Home Karnataka State Politics Updates CM Kejriwal Shock: AAP ತೊರೆದು BJP ಸೇರಲಿರುವ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್

CM Kejriwal Shock: AAP ತೊರೆದು BJP ಸೇರಲಿರುವ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್

Hindu neighbor gifts plot of land

Hindu neighbour gifts land to Muslim journalist

CM Kejriwal Shock: ದೆಹಲಿ ಮುಖ್ಯಮಂತ್ರಿ, ಎಎಪಿ ಸಂಸ್ಥಾಪಕ ಅರವಿಂದ್ ಕೇಜ್ರವಾಲ್ ಗೆ ಶಾಕ್ ಮೇಲೆ ಶಾಕ್ ತಗಲುತ್ತಿದೆ. ಅವರು ಇದೇ ಮಾರ್ಚ್ 4ರಂದು ರಾಜ್ಯಕ್ಕೆ ಆಗಮಿಸುತ್ತಿದ್ದು ಇದಕ್ಕೂ ಮೊದಲೆ ಅವರಿಗೆ ಶಾಕ್ ನೀಡಿರುವ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ (Bhaskar Rao) ಅವರು AAP ಗೆ ಬಾಯ್ ಬೈ ಹೇಳಿದ್ದಾರೆ.

ವೃತ್ತ ಐಪಿಎಸ್ ಅಧಿಕಾರಿ ನಿವೃತ್ತಿ ಪಡೆದು ಆಮ್ ಆದ್ಮಿ ಪಕ್ಷ ಸೇರಿದ್ದರು. ಈ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ನಾಳೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. ಇಂದು ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಅವರನ್ನು ಭೇಟಿ ಮಾಡಿದ ಭಾಸ್ಕರ್ ರಾವ್ ಅವರು ನಂತರ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಸೇರಿ ಹಲವು ನಾಯಕರ ಜೊತೆ ಅವರು ಮಾತುಕತೆ ನಡೆಸಿದರು.

ಭಾಸ್ಕರ್ ರಾವ್ ಅವರು AAP ಪಕ್ಷದಿಂದ ಬಸವನಗುಡಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ಹೊಂದಿದ್ದರು. ಅವರು ಅದಕ್ಕಾಗಿ ಸಿದ್ಧತೆಗಳನ್ನು ಸಹಾ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ದೇದೀರನ್ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಬಂದು ಎಲ್ಲರನ್ನೂ ಈ ಸುದ್ದಿ ಅಚ್ಚರಿಗೆ ನೂಕಿದೆ.

“ಎಎಪಿಯಲ್ಲಿ ಯಾವುದೇ ಬೆಳವಣಿಗೆ ಇರಲಿಲ್ಲ. ಕಳೆದ ವರ್ಷ ನಾನು ಪಕ್ಷ ಕಟ್ಟಲು ನನ್ನ ಕೈಲಾದಷ್ಟು ಪ್ರಯತ್ನಿಸಿದ್ದೆ. ನಾನು ಪ್ರಧಾನಿ ಮೋದಿಯವರಿಂದ ಸ್ಫೂರ್ತಿ ಪಡೆದು ಬಿಜೆಪಿ ಸೇರಲು ನಿರ್ಧರಿಸಿದ್ದೇನೆ. ಬಿಜೆಪಿಯಲ್ಲಿ ನಾನು ಯಾವ ಪಾತ್ರವನ್ನು ನಿರ್ವಹಿಸುತ್ತೇನೆ ಎಂದು ನನಗೆ ಖಚಿತವಿಲ್ಲ ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ.

ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರ ರಾಜೀನಾಮೆ ನಿರ್ಧಾರವು ಎಎಪಿಗೆ ದೊಡ್ಡ ಹೊಡೆತವಾಗಿದೆ. ಇದು ಮಾರ್ಚ್ 4 ರಂದು ಕರ್ನಾಟಕಕ್ಕೆ ಆಗಮಿಸಲಿರುವ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಹೆಚ್ಚಿನ ಮುಜುಗರವನ್ನು ಉಂಟುಮಾಡಲಿದೆ. ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಲ್ಲಿಗೆ ಬಂದಾಗ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ ಮತ್ತು ಕರ್ನಾಟಕ ಮತ್ತು ರಾಜ್ಯದ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸುವ ನಿರೀಕ್ಷೆಯಿದೆ.

ಏಪ್ರಿಲ್ 2022 ರಲ್ಲಿ ಭಾಸ್ಕರ್ ರಾವ್ ಎಎಪಿಗೆ ಸೇರಿದ ಒಂದು ವರ್ಷದ ನಂತರ ಈ ಬೆಳವಣಿಗೆಯಾಗಿದೆ. ಮಾಜಿ ಬೆಂಗಳೂರು ಪೊಲೀಸ್ ಆಯುಕ್ತರು ಪೊಲೀಸ್ ಸೇವೆಗೆ ರಾಜೀನಾಮೆ ನೀಡಿದ ತಕ್ಷಣ AAP ಪಕ್ಷಕ್ಕೆ ಸೇರಿದ್ದರು. ಅವರು ಕರ್ನಾಟಕದಲ್ಲಿ AAP ಯ ಪ್ರಮುಖ ಮುಖಗಳಲ್ಲಿ ಒಬ್ಬರು.