Home National Al-Qaeda: ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ ಹತ್ಯೆಗೆ ಪ್ರತೀಕಾರ: ಭಾರತದ ಮೇಲೆ ದಾಳಿ ನಡೆಸಲಾಗುವುದು ಎಂದ...

Al-Qaeda: ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ ಹತ್ಯೆಗೆ ಪ್ರತೀಕಾರ: ಭಾರತದ ಮೇಲೆ ದಾಳಿ ನಡೆಸಲಾಗುವುದು ಎಂದ ಅಲ್ ಖೈದಾ !

Al-Qaeda
Image source: Zee Business

Hindu neighbor gifts plot of land

Hindu neighbour gifts land to Muslim journalist

Al-Qaeda : ಗ್ಯಾಂಗ್‌ಸ್ಟರ್‌ ಮತ್ತು ರಾಜಕಾರಣಿ ಅತೀಕ್ ಅಹ್ಮದ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ನಿಷೇಧಿತ ಉಗ್ರಗಾಮಿ ಇಸ್ಲಾಮಿಕ್ ಸಂಘಟನೆ ಅಲ್-ಖೈದಾ (Al-Qaeda) ಬೆದರಿಕೆ ಹಾಕಿದೆ.

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಕಳೆದ ಶನಿವಾರ, ಏಪ್ರಿಲ್ 15ರಂದು ರಾಜಕಾರಣಿ, ಗ್ಯಾಂಗ್‌ಸ್ಟರ್‌ ಅತೀಕ್ ಅಹ್ಮದ್ ಮತ್ತು ಆತನ ಸಹೋದರನನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಹತ್ಯೆ ನಡೆಸಲಾಗಿತ್ತು. ಆಸ್ಪತ್ರೆಯ ಹೊರಗೆ ಸುದ್ದಿ ಮಾಧ್ಯಮಗಳು ಅತೀಕ್ ಅಹ್ಮದ್ ನನ್ನು ಪ್ರಶ್ನೆ ಕೇಳುತ್ತಿದ್ದಾಗ, ಟಿವಿಗಳಲ್ಲಿ ನೇರ ಪ್ರಸಾರ ಆಗುತ್ತಿದ್ದ ವೇಳೆ ಹಿಂದಿನಿಂದ ಬಂದ ಆಗಂತುಕರು ಟರ್ಕಿ ಪಿಸ್ತೂಲು ಎತ್ತಿ ಹತ್ಯೆ ಮಾಡಲಾಗಿದೆ.

ದೇಶ ವಿದೇಶದಾದ್ಯಂತ ಈದ್ ಅಲ್-ಫಿತರ್ ಆಚರಿಸುವ ಈ ಸಂದರ್ಭದಲ್ಲಿ, ಅತೀಕ್ ಅಹ್ಮದ್ ಮತ್ತು ಆತನ ಸಹೋದರನ ಹತ್ಯೆಗೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಅಲ್ ಖೈದಾ ಹೇಳಿಕೊಂಡಿದೆ. ಆ ಪ್ರಯುಕ್ತ ಭಾರತದ ಮೇಲೆ ದಾಳಿ ಮಾಡುವುದಾಗಿ ಅದು ಬೆದರಿಕೆ ಹಾಕಿದೆ.
ಈದ್ ಉಲ್-ಫಿತರ್ ಗೆ ಒಂದು ದಿನ ಮುಂಚೆ, ತನ್ನ ಸಂದೇಶವನ್ನು ಸಾರಿದೆ. ಅವರಿಬ್ಬರ ಹತ್ಯೆಗೆ ಪ್ರತೀಕಾರ ಸೇಡು ತೀರಿಸಿಕೊಳ್ಳುವುದಾಗಿ ಅದು ಬೆದರಿಕೆ ಹಾಕಿದೆ. ಅತೀಕ್ ಮತ್ತು ಅವನ ಸಹೋದರ ಅರ್ಷದ್ ನನ್ನು ಅದು ‘ಹುತಾತ್ಮರು’ ಎಂದು ಕರೆದಿದೆ.

ಈ ಸಂದೇಶವನ್ನು ತನ್ನ ಏಳು ಪುಟಗಳ ನಿಯತಕಾಲಿಕೆಯಲ್ಲಿ ಬಿಡುಗಡೆ ಮಾಡಲಾಗಿದ್ದು, ಸಂಘಟನೆಯ ಪ್ರಚಾರ ಮಾಧ್ಯಮ ವಿಭಾಗವಾದ ಅಸ್-ಸಾಹಬ್ ಬಿಡುಗಡೆ ಮಾಡಿದೆ. ಭಾರತೀಯ ಮುಸ್ಲಿಮರನ್ನು ‘ವಿಮೋಚನೆ’ ಮಾಡುವುದಾಗಿಯೂ ಭರವಸೆ ನೀಡಿತ್ತು. ಅದು ವೈಟ್ ಹೌಸ್ ಇರಲಿ, ದೆಹಲಿಯ ಪ್ರಧಾನಿಯ ನಿವಾಸ ಇರಲಿ ಅಥವಾ ರಾವಲ್ಪಿಂಡಿ ಭವನವೇ ಇರಲಿ, ಮುಸ್ಲಿಮರ ಮೇಲೆ ದೌರ್ಜನ್ ನಡೆಸಲು ನಾವು ಬಿಡುವುದಿಲ್ಲ. ಟೆಕ್ಸಾಸ್ ಅಥವಾ ತಿಹಾರ್ ಅಥವಾ ಅಡ್ಯಾಲ – ಯಾವುದೇ ಜೈಲುಗಳಲ್ಲಿರುವ ನಮ್ಮ ಖೈದಿಗಳನ್ನು ನಾವು ಬಿಡಿಸಿಕೊಳ್ಳುತ್ತೇವೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ ಅಲ್ ಖೈದಾ ಸಂಘಟನೆ.

ಈದ್ ಉಲ್-ಫಿತರ್ ಸಂದರ್ಭ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಅತಿಕ್ ಅಹಮದ್ ಪರವಾಗಿ ಘೋಷಣೆಯನ್ನು ಕೂಗಲಾಗಿದೆ. ನಿನ್ನೆ ನಡೆದ ಪ್ರಾರ್ಥನೆಯ ನಂತರ ಅತಿಕ್ ಪರ ಘೋಷಣೆ ಕೂಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅತಿಕ್ ಅಹಮದ್ ಮತ್ತು ಸಹೋದರನನ್ನು ಕೊಂದ ವ್ಯಕ್ತಿಗಳನ್ನು ಮಹಾತ್ಮ ಗಾಂಧಿಯನ್ನು ಕೊಂದ ಗೋಡ್ಸೆ ಅನುಯಾಯಿಗಳು ಎಂದು ಎ ಐ ಎಂ ಐ ಎಂ ಮುಖ್ಯಸ್ಥ ಓವೈಸಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ :Viral video: ಮೋದಿಯೇ ನಮ್ಮ ದೇವರೆಂದು ಮಳೆಯಲ್ಲಿ ಪ್ರಧಾನಿಯ ಕಟೌಟ್‌ ಒರೆಸುತ್ತಾ ನಿಂತ ಅಭಿಮಾನಿ! ವಿಡಿಯೋ ವೈರಲ್