Home National Government Employee: ಸರ್ಕಾರಿ ನೌಕರರಿಗೆ ಬೊಂಬಾಟ್ ಸುದ್ದಿ – ಮತ್ತೆ ನಿಮ್ಮ ವೇತನದಲ್ಲಿ ಭರ್ತಿ 9,000...

Government Employee: ಸರ್ಕಾರಿ ನೌಕರರಿಗೆ ಬೊಂಬಾಟ್ ಸುದ್ದಿ – ಮತ್ತೆ ನಿಮ್ಮ ವೇತನದಲ್ಲಿ ಭರ್ತಿ 9,000 ಏರಿಕೆ !!

Hindu neighbor gifts plot of land

Hindu neighbour gifts land to Muslim journalist

Government Employee: ಸರ್ಕಾರಿ ನೌಕರರಿಗೆ (Government Employee) ಬೊಂಬಾಟ್ ಸುದ್ದಿ ಇಲ್ಲಿದೆ. ಕೇಂದ್ರ ನೌಕರರ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆಯಾಗಿದೆ. ಸಚಿವ ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. ಈ ಮೂಲಕ ನೌಕರರ ತುಟ್ಟಿಭತ್ಯೆ ಶೇ.46ಕ್ಕೆ ತಲುಪಿದೆ. ಹೆಚ್ಚಿಸಲಾದ ತುಟ್ಟಿಭತ್ಯೆಯನ್ನು ಜುಲೈ 1, 2023 ರಿಂದ ಜಾರಿಗೊಳಿಸಲಾಗಿದೆ.

ಈ ಮಧ್ಯೆ ಮುಂದಿನ ತುಟ್ಟಿಭತ್ಯೆ ಏರಿಕೆ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ. ಕಾರಣವೇನಂದ್ರೆ, ಸದ್ಯ ಎರಡು ತಿಂಗಳ ಎಐಸಿಪಿಐ ಸೂಚ್ಯಂಕ ಹೊರಬಿದ್ದಿದೆ. ಇದರಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಆದರೆ ಜುಲೈನಿಂದ ಡಿಸೆಂಬರ್ ವರೆಗಿನ ಹಣದುಬ್ಬರ ಸೂಚ್ಯಂಕದ ಆಧಾರದ ಮೇಲೆ ಮುಂದಿನ ಡಿಎ ಎಷ್ಟು ಹೆಚ್ಚಾಗುತ್ತದೆ ಎನ್ನುವುದನ್ನು ನಿರ್ಧರಿಸುತ್ತದೆ.

2024 ರ ವೇಳೆಗೆ 50 ಪ್ರತಿಶತ ಡಿಎ ಎನ್ನುವುದೇ ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಮತ್ತೊಂದು ಕಾರಣ. ನಿಯಮಗಳ ಪ್ರಕಾರ ಒಮ್ಮೆ ತುಟ್ಟಿಭತ್ಯೆ 50% ತಲುಪಿದರೆ ಅದನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ. ನಂತರ 50% ಡಿಎ ಮೊತ್ತವನ್ನು ನೌಕರರ ಮೂಲ ವೇತನಕ್ಕೆ ಸೇರಿಸಲಾಗುತ್ತದೆ. 2024ರಲ್ಲಿ ಲೋಕಸಭೆ ಚುನಾವಣೆಯೂ ಬರಲಿದೆ. ಹೀಗಾಗಿ ಈ ವೇಳೆ ಸರ್ಕಾರ ದೊಡ್ಡ ಉಡುಗೊರೆ ನೀಡಬಹುದು ಎನ್ನಲಾಗುತ್ತಿದೆ. ಶೇ.50ರಷ್ಟು ತುಟ್ಟಿಭತ್ಯೆಯನ್ನು ನೌಕರರ ವೇತನದಲ್ಲಿ ಅಳವಡಿಸಿದರೆ ಕನಿಷ್ಠ 9,000 ರೂ. ವೇತನ ಹೆಚ್ಚಾಗಲಿದೆ. 7ನೇ ವೇತನ ಆಯೋಗದ ಪ್ರಕಾರ ಕೇಂದ್ರ ನೌಕರರ ತುಟ್ಟಿಭತ್ಯೆ ಶೇ.50 ದಾಟಿದರೆ ತುಟ್ಟಿಭತ್ಯೆ ಶೂನ್ಯಕ್ಕೆ ಇಳಿಯಲಿದೆ.¨