Home National Ayodhya: ಅಯೋಧ್ಯೆಗೆ ಬಾರದ ಭಕ್ತರು – ಒಮ್ಮೆಲೆ ಕುಗ್ಗಿದ ಸಂಖ್ಯೆ !!

Ayodhya: ಅಯೋಧ್ಯೆಗೆ ಬಾರದ ಭಕ್ತರು – ಒಮ್ಮೆಲೆ ಕುಗ್ಗಿದ ಸಂಖ್ಯೆ !!

Ayodhya

Hindu neighbor gifts plot of land

Hindu neighbour gifts land to Muslim journalist

Ayodhya: ಜನವರಿ ತಿಂಗಳಲ್ಲಿ ಶ್ರೀ ರಾಮ ಪ್ರಭುವಿನ ಜನ್ಮಸ್ಥಳದಲ್ಲಿ ಅಯೋಧ್ಯೆಯ(Ayodhya) ರಾಮ ಮಂದಿರ ಉದ್ಘಾಟನೆಯಾಗಿ ರಾಮಲಲ್ಲನ(Ramalalla) ಪ್ರಾಣ ಪ್ರತಿಷ್ಠೆಯೂ ನೆರವೇರಿದೆ. ಈ ಮೂಲಕ ಕೋಟ್ಯಾಂತರ ಹಿಂದೂಗಳ ಆಸೆ ಈಡೇರಿ ಎಲ್ಲರ ಮನ ತಣಿದಿದೆ. ಹೀಗಾಗಿ ಪ್ರಭು ಶ್ರೀರಾಮನನ್ನು ನೋಡಲು ಲಕ್ಷಾಂತರ ಭಕ್ತರು ಅಯೋಧ್ಯೆಗೆ ಆಗಮಿಸುತ್ತಿದ್ದರು. ಆದರೀಗ ಇದ್ದಕ್ಕಿದ್ದಂತೆ ಅಯೋಧ್ಯೆಗೆ ಬರುವ ಭಕ್ತರ ಸಂಖ್ಯೆಯಲ್ಲಿ ಕುಸಿತ ಕಂಡಿದೆ.

ಕಳೆದ ನಾಲ್ಕೈದು ತಿಂಗಳಿಂದ ಭಕ್ತರಿಂದ ತುಂಬಿ ತುಳುಕುತ್ತಿದ್ದ ಉತ್ತರ ಪ್ರದೇಶದ ಧಾರ್ಮಿಕ ನಗರ ಅಯೋಧ್ಯೆಯಲ್ಲಿನ ಸ್ಥಿತಿ ಈಗ ಬದಲಾಗಿದೆ. ಅಯೋಧ್ಯೆಗೆ ಭಕ್ತರೇ ಬಾರದಂತಾಗಿದ್ದಾರೆ. ಅಯೋಧ್ಯೆ ನಗರದ ರಸ್ತೆಗಳು ನಿರ್ಜನವಾಗಿವೆ. ಯಾಕೆಂದರೆ ಅಯೋಧ್ಯೆ ಇದೀಗ ರಣಬಿಸಿಲಿನಿಂದ ಭಣಗುಡುತ್ತಿದೆ.

ಹೌದು, ಹಗಲು ಹೊತ್ತಿನಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ ಇದೆ. ಜನರು ಹೊರಗೆ ಬರಲಾಗದಷ್ಟು ಬಿಸಿಲಿನ ಪ್ರಖರತೆಯಿದೆ. ಇದರಿಂದ ಜನ ಹೊರಗೆ ಕಾಲಿಡಲೂ ಕೂಡ ಹೆದರುತ್ತಿದ್ದಾರೆ. ಈ ನಾಲ್ಕು ತಿಂಗಳಲ್ಲಿ ಪ್ರವಾಸಿಗರ ಸಂಖ್ಯೆಯು ಗಣನೀಯವಾಗಿ ಇಳಿಮುಖವಾದಂತೆ ಅಯೋಧ್ಯೆಗೆ ಸಂಪರ್ಕ ಕಲ್ಪಿಸಲು ಆರಂಭಿಸಿದ್ದ ವಿಮಾನಗಳ(Failt) ಸಂಖ್ಯೆಯೂ ಕನಿಷ್ಠ ಶೇ 50ರಷ್ಟು ತಗ್ಗಿದೆ ಎನ್ನಲಾಗಿದೆ.

ಇದನ್ನೂ ಓದಿ: Karkala : ಸೈಜು ಕಲ್ಲು ಸಾಗಟದ ಟಿಪ್ಪರ್‌ ಲಾರಿ ಪಲ್ಟಿ ; ಇಬ್ಬರು ಕಾರ್ಮಿಕರು ಮೃತ

ಅಂದಹಾಗೆ ಅಯೋಧ್ಯೆಯ ರಾಮ ಮಂದಿರ(Rama mandir) ಬಿಜೆಪಿ(BJP) ಅತೀ ಪ್ರಬಲವಾದ ಚುನಾವಣಾ ಅಜೆಂಡಾವಾಗಿತ್ತು. ಕಳೆದ ಚುನಾವಣೆಯ ಪ್ರಣಾಳಿಕೆಯಲ್ಲಿ ರಾರಾಜಿಸುತ್ತಿದ್ದುದ್ದೇ ಮಂದಿರ ನಿರ್ಮಾಣದ ವಿಚಾರ. ಅಂತೆಯೇ ಚುನಾವಣೆ ಹೊತ್ತಲ್ಲೇ ಮೋದಿಯವರು ಮಂದಿರವನ್ನು ಉದ್ಘಾಟನೆ ಮಾಡಿ, ರಾಮಲಲ್ಲನನ್ನು ಪ್ರತಿಷ್ಟಾಪಿಸಿ, ಭಾವನಾತ್ಮಕವಾಗಿ ಮತಗಳನ್ನು ಸೆರೆಹಿಡಿದರು. ಇದು ದೊಡ್ಡ ಮಟ್ಟದಲ್ಲಿ ಬಿಜೆಪಿಗೆ ಲಾಭ ಎನ್ನಲಾಗಿತ್ತು. ಆದರೀಗ ರಾಮಮಂದಿರ ಚುನಾವಣೆಯಲ್ಲಿ ಅಷ್ಟು ಪ್ರಭಾವ ಬೀರಲಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ.

ಇದನ್ನೂ ಓದಿ: Beer Price: ಕಾಂಗ್ರೆಸ್ ಅಧಿಕಾರ ಹಿಡಿದು 1 ವರ್ಷ – ಬಿಯರ್ ಬೆಲೆಯಲ್ಲಿ 3 ಸಲ ಏರಿಕೆ !!