Home Breaking Entertainment News Kannada PUBG ಆನ್ಲೈನ್ ಗೇಮ್ ಹುಚ್ಚಿನಿಂದ 10 ಲಕ್ಷ ಕದ್ದ ಬಾಲಕ |ಮನೆಯವರು ವಿರೋಧಿಸಿದಕ್ಕೆ ಮನೆಯಿಂದಲೇ ಓಡಿ...

PUBG ಆನ್ಲೈನ್ ಗೇಮ್ ಹುಚ್ಚಿನಿಂದ 10 ಲಕ್ಷ ಕದ್ದ ಬಾಲಕ |ಮನೆಯವರು ವಿರೋಧಿಸಿದಕ್ಕೆ ಮನೆಯಿಂದಲೇ ಓಡಿ ಹೋದ !!

Hindu neighbor gifts plot of land

Hindu neighbour gifts land to Muslim journalist

ಇತ್ತೀಚಿನ ಯುವಕರಂತೂ ಆನ್ಲೈನ್ ಗೇಮ್ ಗಳಿಗೆ ಅಡಿಕ್ಟ್ ಆಗಿದ್ದು, ತಮ್ಮ ಜೀವವೇ ಅದರ ಮೇಲೆ ನಿಂತ ಹಾಗೆ ವರ್ತಿಸುತ್ತಾರೆ. ಹೌದು ಇಂತಹುದೇ ಒಂದು ಘಟನೆ ಮುಂಬೈನಲ್ಲಿ ನಡೆದಿದೆ.

PUBG ಆಟವನ್ನು ಆಡುತ್ತಿದ್ದ ಯುವಕನೋರ್ವ 10ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದು, ಇದರಿಂದ ಕೋಪಗೊಂಡ ಪೋಷಕರು ಈ ಆಟದಿಂದ ದೂರ ಇರುವಂತೆ ತಿಳಿಸಿದಕ್ಕೆ 16 ವರ್ಷದ ಬಾಲಕ ಜೋಗೇಶ್ವರಿ ಪ್ರದೇಶದ ತನ್ನ ಮನೆಯಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ.

ಬಾಲಕನ ತಂದೆ ಪುತ್ರ ಕಾಣೆಯಾದ ಬಗ್ಗೆ ಎಂಐಡಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ಮಾಹಿತಿ ನೀಡಿದ್ದಾರೆ.

ಅಂಧೇರಿ (ಪೂರ್ವ) ಮಹಾಕಾಳಿ ಕೆವ್ಸ್ ಪ್ರದೇಶದಲ್ಲಿ ತಪ್ಪಿಸಿಕೊಂಡ ಹುಡುಗನನ್ನು
ಪೊಲೀಸರು ಗುರುವಾರ ಮಧ್ಯಾಹ್ನ ಪತ್ತೆ ಹಚ್ಚಿ ಅವನನ್ನು ಹೆತ್ತವರಿಗೆ ಒಪ್ಪಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.

ಬುಧವಾರ ಸಂಜೆ ಹುಡುಗನ ತಂದೆ ಎಂಐಡಿಸಿ ಪೊಲೀಸ್ ಠಾಣೆಗೆ ಕಾಣೆಯಾದ ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅಪಹರಣ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ತನಿಖೆಯ ಸಮಯದಲ್ಲಿ, ಹುಡುಗ ಕಳೆದ ತಿಂಗಳಿನಿಂದ PUBG ವ್ಯಸನಿಯಾಗಿದ್ದಾನೆ ಮತ್ತು ತನ್ನ ಮೊಬೈಲ್ ಫೋನ್ ನಲ್ಲಿ ಆಟವಾಡುತ್ತಿದ್ದಾಗ ತನ್ನ ತಾಯಿಯ ಬ್ಯಾಂಕ್ ಖಾತೆಯಿಂದ 10 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದಾನೆ ಎಂದು ಹುಡುಗನ ತಂದೆ ಪೊಲೀಸರಿಗೆ ತಿಳಿಸಿದ್ದಾರೆ. ಆನ್ ಲೈನ್ ವಹಿವಾಟಿನ ಬಗ್ಗೆ ಪೋಷಕರಿಗೆ ತಿಳಿದಾಗ, ಅವರು ಅವನನ್ನು ಬೈದರು, ಇದರಿಂದ ನೊಂದ ಬಾಲಕ ಪತ್ರ ಬರೆದು ಮನೆಯಿಂದ ಹೊರಟುಹೋದನು ಎಂದು ಅಧಿಕಾರಿ ಹೇಳಿದರು.

ಪಬ್ಜಿ ಯಿಂದ ಹಲವು ಯುವಕರು ಆತ್ಮಹತ್ಯೆ
ಕಳೆದ ವರ್ಷ ಅಕ್ಟೋಬರ್ ನಲ್ಲಿ, ತಮಿಳುನಾಡಿನಲ್ಲಿ PUBG ವ್ಯಸನದಿಂದ ಬಳಲುತ್ತಿದ್ದ 14 ವರ್ಷದ ಬಾಲಕಿಯನ್ನು ಪೋಷಕರು ಆಡುವುದನ್ನು ನಿಲ್ಲಿಸಿದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ, ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ PUBG ಆಡಲು ಸಾಧ್ಯವಾಗದ ಕಾರಣ 21 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.