Home National Indhira Gandhi: ಸರ್ಕಾರಿ ನೌಕರರು RSS ಸೇರಬಾರದೆಂದು ಇಂದಿರಾ ಗಾಂಧಿ ನಿಷೇಧ ಹೇರಿದ್ದು ಯಾಕೆ? 58...

Indhira Gandhi: ಸರ್ಕಾರಿ ನೌಕರರು RSS ಸೇರಬಾರದೆಂದು ಇಂದಿರಾ ಗಾಂಧಿ ನಿಷೇಧ ಹೇರಿದ್ದು ಯಾಕೆ? 58 ವರ್ಷಗಳ ಹಿಂದೆ ನಡೆದದ್ದೇನು?

Indhira Gandhi

Hindu neighbor gifts plot of land

Hindu neighbour gifts land to Muslim journalist

Indhira Gandhi: ಸರ್ಕಾರಿ ನೌಕರರು ರಾಷ್ಟ್ರೀಯ ಸ್ವಯಂಸೇವಕ ಸಂಘ(RSS)ದ ಚಟುವಟಿಕೆಯಲ್ಲಿ ಭಾಗಿಯಾಗುವುದನ್ನು ನಿಷೇಧಿಸಿ ಜಾರಿಗೊಳಿಸಲಾಗಿದ್ದ ಕಾನೂನನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ(Central Government) ತೆರವುಗೊಳಿಸಿ ಆದೇಶ ಹೊರಡಿಸಿದೆ. ಈ ಮೂಲಕ ಬರೋಬ್ಬರಿ 58 ವರ್ಷಗಳ ಕಾನೂನು ರದ್ದಾದಂತೆ ಆಗಿದೆ. ಆದರೆ ಈ ಬಗ್ಗೆ ಪರ ವಿರೋಧಗಳು ಜೋರಾಗಿಯೇ ನಡೆಯುತ್ತಿದೆ. ಇದರ ನಡುವೆ ಅಂದು ಇಂದಿರಾಗಾಂಧಿ(Indhira Gandhi) ಯಾಕೆ ಈ ಕಾನೂನನ್ನು ಜಾರಿಗೊಳಿಸಿದರು, ಇದರ ಉದ್ದೇಶ ಏನಾಗಿತ್ತು ಎಂಬ ಚರ್ಚೆಗಳು ನಡೆಯುತ್ತಿವೆ.

ಹೌದು, ಸರ್ಕಾರಿ ನೌಕರರು(Government Employees) ಆರೆಸ್ಸೆಸ್(RSS) ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಮತ್ತು ಅದರ ಜೊತೆ ಸಂಪರ್ಕ ಇಟ್ಟುಕೊಳ್ಳಬಾರದು ಎಂಬುದು 1966ರಲ್ಲಿ ಇಂದಿರಾ ಗಾಂಧಿ ಆಡಳಿತಾವಧಿಯಲ್ಲಿ ಮಾಡಲಾಗಿದ್ದ ಆದೇಶ. ಇದರ ಉದ್ದೇಶ ಏನೆಂದು ನೋಡ ಹೊರಟಾಗ ನಮಗೆ ಕಾಣಸಿಗುವುದು ಆ ಒಂದು ಘಟನೆ. ಏನದು?

1966ರಲ್ಲಿ ನಿಷೇಧ ಹೇರಿದ್ದೇಕೆ?
1966ರ ನ 7ರಂದು ಸಂಸತ್‌ ಮುಂಭಾಗದಲ್ಲಿ ಗೋಹತ್ಯೆ ವಿರುದ್ಧ ಭಾರೀ ದೊಡ್ಡ ಪ್ರತಿಭಟನೆ ನಡೆದಿತ್ತು. ಲಕ್ಷಾಂತರ ಜನರನ್ನು ಆರ್‌ಎಸ್‌ಎಸ್‌ – ಜನಸಂಘ ಸೇರಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ಆಯೋಜಿಸಿತ್ತು. ಈ ವೇಳೆ ನಡೆದ ಗೋಲಿಬಾರ್‌ನಲ್ಲಿ ಬಹಳಷ್ಟು ಜನ ಮೃತಪಟ್ಟಿದ್ದರು. ಈ ಪ್ರತಿಭಟಟನೆಯ ಬಳಿಕ ಇಂದಿರಾ ಗಾಂಧಿ, 1966ರ ನ 30ರಂದು ಸರ್ಕಾರಿ ಸಿಬ್ಬಂದಿ ಆರ್‌ಎಸ್‌ಎಸ್‌ ಸೇರದಂತೆ ನಿರ್ಬಂಧಿಸಿದರು.

ಆರ್‌ಎಸ್‌ಎಸ್‌ ಜೊತೆ ಜಮಾತೆ ಇಸ್ಲಾಮಿಯಾ ಸದಸ್ಯತ್ವಕ್ಕೂ ನಿರ್ಬಂಧ ಹೇರಲಾಗಿತ್ತು. ಈ ಸಂಘಗಳ ಸದಸ್ಯತ್ವದಿಂದಾಗಿ ಸರ್ಕಾರದ ಮೇಲೆ ಪ್ರಭಾವ ಬೀರಬಹುದು. ಸಾಮಾಜಿಕ ನ್ಯಾಯದ ಮೇಲೆ ಎರಡೂ ಸಿದ್ಧಾಂತಗಳಿಂದ ಪ್ರಭಾವ ಎಂದು ಹೇಳಿ ಸರ್ಕಾರ ನಿಷೇಧ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು.

ಆದರೆ ಇದೀಗ RSS ಚಟುವಟಿಕೆಗಳಲ್ಲಿ ಭಾಗವಹಿಸುವ ನಿಷೇಧ ವಾಪಸ್​ ಪಡೆದು ಕೇಂದ್ರ ಗೃಹ ಸಚಿವಾಲಯ ಮಹತ್ವದ ಆದೇಶ ಹೊರಡಿಸಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದು, ಕಾಂಗ್ರೆಸ್ ನಾಯಕರು ಅಧಿಕೃತ ಆದೇಶದ ಪ್ರತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 58 ವರ್ಷಗಳ ಹಿಂದೆ ನೀಡಲಾದ ‘ಅಸಂವಿಧಾನಿಕ’ ಸೂಚನೆಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಿಂಪಡೆದಿದೆ ಎಂದು ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ.

Aadhar Card: ಆಧಾರ್ ಕಾರ್ಡ್ ಕಳ್ಕೊಂಡಿದ್ದೀರಾ? ಏನಾದರೂ ಕೆಲಸಕ್ಕೆ ಮನೆಯಲ್ಲೇ ಮರೆತು ಬಂದಿದ್ದೀರಾ? ನಿಂತಲ್ಲೇ ಮೊಬೈಲ್ ನಲ್ಲಿ ಹೀಗೆ ಡೌನ್ಲೋಡ್ ಮಾಡಿ