Home National Rajasthan: ಅವಳಿ ಮಕ್ಕಳಿಗೆ ಜನ್ಮ ನೀಡಿದ 58 ವರ್ಷದ ವೃದ್ಧ ಮಹಿಳೆ !

Rajasthan: ಅವಳಿ ಮಕ್ಕಳಿಗೆ ಜನ್ಮ ನೀಡಿದ 58 ವರ್ಷದ ವೃದ್ಧ ಮಹಿಳೆ !

Rajasthan

Hindu neighbor gifts plot of land

Hindu neighbour gifts land to Muslim journalist

Rajasthan: ಇಳಿ ವಯಸ್ಸಿನ ಮಹಿಳೆಯೊಬ್ಬರು ತಮ್ಮ 58 ನೇ ವಯಸ್ಸಿನಲ್ಲಿ ಅವಳಿ ಮಕ್ಕಳ ತಾಯಿಯಾಗಿದ್ದಾರೆ. ಆಸ್ಪತ್ರೆಯೊಂದರಲ್ಲಿ ಅವಳಿ ಗಂಡು-ಹೆಣ್ಣು ಮಕ್ಕಳಿಗೆ ಜನ್ಮ ನೀಡಿರುವ ಅಚ್ಚರಿಯ ಘಟನೆ ನಡೆದಿದೆ. ಹೆರಿಗೆಯ ನಂತರ ತಾಯಿ ಮತ್ತು ಮಕ್ಕಳು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ರಾಜಸ್ಥಾನದ (Rajasthan) ಬಿಕಾನೇರ್‌ನ 58 ವರ್ಷದ ಶೇರಾ ಬಹದ್ದೂರ್ ಅವರಿಗೆ ಮಕ್ಕಳಿರಲಿಲ್ಲ. ಕೊನೆಗೆ ಐವಿಎಫ್ ತಂತ್ರದ ಮೊರೆ ಹೋಗಿದ್ದರು. ಎರಡು ವರ್ಷಗಳ ಬಳಿಕ ಅವರು ಗರ್ಭಿಣಿಯಾಗಿದ್ದಾರೆ. ವೃದ್ಧಾಪ್ಯದಲ್ಲೂ ಮಕ್ಕಳನ್ನು ಹೊಂದಬೇಕೆಂಬ ಅವರ ಬಯಕೆ ಇದೀಗ ನಿಜ ಆಗಿದ್ದು ಅದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಇಷ್ಟು ವರ್ಷಗಳ ನಂತರ ಕುಟುಂಬದಲ್ಲಿ ಮಕ್ಕಳಿಲ್ಲದೆ ಇದ್ದರೂ, ಈಗ ಅವಳಿ ಮಗು ಜನಿಸಿರುವುದು ಇಡೀ ಕುಟುಂಬದಲ್ಲಿ ಸಂತಸ ಮನೆಮಾಡಿಸಿದೆ.

ಮಕ್ಕಳಿಲ್ಲದ 58 ವರ್ಷದ ಶೇರಾ ಬಹದ್ದೂರ್ ಅವರಿಗೆ ಬಿಕಾನೇರ್‌ನ ಆಸ್ಪತ್ರೆಯಲ್ಲಿ ಮೊದಲು ವೈದ್ಯಕೀಯ ತಪಾಸಣೆ ನಡೆಸಿ, ಬಳಿಕ ಹಾರ್ಮೋನುಗಳನ್ನು ಬ್ಯಾಲೆನ್ಸ್ ಮಾಡಲು ಒಂದು ವರ್ಷದ ಆರಂಭಿಕ ಚಿಕಿತ್ಸೆ ನೀಡಲಾಗಿದೆ. ತದನಂತರ ಆಕೆಗೆ ಐವಿಎಫ್ ಪ್ರಕ್ರಿಯೆ ಪ್ರಾರಂಭಿಸಲಾಯಿತು. ಇದೀಗ ಅವರು ಯಶಸ್ವಿಯಾಗಿದ್ದು, ಅವಳಿ ಮಕ್ಕಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ್ದಾರೆ. ಐವಿಎಫ್ ಸಹಾಯದಿಂದ 50 ವರ್ಷ ವಯಸ್ಸಿನಲ್ಲೂ ತಾಯಿಯಾಗಲು ಯಾವುದೇ ತೊಂದರೆ ಇಲ್ಲ ಎಂದು ಅವರಿಗೆ ಮೊದಲು ಮನವರಿಕೆ ಮಾಡಲಾಯಿತು. ಆದರೆ ಶೇರಾ ಅವರ ವಯಸ್ಸು ಮತ್ತು ಇಚ್ಛಾಶಕ್ತಿ ಎಲ್ಲರಿಗೂ ಅಚ್ಚರಿ ತಂದಿದೆ ಎಂದು ಡಾ. ಶೆಫಾಲಿ ದಧಿಚ್ ಶೇರಾರವರು ತಿಳಿಸಿದ್ದಾರೆ.

ಈ ಹಿಂದೆ 2019 ರಲ್ಲಿ ಆಂಧ್ರಪ್ರದೇಶದಲ್ಲಿ ಜಗತ್ತಿನ ಅತ್ಯಂತ ಹಿರಿಯ ಮಹಿಳೆ ಮಕ್ಕಳಿಗೆ ಜನ್ಮ ನೀಡಿದ್ದಳು. ಮಂಗಾಯಮ್ಮ ಯರಮಾಟಿ ತನ್ನ 74 ನೇ ವರ್ಷದಲ್ಲಿ ಆಕೆ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು.

ಇದನ್ನೂ ಓದಿ:  ತಡರಾತ್ರಿ ನಿವಾಸದಲ್ಲಿ ಬಿಜೆಪಿ ನಾಯಕರ ಸಭೆ : ಏಕರೂಪ ನಾಗರಿಕ ಸಂಹಿತೆ ಜಾರಿಗೆ ರೂಪುರೇಷೆ ?