Home National Droupadi Murmu: ರಾಷ್ಟ್ರಪತಿ ದ್ರೌಪದಿ ಮುರ್ಮು ಹೆಸರಲ್ಲಿ ವಿಡಿಯೋ ʻಡೀಪ್‌ ಫೇಕ್‌ʼ: ಎಫ್‌ಐಆರ್‌ ದಾಖಲು

Droupadi Murmu: ರಾಷ್ಟ್ರಪತಿ ದ್ರೌಪದಿ ಮುರ್ಮು ಹೆಸರಲ್ಲಿ ವಿಡಿಯೋ ʻಡೀಪ್‌ ಫೇಕ್‌ʼ: ಎಫ್‌ಐಆರ್‌ ದಾಖಲು

Hindu neighbor gifts plot of land

Hindu neighbour gifts land to Muslim journalist

Droupadi Murmu: ನಟ, ನಟಿಯರನ್ನ ಕಾಡುತ್ತಿದ್ದ ಡೀಪ್‌ ಫೇಕ್‌ (Deepfake) ಬಿಸಿ ಈಗ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೂ ತಟ್ಟಿದೆ. ಮುರ್ಮು ಅವರ ಹೆಸರಿನಲ್ಲಿ ‘ಡಿಪ್ ಫೇಕ್’ ವಿಡಿಯೋ ಮಾಡಿದ್ದ ವ್ಯಕ್ತಿ ಹಾಗೂ ಸಾಮಾಜಿಕ ಜಾಲತಾಣ ಖಾತೆಯ ವಿರುದ್ಧ ನಗರದ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಎಫ್‌ಐಆರ್‌ (FIR) ದಾಖಲಾಗಿದೆ.

ಸಾಮಾಜಿಕ ಜಾಲತಾಣದ ಉಸ್ತುವಾರಿ ಪಿಎಸ್ಐ ರಾಕೇಶ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಹೂಡಿಕೆ ಕುರಿತು ರಾಜ್ಯಸಭಾ ಸದಸ್ಯೆ ಸುಧಾ‌ ಮೂರ್ತಿ ಅವರ ಹೆಸರಿನಲ್ಲೂ ಡೀಪ್‌ ಫೇಕ್‌ ವಿಡಿಯೋವೊಂದನ್ನ ಹರಿಬಿಡಲಾಗಿತ್ತು.

ಹೌದು. ಮಹಾಲಕ್ಷ್ಮಿ ಪೊಲೀಸ್‌ ಠಾಣೆಯ (Mahalakshmi Layout Police) ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಡಿ.5ರಂದು ಫೇಸ್ಬುಕ್ ಖಾತೆಗಳನ್ನು ವಿಕ್ಷಣೆ ಮಾಡುತ್ತಿದ್ದಾಗ ‘ದೋನೆ ಡ್ರಿಮ್ಸ್’ ಖಾತೆಯಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಂದ್ರ ಸರ್ಕಾರದ ಹಣಕಾಸು ಯೋಜನೆಯನ್ನು ಉದ್ದೇಶಿಸಿ ಮಾತನಾಡಿರುವ ವಿಡಿಯೋ ಹರಿಬಿಟ್ಟಿದ್ದಾರೆ. ಅಲ್ಲದೇ ಪೇಜ್‌ನಲ್ಲಿ ಪೋಸ್ಟ್‌ ಮಾಡಲಾದ ವಿಡಿಯೋ ಕೆಳಗೆ ಲಿಂಕ್‌ವೊಂದನ್ನ ನೀಡಿದ್ದು, ಹಣ ಹೂಡಿಕೆ ಮಾಡಿ ಕೆಲಸ ಮಾಡದೆ ಮನೆಯಲ್ಲೇ ಕುಳಿತು ಹೆಚ್ಚಿನ ಲಾಭ ಪಡೆಯಬಹುದು ಎಂದು ಸುಳ್ಳು ಜಾಹೀರಾತು ನೀಡಿದ್ದಾರೆ.ಈ ಬಗ್ಗೆ ನಗರ ಪೊಲೀಸ್ ಆಯುಕ್ತರ ಗಮನಕ್ಕೆ ತಂದು ಪ್ರಾಥಮಿಕ ತನಿಖೆ ನಡೆಸಿದ ವೇಳೆ ರಾಷ್ಟ್ರಪತಿ ಅವರ ಭಾಷಣದ ವಿಡಿಯೋವನ್ನು ಎಐ ತಂತ್ರಜ್ಞಾನದ ಮೂಲಕ ಡೀಪ್‍ಫೇಕ್ ಮಾಡಲಾಗಿದೆ ಎಂದು ಗೊತ್ತಾಗಿದೆ. ಅಪರಿಚಿತ ಹಾಗೂ ಸಾಮಾಜಿಕ ಜಾಲತಾಣ ಖಾತೆದಾರನ ವಿರುದ್ಧ ಸುಳ್ಳು ಮಾಹಿತಿಗಳನ್ನು ಪ್ರಸಾರ ಮಾಡಿ, ಸಾರ್ವಜನಿಕರಿಂದ ಹಣ ಸುಲಿಗೆ ಹಾಗೂ ಆರ್ಥಿಕ ನಷ್ಟು ಉಂಟು ಮಾಡುತ್ತಿರುವ ಆಧಾರದ ಮೇಲೆ ಬಿಎನ್‍ಎಸ್ ಕಾಯ್ದೆ 2023, 318(4), 336(4) ಅಡಿ ಡಿ.12 ರಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.