಧಾರ ಮಾಡಿದ್ದಾಳೆ. ಇಬ್ಬರು ಜೊತೆಯಾಗಿ ಜೀವಿಸುವ ಹಂಬಲ ಹೊಂದಿದ್ದ ಹಿನ್ನೆಲೆ ಸೆ.26ರಂದು ಇಬ್ಬರೂ ವಾಕಿಂಗ್ ಹೋಗುವಂತೆ ಮನೆಯಿಂದ ಹೊರಟು ಬರೇಲಿ ತಲುಪಿದ್ದಾರೆ. ಆನಂತರ ದೇವಸ್ಥಾನ ಒಂದಕ್ಕೆ ತೆರಳಿ ಪರಸ್ಪರ ಹಾರ ಬದಲಾಯಿಸಿಕೊಂಡು ಮಹಿಳೆಯರಿಬ್ಬರು ಮದುವೆಯಾಗಿದ್ದಾರೆ. ಮದುವೆಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಪರಿಣಾಮ ಈ ವಿಚಾರ ಊರಿನವರಿಗೆಲ್ಲ ಗೊತ್ತಾಗಿದೆ.

ಗರ್ಭಿಣಿ ಸ್ನೇಹಿತೆಗೆ ಸಿಂಧೂರ ಹಚ್ಚಿದ ಮತ್ತೊಂದು ಯುವತಿ ಗಂಡನ ರೀತಿಯಲ್ಲೇ ಯುವತಿಯನ್ನು ಸಂತೋಷವಾಗಿಡುವ ಭರವಸೆ ನೀಡಿದ್ದಾಳೆ. ಆಕೆಯ ಮಗುವನ್ನು ದತ್ತು ಪಡೆದುಕೊಂಡು ಒಬ್ಬ ಹುಡುಗ ತನ್ನ ಹೆಂಡತಿಯನ್ನು ಹೇಗೆ ನೋಡಿಕೊಳ್ಳುತ್ತಾನೋ ಹಾಗೆ ಅವಳನ್ನು ಕೂಡ ಗರ್ಭಿಣಿ ಮಹಿಳೆಯನ್ನು ಕಾಳಜಿಯಿಂದ ನೋಡಿಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದಾರೆ.ಮತ್ತೊಂದೆಡೆ, ಗರ್ಭಿಣಿ ಮಹಿಳೆ ತನ್ನ ಗಂಡ ತಾನು ಮತ್ತೊಬ್ಬನ ಜೊತೆಗೆ ಸಂಬಂಧ ಹೊಂದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರಿಂದ ನೊಂದ ಮಹಿಳೆ ಮತ್ತೊಬ್ಬ ಯುವತಿಯ ಜೊತೆಗೆ ಜೀವಿಸುವ ಅಭಿಲಾಷೆ ವ್ಯಕ್ತಪಡಿಸಿದ್ದಾಳೆ.

ಇದನ್ನೂ ಓದಿ: BPL ಕಾರ್ಡ್ ದಾರರಿಗೆ ಬಿಗ್ ಶಾಕ್-ಅನ್ನಭಾಗ್ಯದ ಅಕ್ಕಿ ಹಣಕ್ಕೆ ಬಿತ್ತು ಕತ್ತರಿ !! ಸರ್ಕಾರದಿಂದ ಮಹತ್ವದ ನಿರ್ಧಾರ !!