Home Latest Health Updates Kannada ಪುರುಷರೇ, ಮಹಿಳೆಯರ ಈ ಗುಟ್ಟು ನಿಮಗೆ ತಿಳಿದಿರಲಿ

ಪುರುಷರೇ, ಮಹಿಳೆಯರ ಈ ಗುಟ್ಟು ನಿಮಗೆ ತಿಳಿದಿರಲಿ

Hindu neighbor gifts plot of land

Hindu neighbour gifts land to Muslim journalist

ಮನುಷ್ಯನ ಮನಸ್ಸು ಚಂಚಲ. ಅದರಲ್ಲೂ ಮಹಿಳೆಯರ ಮನಸ್ಸು ಒಂದು ಕ್ಷಣ ಒಂಥರಾ ಇದ್ದರೆ, ಇನ್ನೊಂದು ಕ್ಷಣ ಬೇರೆ ಇರುತ್ತದೆ. ಹಾಗಾಗಿ ಮಹಿಳೆಯರ ಇಷ್ಟ ಕಷ್ಟಗಳನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಹಾಗಾಗಿ ಮಹಿಳೆ ಚಂಚಲೆ ಎಂಬ ಹೆಸರು ಪಡೆದಿದ್ದಾಳೆ. ಇದರ ಜೊತೆಗೆ ಒಂದು ಹೆಣ್ಣು, ತನ್ನ ಸಂಗಾತಿ ಯಾವ ರೀತಿ ಇರಬೇಕು ಎಂಬ ಒಂದು ಕಲ್ಪನೆ ಮಾಡುತ್ತಾಳೆ ಎಂಬುವುದು ಒಂದು ವಿಶೇಷ. ಯೌವನಾವಸ್ಥೆಯಲ್ಲಿ ಹೆಣ್ಮಕ್ಕಳಿಗೆ ತನ್ನ ಸಂಗಾತಿ ಬಗ್ಗೆ ಅವರದ್ದೇ ಆದ ಒಂದು ಆಸೆ ಆಕಾಂಕ್ಷೆಗಳ ಒಂದು ದೊಡ್ಡ ಪಟ್ಟಿನೇ ಇರುತ್ತದೆ.

ಹೆಣ್ಮಕ್ಕಳು ಮೊದಲಿಗೆ ಬೀಳುವುದು ಹುಡುಗರ ಕಣ್ಣಿಗೆ.
ಆತನ ನೋಟ ಸುಂದರವಾಗಿರಬೇಕೆಂಬುದು ಮಾತ್ರವಲ್ಲ ಅದ್ಭುತವಾದ ಹಾಸ್ಯ ಪ್ರಜ್ಞೆಯನ್ನು ಹೊಂದಿರಬೇಕು ಎಂಬುದು ಎಲ್ಲರಿಗೂ ಇಷ್ಟ. ಹುಡುಗಿಯರನ್ನು ಯಾವುದು ಇಷ್ಟ ಎಂಬುದು ಹುಡುಗರಿಗೆ ಗೊತ್ತಾದರೆ ಅವರನ್ನು ಸೆಳೆಯುವುದು ಸುಲಭ, ಆದರೆ ಕೆಲ ಹುಡುಗಿಯರ ಇಷ್ಟಗಳು ವಿಚಿತ್ರವಾಗಿರುತ್ತವೆ. ಅದನ್ನು ಕೆಲ ಹುಡುಗರು ಪ್ರಯತ್ನ ಪಟ್ಟರೂ ಪಡೆಯಲು ಸಾಧ್ಯವಿಲ್ಲ. ಇಂದು ನಾವು ಯಾವ ಹುಡುಗರು ಮಹಿಳೆಯರಿಗೆ ತುಂಬಾ ಇಷ್ಟವಾಗುತ್ತಾರೆ ಅಂತಾ ಹೇಳ್ತೇವೆ.

ಮಹಿಳೆಯರ ಕಣ್ಣುಗಳು ಮಾತ್ರವಲ್ಲ ಪುರುಷರ ಕಣ್ಣು ಕೂಡ ಆಕರ್ಷಣೀಯವಾಗಿರುತ್ತದೆ. ಯಾವ ಹುಡುಗರ ಕಣ್ಣು ಸುಂದರವಾಗಿರುತ್ತದೆಯೋ ಹಾಗೆಯೇ ರೆಪ್ಪೆಗಳು ಉದ್ದವಾಗಿರುತ್ತವೆಯೋ ಆ ಹುಡುಗರ ಕಡೆ ಹುಡುಗಿಯರ ಗಮನ ತಕ್ಷಣ ಹೋಗುತ್ತದೆ. ಬೇಡವೆಂದ್ರೂ ಆ ಹುಡುಗನ್ನು ಮತ್ತೆ ಮತ್ತೆ ನೋಡಬೇಕೆನ್ನುವ ಬಯಕೆಯಾಗುತ್ತದೆ. ಈ ಹುಡುಗ್ರು ಮಾತನಾಡ್ತಿದ್ದರೆ ಹುಡುಗಿಯರು ಅವರ ಕಣ್ಣುಗಳನ್ನು ನೋಡ್ತಿರುತ್ತಾರೆ. ಉದ್ದದ ರೆಪ್ಪೆ ಹೊಂದಿರುವ ಹುಡುಗರು, ಹುಡುಗಿಯರ ಕಣ್ಣಿಗೆ ಸೆಕ್ಸಿಯಾಗಿ ಕಾಣ್ತಾರೆ. ಹಾಗಾಗಿ ಹುಡುಗಿಯರನ್ನು ಬುಟ್ಟಿಗೆ ಬೀಳಿಸಿಕೊಳ್ಳಲು ಪ್ರೇಮ ಭರಿತ ಒಂದು ಲುಕ್ ಕೊಟ್ಟರೆ ಸಾಕು,ಅಲ್ಲೇ ಹುಡುಗಿಯರು ಬೀಳಬಹುದು.

ಹುಡುಗರ ಧ್ವನಿ ಗಡುಸಾಗಿದ್ದರೆ ಅಥವಾ ಆರ್ಡರ್ ಮಾಡುವಂತೆ ಇದ್ದರೆ ಅಂತವರತ್ರ ಹುಡುಗಿಯರು ಸೆಳೆಯುವುದು ಹೆಚ್ಚು. ಹುಡುಗರ ಆಳವಾದ ಧ್ವನಿ, ಹುಡುಗಿಯರನ್ನು ಹಿಡಿದಿಡುತ್ತದೆ. ಆ ಹುಡುಗನ ಮಾತನ್ನು ಮತ್ತೆ ಮತ್ತೆ ಕೇಳಲು ಹುಡುಗಿಯರು ಬಯಸ್ತಾರೆ. ಅಂತಹ ಧ್ವನಿಯೇ ಅವರನ್ನು ಮಂತ್ರಮುಗ್ಧವಾಗಿ ಮಾಡುತ್ತದೆ.

ಪ್ರತಿಯೊಬ್ಬರ ದೇಹದಿಂದಲೂ ಒಂದೊಂದು ರೀತಿಯ ಬೆವರಿನ ವಾಸನೆ ಬರುತ್ತದೆ. ಪುರುಷರಲ್ಲಿ ದೇಹದಿಂದ ಹೊರ ಬರುವ ವಾಸನೆ ಮಹಿಳೆಯರನ್ನು ತುಂಬಾ ಆಕರ್ಷಿಸುತ್ತದೆ. ಹೆಚ್ಚಿನ ಹುಡುಗಿಯರು ಸೆಂಟ್ ಇಷ್ಟಪಡ್ತಾರೆ. ಒಳ್ಳೆಯ ಸೆಂಟ್ ಪರಿಮಳ ಎಲ್ಲರನ್ನೂ ಆಕರ್ಷಿಸುತ್ತದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಕೆಲವೊಮ್ಮೆ ಪುರುಷರ ಬೆವರಿನ ಜೊತೆ ಸೆಂಟ್ ಸೇರಿ ಬೇರೆಯ ವಾಸನೆ ಬರಲು ಶುರುವಾಗುತ್ತದೆ. ಅನೇಕ ಮಹಿಳೆಯರಿಗೆ ಇದು ಇಷ್ಟವಾಗುತ್ತದೆ. ಹುಡುಗರ ಹತ್ತಿರ ಬರಲು ಇದೂ ಒಂದು ಕಾರಣ ಅಂತಾನೇ ಹೇಳಬಹುದು. ಹುಡುಗಿಯರನ್ನು ಸೆಳೆಯಬೇಕೆನ್ನುವ ಹುಡುಗ್ರು ಸೆಂಟ್ ಆಯ್ಕೆಯನ್ನು ಸರಿಯಾಗಿ ಮಾಡೋಕು.

ಆತ್ಮವಿಶ್ವಾಸದ ಮನುಷ್ಯ : ತನ್ನ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿರುವ ಮನುಷ್ಯನನ್ನು ಯಾರು ಇಷ್ಟಪಡುವುದಿಲ್ಲ ಹೇಳಿ. ಹಾಗಾಗಿಯೇ ಆತ್ಮವಿಶ್ವಾಸದಿಂದ ತುಂಬಿರುವ ಪುರುಷರು ಬೇಗನೆ ಮಹಿಳೆಯರ ಗಮನವನ್ನು ಸೆಳೆಯುತ್ತಾರೆ. ಆತ್ಮವಿಶ್ವಾಸ ಮತ್ತು ಪ್ರೀತಿಯ ಸ್ವಭಾವ ಹೊಂದಿರುವ ಪುರುಷರನ್ನು ಮಹಿಳೆಯರು ತುಂಬಾ ಇಷ್ಟಪಡುತ್ತಾರೆ. ಅವರನ್ನು ತನ್ನ ಸ್ನೇಹಿತರಾಗಿಸಿಕೊಳ್ಳಲು ಹಂಬಲಿಸುತ್ತಾರೆ